ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಬಿಡುಗಡೆ
ಧಾರವಾಡ: ಇದೇ ಜುಲೈ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಧಾರವಾಡದ ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಎಲ್ಲ ಕಾಲೇಜುಗಳ ಪ್ರಾಚಾರ್ಯರು ಜು. 25ರಂದು ಫಲಿತಾಂಶದ ಶೀಟ್ ಪಡೆದು ಪ್ರಕಟಿಸಬೇಕಾಗಿ ತಿಳಿಸಿದ್ದಾರೆ.
ನಾಳೆ ಮಾಸಿಕ ಶಿವಾನುಭವ
ಧಾರವಾಡ: ಶಿವಶರಣ ಹಡಪದ ಅಪ್ಪಣ್ಣನವರ ಸ್ಮರಣೋತ್ಸವ ಮತ್ತು 72ನೇ ಮಾಸಿಕ ಶಿವಾನುಭವ ಗೋಷ್ಠಿ ತಾಲೂಕಿನ ಮನಗುಂಡಿ ಗ್ರಾಮದ ಚನ್ನಗಿರಿಯ ಬಸವ ಮಹಾಮನೆಯಲ್ಲಿ ಜು. 26ರಂದು ಬೆಳಗ್ಗೆ 11ಕ್ಕೆ ಜರುಗಲಿದೆ. ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಮತ್ತು ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸುತ್ತಾರೆ. ಮರಕಟ್ಟಿ ಶಿವಾನಂದಮಠದ ಶಿವಪ್ಪಜ್ಜ, ಗುರುಬಸವ ಮಹಾಮನೆಯ ಮಾತೆ ಸುಗುಣಾದೇವಿ, ಮಂಡಿಹಾಳ ಶಿವಾನಂದಮಠದ ಯಲ್ಲಾಲಿಂಗ ಮಹಾರಾಜರು ಭಾಗವಹಿಸುತ್ತಾರೆ. ಎಚ್.ಡಿ. ವೈದ್ಯ, ಪ್ರೊ. ನಿಜಲಿಂಗಪ್ಪ ಹೊಸಮನಿ, ಉಳವಪ್ಪ ಹಡಪದ, ಪ್ರಕಾಶ ಹೊಸಮನಿ ಇದ್ದರು. ದಾವಣಗೆರೆ ಬಸವ ಬಳಗದ ರುದ್ರಣ್ಣ ಉಪನ್ಯಾಸ ನೀಡಲಿದ್ದು, ನಿವೇದಿತಾ ಹೊಸಮನಿ ಸಂಗೀತ ಪ್ರಸ್ತುತಪಡಿಸುವರು.
27ಕ್ಕೆ ಉಚಿತ ಕಾರ್ಯಾಗಾರ
ಧಾರವಾಡ: ಪೊಲೀಸ್ ಪೇದೆ ದೈಹಿಕ ಪರೀಕ್ಷೆ ಪಾಸಾದ ವಿದ್ಯಾರ್ಥಿ-ವಿದ್ಯಾರ್ಥ್ಥಿನಿಯರಿಗೆ ಕ್ಲಾಸಿಕ್ ಎಜ್ಯುಕೇಶನ್‌ದ ಕ್ಲಾಸಿಕ್ ಕೆಎಎಸ್- ಐಎಎಸ್ ಸ್ಟಡಿ ಸರ್ಕಲ್‌ನಲ್ಲಿ ಜು. 27ರಂದು ಬೆಳಗ್ಗೆ 10ರಿಂದ ಉಚಿತವಾಗಿ ನಡೆಯಲಿದೆ. ಪೊಲೀಸ್ ಪೇದೆ ಲಿಖಿತ ಪರೀಕ್ಷೆಗೆ ಹೇಗೆ ತಯಾರಿ ಮ್ಕೊಳ್ಳಬೇಕೆಂದು ಪರಿಣತ ತಜ್ಞರಿಂದ ಪರೀಕ್ಷಾರ್ಥಿಗಳಿಗೆ ಸಮಗ್ರ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಲಕ್ಷ್ಮಣ ಉಪ್ಪಾರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9980552080 ಸಂಪರ್ಕಿಸಿ.
ಕವನ ಸಂಕಲನ ಬಿಡುಗಡೆ
ಹುಬ್ಬಳ್ಳಿ: ಪುಷ್ಪಲತಾ ಮಹಾಳಂಕ ಸೇರಿದಂತೆ ನಾಡಿನ ಇಪ್ಪತ್ತು ಉದಯೋನ್ಮುಖ ಕವಿಗಳ ಕವನ ಸಂಕಲನ 'ನೂರು ಕವನ' ಬಿಡುಗಡೆ ಸಮಾರಂಭ ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ಜು. 27ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕವನ ಸಂಕಲನ ಬಿಡುಗಡೆಯಾಗುತ್ತಿದೆ. ಪುಷ್ಪಲತಾ ಕವಿವಿ ಎಂಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದು, ಅನೇಕ ಕವನಗಳನ್ನು ಬರೆದಿದ್ದಾರಲ್ಲದೇ, ಕವನಗಳನ್ನು ವಾಚನ ಮಾಡಿದ್ದಾರೆ.
ಡಿಕ್ಕಿ: ಎಎಸ್‌ಐ ಸಾವು
ಹುಬ್ಬಳ್ಳಿ: ಎಸ್‌ಐಯೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ನಗರದ ಕಾರವಾರ ರಸ್ತೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ನಗರದ ಕಂಟ್ರೋಲ್ ರೂಮ್‌ನಲ್ಲಿ ಎಎಸ್‌ಐಯಾಗಿ ಸೇವೆ ಸಲ್ಲಿಸುತ್ತಿದ್ದ ಕಲ್ಲಪ್ಪ ಕೊಟಗಿ (55) ಎಂಬುವವರೇ ಮೃತಪಟ್ಟವರು. ಕಾರವಾರ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಗಾಯಗೊಂಡು ರಸ್ತೆಯ ಪಕ್ಕಕ್ಕೆ ಬಿದ್ದದ್ದನ್ನು ಯಾರೂ ಗಮನಿಸಿಲ್ಲ. ಇದೇ ವೇಳೆ ಡಿಸಿಪಿ ಹನುಮಂತರಾಯ ರೌಂಡ್ಸ್ ಮೇಲೆ ಹೊರಟಿದ್ದಾಗ ಗಾಯಗೊಂಡಿದ್ದ ಕಲ್ಲಪ್ಪ ಅವರನ್ನು ಕಂಡು ಆ್ಯಂಬುಲೆನ್ಸ್ ತರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಕಲ್ಲಪ್ಪ ತಮ್ಮದೇ ಇಲಾಖೆಯ ಅಧಿಕಾರಿ ಎಂಬುದು ಹನುಮಂತರಾಯ ಅವರಿಗೂ ಗೊತ್ತಾಗಲಿಲ್ಲ. ಚಿಕಿತ್ಸೆ ಫಲಿಸದೇ ಕಲ್ಲಪ್ಪ ಗುರುವಾರ ಕೊನೆಯುಸಿರೆಳೆದಿದ್ದಾರೆ. ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

