ಗಣೇಶೋತ್ಸವ ತಿಳಿವಳಿಕೆ ಕಾರ್ಯಕ್ರಮ ಇಂದು
ಧಾರವಾಡ: ಇಲ್ಲಿನ ನಾಗರಿಕ ಪರಿಸರ ಸಮಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೆಇಇಎಸ್ ಸಂಸ್ಥೆ ಜಂಟಿಯಾಗಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ತಿಳಿವಳಿಕೆ ಕಾರ್ಯಕ್ರಮವನ್ನು ಜು. 22ರ ಬೆಳಗ್ಗೆ 10.30ಕ್ಕೆ ಕೆಪಿಇಎಸ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಹುಡೇದಮನಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ವಹಿಸುವರು. ಜಿಲ್ಲಾ ಪರಿಸರ ಅಧಿಕಾರಿ ವಿಜಯಕುಮಾರ ಕಡಕಭಾವಿ, ಕ್ರಿಯಾಶೀಲ ಗೆಳೆಯರು ಬಳಗದ ಮುಕುಂದ ಮೈಗೂರು, ಪರಿಸರಸ್ನೇಹಿ ಗಣಪತಿ ಕಲಾವಿದ ಮಂಜುನಾಥ ಹಿರೇಮಠ ಭಾಗವಹಿಸುವರು. ಡಾ. ಬಾಳಣ್ಣಾ ಶೀಗಿಹಳ್ಳಿ, ಮಲ್ಲಮ್ಮ ಪಾಟೀಲ ಭಾಗವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಅತ್ಯಾಚಾರ ಆರೋಪಿ ಸೆರೆ
ಧಾರವಾಡ: ಯುವತಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಉಪ ನಗರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇಲ್ಲಿನ ಹೊಯ್ಸಳನಗರ ನಿವಾಸಿ ಪವನ ದೇವೇಂದ್ರಪ್ಪ ಭಜಂತ್ರಿ ಎಂಬಾತ ಜು. 8ರಂದು ನಗರದ ಕೆಸಿಡಿ ಬಳಿ ನಿಂತಿದ್ದ ಯುವತಿಯನ್ನು ಬೈಕ್ ಮೇಲೆ ಹಳಿಯಾಳಕ್ಕೆ ಕರೆದೊಯ್ದು, ವಸತಿಗೃಹದಲ್ಲಿ ಅತ್ಯಾಚಾರ ಮಾಡಿ, ಪರಾರಿಯಾಗಿದ್ದ. ಈಗ ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಯುವತಿ ನಾಪತ್ತೆ: ದೂರು
ಹುಬ್ಬಳ್ಳಿ: ಕಾಲೇಜಿಗೆ ಹೋಗಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಹಳೆಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾರತಿನಗರದ ಐಶ್ವರ್ಯಾ ಕೋಸಗಿ (19) ನಾಪತ್ತೆಯಾಗಿರುವ ವಿದ್ಯಾರ್ಥಿನಿ. ಈ ಕುರಿತು ಪಾಲಕರು ಹಳೆಹುಬ್ಬಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.
ಜೂಜಾಟ: 8 ಜನರ ಸೆರೆ
ಹುಬ್ಬಳ್ಳಿ: ಜೂಜಾಟದಲ್ಲಿ ತೊಡಗಿದ್ದ ಎಂಟು ಜನರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ರಾಮಲಿಂಗೇಶ್ವರನಗರದ ಶಂಕರ ತಳವಾರ ಸೇರಿ ಎಂಟು ಜನರು ಹೊಸೂರ ಎಟಿಡಿಸಿ ಕಚೇರಿ ಬಳಿ ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳಿಂದ ರು. 13,810 ನಗದು ವಶ ಪಡಿಸಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

