ಧಾರವಾಡ

ಪ್ರಾ. ಸಂಕನೂರ ನಿಮ್ಮ ಸಾಧನೆ ಏನಪ್ಪಾ?: ಬಸವರಾಜ ಹೊರಟ್ಟಿ

Published On :

ರೋಣ: ಬಸವರಾಜ ಹೊರಟ್ಟಿ ಸಾಧನೆ ಶೂನ್ಯ ಎಂದು ಹೇಳುತ್ತಿರಲ್ಲಾ ಪ್ರಾ. ಸಂಕನೂರ ನಿಮ್ಮ ಸಾಧನೆ ಏನಪ್ಪಾ? 2010ರ ನಂತರ ನೀವು ಮಾಡಿದ ಒಂದಾದರೂ ಸಾಧನೆ ಇದ್ದರೆ ತಿಳಿಸಿ. ಹೊಟ್ಟೆಕಿಚ್ಚಿನಿಂದ ಏನನ್ನಾದರೂ ಮಾತಾಡುವುದು ಸಮಂಜವಲ್ಲ ಎಂದು ವಿಪ ಸದಸ್ಯ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಪಟ್ಟಣದ ವಿ.ಎಫ್. ಪಾಟೀಲ ಪ್ರೌಢಶಾಲೆ ಶಿಕ್ಷಕರಲ್ಲಿ ಪಶ್ಚಿಮ ಪದವೀಧರ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ವಸಂತ ಹೊರಟ್ಟಿ ಪರ ಮತ ಯಾಚಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನನ್ನ ಸಾಧನೆ ಕುರಿತು ನಿಮಗೊಂದು ವೇದಿಕೆ ಕಲ್ಪಿಸುತ್ತೇವೆ. ಅಲ್ಲಿಗೆ ಬನ್ನಿ ಚರ್ಚಿಸೋಣ ಎಂದರೂ ನೀವೇಕೆ ಬರುತ್ತಿಲ್ಲ. ಪ್ರಾ. ಸಂಕನೂರರವರೇ.., ಬಿಜೆಪಿ ಸರ್ಕಾರವಿದ್ದಾಗ 48 ಸಾವಿರ ಶಿಕ್ಷಕರ ನೇಮಕ ಮಾಡಿದ್ದೇವೆ ಎಂದು ಹೇಳಿದ್ದಿರಿ. ನಿಜ ಹೇಳಿ ಬಿಜೆಪಿ 5 ವರ್ಷದ ಆಡಳಿತದಲ್ಲಿ ಒಂದೂ ಶಾಲೆ ತೆರೆದಿಲ್ಲ. ಒಬ್ಬ ಶಿಕ್ಷಕರ ನೇಮಕ ಮಾಡಿಲ್ಲ. ಸಂಕನೂರವರೆ ತಿಳಿದುಕೊಳ್ಳಿ, ಜೆಡಿಎಸ್ ಮತ್ತು ಬಿಜೆಪಿ ಸಮಿಶ್ರ ಸರ್ಕಾರವಿದ್ದಾಗ ನಾನು ಶಿಕ್ಷಣ ಸಚಿವನಾಗಿದ್ದೆ. ಆಗ ರಾಜ್ಯದಲ್ಲಿ 48,313 ಸರ್ಕಾರಿ ಶಾಲೆ ಶಿಕ್ಷಕರು, 7002 ಖಾಸಗಿ ಶಾಲೆ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದರು.
ಅನುದಾನಿತ ಶಾಲೆಗಳಿಗೆ ಸೈಕಲ್ ವಿತರಿಸುವ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಯಿತು. ರಾಜ್ಯದ ಶಾಲೆಗಳಲ್ಲಿ 5,673 ಗ್ರಂಥಾಲಯಗಳನ್ನು ಪ್ರಾರಂಭಿಸಲಾಯಿತು. ಅಲ್ಲದೇ ನಾನು ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಯಾಗಿದ್ದಾಗ ಮಂಗಳೂರು, ಬೆಳಗಾವಿ, ಗುಲ್ಬರ್ಗ ಮತ್ತು ಬೆಂಗಳೂರಿನಲ್ಲಿ ತಲಾ ಒಂದು ವಿಜ್ಞಾನ ಕೇಂದ್ರ ಸ್ಥಾಪಿಸಲಾಗಿದೆ. ಪ್ರೊ. ಸಂಕನೂರವರೇ ನಿಮ್ಮನ್ನು ವಿಜ್ಞಾನ ಆಕಾಡೆಮಿ ಸದಸ್ಯರನ್ನಾಗಿ ಮಾಡಿದ್ದು ನಾನೇ ಎಂಬುದು ನೀವು ಮರೆತಿರಬಹುದು ಎಂದು ವ್ಯಂಗ್ಯವಾಡಿದರು. ಸುಕಾಸುಮ್ಮನೆ ಏನೇನೋ ಆರೋಪ ಮಾಡುವುದು ಬಿಟ್ಟು ಒಂದೆಡೆ ಕುಳಿತು ಚರ್ಚಿಸೋಣ ಬನ್ನಿ ಎಂದು ಹೊರಟ್ಟಿ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಬಸವರಾಜ ಧಾರವಾಡ, ಜಿಲ್ಲಾ ಮಾಧ್ಯಮಿಕ ಶಾಲೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಚಿನ್ನೂರ, ಶಿವಶಂಕರ ಕಲ್ಲೂರ, ಎಸ್.ಬಿ. ತೋಟದ, ಎ.ಬಿ. ಹೊನ್ನವಾಡ, ವಿಜಯಕುಮಾರ ಹಿರೇಮಠ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.