ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 22
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಭಾನುವಾರ ಧಾರವಾಡದಲ್ಲಿ ಒಂಭತ್ತು ಸಾಧಕರಿಗೆ ಗೌರವ ಪ್ರಶಸ್ತಿ, ಪುಸ್ತಕ ಮತ್ತು ಯುವ ಪುರಸ್ಕಾರ ಪ್ರದಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಲಾ ರು. 10 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡ ಗೌರವ ಪ್ರಶಸ್ತಿಯನ್ನು ಮೂಡಬಿದರೆಯ ಬಾಬುಗೌಡ ಮೈಂದೇರಿ, ಮಂಗಳೂರಿನ ಜೋನ್ ಎಂ.ಪೆರ್ಮನ್ನೂರು ಅವರಿಗೆ ಪ್ರದಾನ ಮಾಡಿದರು. ಅಂಕೋಲಾದ ಎನ್. ಬಾಲಕೃಷ್ಣ ಕಾಮತರ ಅನಾರೋಗ್ಯದ ಹಿನ್ನೆಲೆಯಲ್ಲಿ ಪರವಾಗಿ ಗಜಾನನ ಮಹಾಲೆಗೆ ನೀಡಿದರು. ರು. 5 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡ ಪುಸ್ತಕ್ ಪುರಸ್ಕಾರವನ್ನು ಮಂಗಳೂರಿನ ಎಡ್ವಿನ್ ಜೆ.ಎಫ್. ಡಿಸೋಜ, ಆಂಡ್ರ್ಯೂ ಡಿಕುನ್ಹಾ, ಫಾ. ಫ್ರಾನ್ಸಿಸ್ ರಾಡ್ರಿಗಸ್ ಅವರಿಗೆ ಪ್ರದಾನ ಮಾಡಲಾಯಿತು. ಜೋಸೆಫ್ ಸಿರಿಲ್ ಡಿಸೋಜ, ಶಾಂತಾ ಪಿ. ಕೊಲ್ಲೆ, ನಿವೇದಿತಾ ಸಾವಂತ ಯುವ ಪುರಸ್ಕಾರವನ್ನು ಪಡೆದರು.
ಉಮಾಶ್ರೀ ಮಾತನಾಡಿ, ಪ್ರಸ್ತಾವನೆ ಸಲ್ಲಿಸಿದರೆ, ಪ್ರಶಸ್ತಿ-ಪುರಸ್ಕಾರದ ಮೊತ್ತ ಹೆಚ್ಚಿಸಲು ಪ್ರಯತ್ನಿಸುತ್ತೇನೆ ಎಂದರು. ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೋ, ರಿಜಿಸ್ಟರ್ ಡಾ ಬಿ. ದೇವದಾಸ್ ಪೈ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಜೆ 4ಕ್ಕೆ ಆರಂಭವಾಗಬೇಕಿದ್ದ ಸಮಾರಂಭ ಸಚಿವರ ಆಗಮನ ತಡವಾದ ಕಾರಣ ರಾತ್ರಿ 7.30ರ ಬಳಿಕ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

