ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ
ಧಾರವಾಡ: ಧಾರವಾಡ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಮಾರ್ಚ್ 1 ರಿಂದ ಜಾರಿಯಾಗುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ರು. 2 ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರ ಏಪ್ರಿಲ್ ತಿಂಗಳಿಂದ 2014 ಜನವರಿ ತಿಂಗಳವರೆಗೆ ಒಕ್ಕೂಟವು ರು. 200 ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಈ ಲಾಭದ ಹಣವನ್ನು ಹಾಲು ಉತ್ಪಾದಕರಿಗೆ ಹಾಗೂ ದನಕರುಗಳ ಆರೋಗ್ಯ ಸುಧಾರಣೆ ವ್ಯಯಿಸಲಾಗುವುದು. ಒಕ್ಕೂಟದ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ರು. 2 ಪ್ರೋತ್ಸಾಹ ಧನ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಆಕಳು ಹಾಲು ಸದ್ಯ ರು. 20 ಇದ್ದು ಸರ್ಕಾರ ಈಗಾಗಲೇ ರು. 4 ಪ್ರೋತ್ಸಾಹಧನ ನೀಡುತ್ತಿದೆ. ಇನ್ನು ಮುಂದೆ ಒಕ್ಕೂಟ ರು. 2 ಹೆಚ್ಚಿನ ಪ್ರೋತ್ಸಾಹ ಧನ ಅಂದರೆ ರು. 26 ನೀಡಲಾಗುವುದು. ಹಾಗೆಯೇ ಎಮ್ಮೆ ಹಾಲಿಗೆ 24 ಇದ್ದು, ರು. 4 ಸರ್ಕಾರ ನೀಡುತ್ತಿದೆ. ಒಕ್ಕೂಟ ರು. 2 ಹೆಚ್ಚಿನ ಪ್ರೋತ್ಸಾಹ ನೀಡಿ ಒಟ್ಟು ಲೀಟರ್ಗೆ 0 30 ನೀಡಲಾಗುವುದು ಎಂದು ಅರಬಗೊಂಡ ತಿಳಿಸಿದರು. ಗ್ರಾಹಕರ ಬೇಡಿಕೆ ಈಡೇರಿಸಲು ಹಾಗೂ ಹಾಲು ಕೆಡದಂತೆ ಸಂಗ್ರಹಿಸಲು ಹುಬ್ಬಳ್ಳಿ, ಕಾರವಾರ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ತಲಾ 10 ಸಾವಿರ ಲೀಟರ್ ಹಾಲಿನ ಸಂಗ್ರಹಣಾ ಕೊಠಡಿ ಸ್ಥಾಪಿಸಲು ತೀರ್ಮಾನಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

