ಧಾರವಾಡ

ಧಾರವಾಡ: ಮೋದಿ, ಜೋಶಿ ವಿಕಾಸವಾಹಿನಿಗೆ ಚಾಲನೆ

Published On :

ಧಾರವಾಡ: ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಯವರ ಸಾಧನೆ ಬಿಂಬಿಸುವ ವಿಕಾಸ ವಾಹಿನಿ ರಥಕ್ಕೆ ಎತ್ತಿನಗುಡ್ಡದಲ್ಲಿ ಬಿಜೆಪಿ ಮುಖಂಡ ಶಂಕರ ಹಾರಿಕೊಪ್ಪ ಚಾಲನೆ ನೀಡಿದರು.
ನಗರದ ಕುಮಾರೇಶ್ವರ ನಗರ ಕೆ.ಎಚ್.ಬಿ. ಕಾಲೋನಿ, ಸಂಪಿಗೆನಗರ ಹೆಡ್‌ಕ್ವಾರ್ಟರ್ಸ್‌ಗಳಲ್ಲಿ ಸಂಚರಿಸಿ ಮೋದಿ ಹಾಗೂ ಪ್ರಹ್ಲಾದ ಜೋಶಿ ಅವರ ಸಾಧನೆಗಳನ್ನ್ನು ಜನತೆಯ ಮುಂದೆ ತೆರೆದಿಡುವ ಕಾರ್ಯ ನಡೆಯಿತು.
ವಿಕಾಸವಾಹಿನಿಗೆ ಚಾಲನೆ ನೀಡಿದ ಶಂಕರ ಹಾರಿಕೊಪ್ಪ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡುವುದು ಪ್ರತಿಯೊಬ್ಬ ಭಾರತೀಯನ ಗುರಿಯಾಗಬೇಕು. ಅದಕ್ಕಾಗಿ ನಾವು  ಪ್ರಹ್ಲಾದ ಜೋಶಿ ಅವರನ್ನು ಆಯ್ಕೆ ಮಾಡಬೇಕಿದೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ಭಾರತ ಸಮೃದ್ಧಿಯ ನಾಡಾಗುವುದರಲ್ಲಿ ಸಂಶಯವೇ ಇಲ್ಲ ಎಂದರು. ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ರುದ್ರಾಪುರ, ಪಾಲಿಕೆಯ ಮಾಜಿ ಸದಸ್ಯ ವೀರನಗೌಡ ಪಾಟೀಲ, ಸ್ಲಂ ಮೋರ್ಚಾ ಅಧ್ಯಕ್ಷ ಎಂ.ಬಿ. ನಡಟ್ಟಿ, ಈರಪ್ಪ ನೇಗಿನಗಾಳ, ಮಲ್ಲಿಕಾರ್ಜುನ ಪಾಟೀಲ, ಯಲ್ಲಪ್ಪ ಕೆಲಗೇರಿ, ಸುರೇಶ ವಕ್ಕುಂದ, ಉಳವಪ್ಪ ವಾಳದ, ಬಸವರಾಜ ಗೌಡರ, ಬಡೇಸಾಬ ಕುಂಬಾರಕೊಪ್ಪ, ಲಕ್ಷ್ಮಣ ಗರಗ, ರಾಜು ಹೀರೇಕುಂಬಿ, ರಾಜು ಕುರಬರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.