ಧಾರವಾಡ

ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಲಾವಣಿ: ಬಡಿಗೇರ

Published On :

ಧಾರವಾಡ: ಇಲ್ಲಿನ ಅನ್ವೇಷಣಕೂಟ ಸಾಧನಕೇರಿ ಚೈತ್ರದ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಲಾವಣಿ ಮತ್ತು ಸ್ವಾತಂತ್ರ್ಯ ಸಂಗ್ರಾಮ ಎಂಬ ವಿಶೇಷ ಉಪನ್ಯಾಸದಲ್ಲಿ ಪ್ರಾಧ್ಯಾಪಕ ಡಾ. ಗುರುನಾಥ ಬಡಿಗೇರ ಮಾತನಾಡಿದರು. ಸಾಹಿತ್ಯಿಕ ನೆಲೆಯಲ್ಲಿ ದೇಶದ ಹೆಚ್ಚು ಜನಪ್ರಿಯತೆ ಪಡೆದ ಪ್ರಕಾರ ಲಾವಣಿ ಪ್ರಕಾರ. ಮೊದ ಮೊದಲು ಅದು ಶೃಂಗಾರ ಪ್ರಧಾನವಾಗಿ ಆಶ್ಲೀಲ ಬೈಗಳು ಲಾವಣಿಯಲ್ಲಿ ಸೇರಿಕೊಂಡಿರುತ್ತಿದ್ದವು ಎಂದರು. ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಎಂ. ಷಡಾಕ್ಷರಯ್ಯ, ಪ್ರೊ. ದುಷ್ಯಂತ ನಾಡಗೌಡ, ಎಚ್.ಎಸ್. ಭೈರನಟ್ಟಿ, ಎ.ಸಿ. ಮುಂಡರಗಿ, ಜಿ.ಬಿ. ಹೊಂಬಳ, ಜನಾರ್ದನ ನಾಯಕ, ಹರ್ಷ ಡಂಬಳ, ಸತ್ಯನಾರಾಯಣ ಹೆಗಡೆ, ಎಚ್‌ಕೆಎಲ್ ಪುಟ್ಟಣ್ಣ, ಶ್ರೀಧರ ಕುಲಕರ್ಣಿ, ತಾ.ಭ. ಚಹ್ವಾಣ, ಬಿ.ಪಿ. ಕಲ್ಯಾಣಶೆಟ್ಟಿ, ರಾಜೀವ್ ಪಾಟೀಲ ಕುಲಕರ್ಣಿ ಇತರರಿದ್ದರು.



ಸಾರಿಗೆ ಇಲಾಖೆ ಮಾಸಿಕ ಶಿಬಿರ ನಾಳೆ


ಧಾರವಾಡ: ಕಲಘಟಗಿ ತಾಲೂಕಿನ ಲೋಕೋಪಯೋಗಿ ಇಲಾಖೆಯ ದಾಸ್ತಿಕೊಪ್ಪ ನಿರೀಕ್ಷಣಾ ಮಂದಿರದಲ್ಲಿ ಇನ್ನು ಮುಂದೆ ಪ್ರತಿ ತಿಂಗಳ 28ರಂದು ಸಾರಿಗೆ ಇಲಾಖೆಯ ಮಾಸಿಕ ಶಿಬಿರ ನಡೆಸಲಾಗುವುದು. ಈ ದಿನ ಸರ್ಕಾರಿ ರಜೆ ಇದ್ದಲ್ಲಿ ಮರು ಕಾರ್ಯನಿರತ ದಿನಾಂಕದಂದು ಜರುಗಿಸಲಾಗುವುದು. ಯಾವತ್ತೂ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.