ಧಾರವಾಡ

ಲೈಂಗಿಕ ಹಗರಣದಲ್ಲಿ ಭಾರತಕ್ಕೆ 3ನೇ ಸ್ಥಾನ

Published On :

ಅಣ್ಣಿಗೇರಿ: ವಿಶ್ವದ ಲೈಂಗಿಕ ಹಗರಣದ ಸಂಖ್ಯೆಯನ್ನು ಅಭ್ಯಸಿಸಿದಾಗ ಭಾರತ 3ನೇ ಸ್ಥಾನ ಪಡೆದಿದೆ. ಧರ್ಮ ಸಂಸ್ಕೃತಿ ಪರಂಪರೆಯ ಭಾರತದ ದೇಶದಲ್ಲಿ 22,175 ಅತ್ಯಾಚಾರದ ಪ್ರಕರಣಗಳು ದಾಖಲಾಗಿರುವುದು ವಿಪರ್ಯಾಸದ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತ ಪ್ರೊ. ಎಸ್.ಎಚ್. ಹೂಗಾರ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಅಭಿಪ್ರಾಯ ತಿಳಿಸಿರುವ ಅವರು, ಆಧುನಿಕ ಜೀವನ ಶೈಲಿ, ಪಾಶ್ಚಾತ್ಯ ಜೀವನದ ಅನುಕರಣಿಯೇ ಇಂತಹ ಘಟನೆಗಳಿಗೆ ಕಾರಣ. ಸರ್ಕಾರ ಇದರ ನಿಯಂತ್ರಣಕ್ಕೆ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೂ ದಿನೇ ದಿನೆ ಲೈಂಗಿಕ ಹಗರಣಗಳು ಹೆಚ್ಚುತ್ತಿವೆ.
ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ನಿಯಂತ್ರಣ ಕಾಯ್ದೆಯೊಂದನ್ನು ಮಾಡಿದರೆ ಅದರ ದುರುಪಯೋಗಪಡಿಸುವ ಹುನ್ನಾರ ಬೆನ್ನಲ್ಲೇ ರೂಪುಗೊಳ್ಳುತ್ತದೆ. ಯಾವುದೇ ಕಾಯ್ದೆ ಮಾಡಿದರೂ ಅದಕ್ಕೆ ಬಲಿಪಶುವಾಗುವವರು ಬಡವರು ಹಾಗೂ ಅಸಹಾಯಕರು. ಅನೇಕರು ತಮ್ಮ ಶಕ್ತಿ ಹಾಗೂ ಹಣದ ಬಲದಿಂದ ಎಂತಹ ಕ್ರೌರ್ಯ ಮಾಡಿದರೂ ಕೊನೆಯಲ್ಲಿ ಮುಗ್ಧ ಬಡಜನರೇ ಬಲಿಪಶುಗಳಾಗುವುದು ಎಂದು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಮಾಡಿದವರಿಗೆ ಎಂತಹ ಶಿಕ್ಷೆ ಕೊಟ್ಟರೂ ಕಡಿಮೆ. ಅಪರಾಧಿಗಳಿಗೆ ಶಿಕ್ಷೆಯಾಗಬೇಕು ವಿನಹ ಅಪಾದಿತರಿಗಲ್ಲ. ಬಡವರ ಮಗಳು ಬಸುರಿಯಾಗಬಾರದು ಎಂಬ ಮಾತು ಸತ್ಯವಾಗಬಾರದು. ಎಂಬುದೇ ನಮ್ಮ ಕಳಕಳಿ. ಸಮಾಜದಲ್ಲಿ ಒಳ್ಳೆಯವರು ಇದ್ದ ಹಾಗೆ ಕೆಟ್ಟ ಜನಗಳೂ ಇರುತ್ತಾರೆ. ಅವರು ಯಾವುದೇ ಕೆಟ್ಟ ಕಾರ್ಯವನ್ನು ಮಾಡುವಲ್ಲಿ ಹಿಂಜರಿಯುವುದಿಲ್ಲ.
ಪೊಲೀಸ್ ಇಲಾಖೆಯವರು ದುಡ್ಡಿನ ಆಸೆಗೆ ಆತ್ಮವಂಚನೆ ಮಾಡಿಕೊಳ್ಳದೇ ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲಿ. ಇಂತಹ ಹಗರಣಗಳು ಹೆಚ್ಚಾಗಲು ಪೊಲೀಸ್ ಇಲಾಖೆ ನಿರ್ಲಕ್ಷ್ಯ ಹಾಗೂ ದುರ್ಜನರ ದಬ್ಬಾಳಿಕೆಯೇ ಕಾರಣ ಎಂದು ಹೂಗಾರ ಅಭಿಪ್ರಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.