ಪರೀಕ್ಷಾ ಭಯಕ್ಕೆ ಧನಾತ್ಮಕ ಚಿಂತನೆ ಏಕೈಕ ಅಸ್ತ್ರ
ಧಾರವಾಡ: ಧನಾತ್ಮಕ ಚಿಂತನೆಯೊಂದೇ ಪರೀಕ್ಷಾ ಭಯ ಓಡಿಸುವುದಕ್ಕೆ ಇರುವ ಅಸ್ತ್ರ ಎಂದು ಜಿಲ್ಲಾ ಸಮಾನ ವಿಜ್ಞಾನ ಪರಿವಾರದ ಅಧ್ಯಕ್ಷ ವೀರಣ್ಣ ಒಡ್ಡಿನ ಅಭಿಪ್ರಾಯಪಟ್ಟರು. ತಾಲೂಕಿನ ಸೋಮಾಪುರದ ಭಾರತಿ ವಿಶ್ವ ಸೇವಾಸದನ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಾರ್ಷಿಕ ಪರೀಕ್ಷಾ ಪೂರ್ವಸಿದ್ಧತಾ ಮಾರ್ಗದರ್ಶನ ಸಭೆಯನ್ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರೀಕ್ಷೆಗೆ ಮಾನಸಿಕವಾಗಿ, ದೈಹಿಕವಾಗಿ ವಿದ್ಯಾರ್ಥಿಗಳು ಸಿದ್ಧರಾಗಬೇಕು. ಪ್ರಶಾಂತ ವಾತಾವರಣ ಓದಿಗೆ ಪೂರಕ ವಾತಾವರಣ ಸೃಷ್ಟಿಸುತ್ತದೆ. ಕಷ್ಟ ಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವುದು ಸೂಕ್ತ. ವಿದ್ಯಾರ್ಥಿಗಳು ಇಡೀ ಪುಸ್ತಕ ಓದುವ ಬದಲು ಕೆಲವು ಸಂಕೇತಗಳನ್ನ್ನು ಬಳಸಬೇಕು. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬಲ್ಲೆ ಎಂಬ ಅತಿ ಆತ್ಮವಿಶ್ವಾಸದ ಬದಲು ಯಾವ ಉತ್ತರ ಹೆಚ್ಚು ಸ್ಪಷ್ಟವಾಗಿ ಬರೆಯಬಲ್ಲೆ ಎನ್ನುವುದನ್ನು ಯೋಚಿಸಬೇಕು. ತಾರ್ಕಿಕ ಶಕ್ತಿ ಹೆಚ್ಚಿಸುವ ಪ್ರಶ್ನೆಗಳಿಗೆ ಉತ್ತರಿಸುವಾಗ ಜಾಗೃತಿ ವಹಿಸಬೇಕು ಎಂದು ಹೇಳಿದರು. ಶಿಕ್ಷಕ ಎಂ.ಐ. ಪಾಟೀಲ ಮಾತನಾಡಿ, ಟಿಪ್ಪಣಿ ಮಾಡಿಕೊಂಡು ಓದಿದ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ್ಯ ರೂಢಿಸಿಕೊಳ್ಳಬೇಕು.
ಪರೀಕ್ಷಾ ಸಮಯದಲ್ಲಿ ಊಟೋಪಚಾರದ ಬಗ್ಗೆ ಬಹಳ ಕಾಳಜಿ ವಹಿಸಬೇಕು. ಲಘು ವ್ಯಾಯಾಮ ಆರೋಗ್ಯಕರ ಚಿಂತನೆಗಳು ನಿಮ್ಮ ಲವಲವಿಕೆಯನ್ನ್ನು ದ್ವಿಗುಣಗೊಳಿಸುತ್ತವೆ ಎಂದು ತಿಳಿಸಿದರು. ಶಿಕ್ಷಕಿಯರಾದ ಗೀತಾ ರುಬ್ದಿ, ಶೋಭಾ ಕಾಳೆ, ಜಿ.ಎಂ. ನಿಡಗುಂದಿ, ನಿರೂಪಾ ಪಾಟೀಲ, ಪ್ರವೀಣ ಮಲ್ಲಾಡಿ, ಲಕ್ಷ್ಮೀ ಅಣ್ಣೀಗೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

