ಧಾರವಾಡ

ಧಾರವಾಡದಲ್ಲಿ ಬಲಿಗಾಗಿ ಕಾದಿವೆ ಕೊಳವೆಬಾವಿ

Published On :

ಧಾರವಾಡ: ಬಿಜಾಪುರದ ನಾಗಠಾಣ ಬಳಿ ನಡೆದ ಅಕ್ಷತಾಳ ದುರ್ಘಟನೆ ಧಾರವಾಡ ನಗರದ ಪಾಲಕರನ್ನು ನಿದ್ದೆಗೆಡಿಸಿದೆ. ಕಾರಣ ಧಾರವಾಡದ ಹಲವೆಡೆ ತೆರೆದ ಕೊಳವೆಬಾವಿಗಳು ಮಕ್ಕಳ ಬಲಿಗಾಗಿ ಕಾಯುತ್ತಿವೆ. ಕೆಲಗೇರಿ-ಆಂಜನೇಯ ನಗರದಲ್ಲಿ ಮೂರು ಕೊಳವೆಬಾವಿಗಳು ತೆರದಿವೆ.
ನಾಗಠಾಣದ ಬಳಿ ಕೊಳವೆಬಾವಿಗೆ ಬಿದ್ದಿರುವ ಅಕ್ಷತಾಳನ್ನು ಉಳಿಸಿಕೊಳ್ಳುವ ಪ್ರಯತ್ನ ವಿಫಲವಾಗಿದೆ. ಉಪಯೋಗವಾಗದ ಕೊಳವೆಬಾವಿಗಳನ್ನು ಮುಚ್ಚುವ ಕುರಿತು ಈಗ ರಾಜ್ಯಾದ್ಯಂತ ಚರ್ಚೆ ನಡೆದಿದೆ. ಆದರೆ, ಧಾರವಾಡದ ಅನೇಕ ಕಡೆ ಹಲವು ಕೊಳವೆಬಾವಿಗಳು ಬಾಯ್ತೆರೆದು ಇವೆ.
ಆಂಜನೇಯನಗರದ ಬಡಾವಣೆಯಲ್ಲಿ ನೀರು ಬೀಳದ ಮೂರು ಕೊಳವೆಬಾವಿ ತೆರದು 10 ವರ್ಷಗಳಿಂದ ಹಾಗೆ ಬಿಡಲಾಗಿದೆ. ಈ ಕೊಳವೆಬಾವಿಗಳ ಸುತ್ತಮುತ್ತ ಅಂಗನವಾಡಿ, ಪ್ರೌಢಶಾಲೆ ಇವೆ. ಮಕ್ಕಳೆಲ್ಲಾ ಈ ಕೊಳವೆಬಾವಿಗಳ ಸುತ್ತ ಆಟವಾಡುತ್ತವೆ. ಈ ಕೊಳವೆಬಾವಿ ಜಲಮಂಡಳಿ ವ್ಯಾಪ್ತಿಯಲ್ಲಿದ್ದು, ಹಲವಾರು ವರ್ಷಗಳ ಹಿಂದೆಯೇ ಇವುಗಳ ಬಳಕೆ ನಿಲ್ಲಿಸಲಾಗಿದೆ ಎನ್ನುವುದು ಬಡಾವಣೆಯ ಶಂಕರ ಮುಗಳಿ ಅವರ ಹೇಳಿಕೆ.
ಒಂದು ಕೊಳವೆಬಾವಿ ಜಲಮಂಡಳಿ ಹೌಸ್‌ಪಂಪ್‌ನ ಒಳಗಡೆ ಇದೆ. ಈ ಕೊಳವೆಬಾವಿ ಮುಚ್ಚುವ ಪ್ರಯತ್ನ ಯಾರೂ ಮಾಡಿಲ್ಲ. ಈ ಕೊಳವೆಬಾವಿ ಮುಚ್ಚಲು ಸ್ಥಳೀಯ ಆಡಳಿತಗಳು ಕ್ರಮ ಕೈಗೊಳ್ಳಬೇಕಿದೆ. ಆಂಜನೇಯನಗರ ಮಾತ್ರವಲ್ಲ ಧಾರವಾಡದ ಇನ್ನೂ ಅನೇಕ ಕಡೆ ಇವೆ. ಪಾಲಿಕೆ, ಜಲಮಂಡಳಿ ಕೂಡಲೇ ತೆರೆದ ಕೊಳವೆಬಾವಿಗಳನ್ನು ಮುಚ್ಚುವ ಪ್ರಯತ್ನ ಮಾಡಬೇಕಾಗಿದೆ ಎನ್ನುತ್ತಾರೆ ಕೆಲಗೇರಿ ಮಂಜುನಾಥ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.