ಕೋರಂ ಕೊರತೆ: ಚುನಾವಣೆ ಮುಂದಕ್ಕೆ
ಧಾರವಾಡ: ಕೋರಂ ಭರ್ತಿಯಾಗದ ಕಾರಣ ಇಲ್ಲಿನ ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕಾಗಿ ಶುಕ್ರವಾರ ನಡೆಯಬೇಕಿದ್ದ ಚುನಾವಣೆಯನ್ನು ಜು. 24ಕ್ಕೆ ಮುಂದೂಡಲಾಯಿತು. ಸರ್ಕಾರದ ಆದೇಶದ ಪ್ರಕಾರ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಪ್ರವರ್ಗ ಅ ಎಂದು ಮೀಸಲಾತಿ ಹೊರಡಿಸಿತ್ತು. ತಾಲೂಕಿನ ಅಮ್ಮಿನಬಾವಿ ತಾಪಂ ಸದಸ್ಯೆ ಸುಮಿತ್ರಾಬಾಯಿ ಗೋಸಲ ಅಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕಾಗಿ ಗರಗ ಗ್ರಾಮದ ಮಹೇಶ ಎಲಿಗಾರ ಹಾಗೂ ನಿಗದಿ ಗ್ರಾಮದ ರಾಮಣ್ಣ ಘಾಟಿನ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 2ಕ್ಕೆ ಚುನಾವಣಾಧಿಕಾರಿ ಮಹೇಶ ಕರ್ಜಗಿ ತಾಪಂ ಸದಸ್ಯರ ಸಭೆ ಕರೆಯಲಾಗಿತ್ತು. ಆದರೆ ತಾಪಂನ 21 ಸದಸ್ಯರ ಪೈಕಿ ಏಳು ಜನರು ಮಾತ್ರ ಹಾಜರಾಗಿದ್ದರು. ಕೋರಂ ಭರ್ತಿಗೆ ಕನಿಷ್ಠ 11 ಸದಸ್ಯರ ಆವಶ್ಯಕತೆ ಇದ್ದು, ಕೋರಂ ಭರ್ತಿಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಚುನಾವಣೆಯನ್ನು ಜು. 24ಕ್ಕೆ ಮುಂದೂಡಿದರು. ಜು. 24ರಂದು ಕರೆಯಲಾದ ಸಭೆಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಸದಸ್ಯರ ಕೋರಂ ಇಲ್ಲದಿದ್ದರೂ ಕಾನೂನು ಪ್ರಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಘೋಷಣೆ ಮಾಡಲಾಗುವುದು. ಒಂದು ವೇಳೆ ಅಂದು ನಾಮಪತ್ರ ಸಲ್ಲಿಸಿರುವವರು ಹಿಂಪಡೆದರೆ ಸ್ಥಾಯಿ ಸಮಿತಿಯ ಅಧ್ಯಕ್ಷರೇ ಮುಂದಿನ ಮೀಸಲಾತಿ ಪ್ರಕಟವಾಗುವವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು. ತಾಪಂ ಇಒ ಎನ್.ಎನ್. ಗೌಡರ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

