ಧಾರವಾಡ

ರು. 14 ಸಾವಿರ ಕೋಟಿ ವಹಿವಾಟು ದಾಟಿದ ಕೆವಿಜಿ ಬ್ಯಾಂಕ್

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 4
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ರು. 14 ಸಾವಿರ ಕೋಟಿ ವಹಿವಾಟು ದಾಟಿ ಮುನ್ನ್ನಡೆಯುವ ಮೂಲಕ ಇನ್ನ್ನೊಂದು ಮೈಲಿಗಲ್ಲು ದಾಟಿದೆ ಎಂದು ಬ್ಯಾಂಕಿನ ಧಾರವಾಡ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಎ. ನೀರಲಗಿ ಹೇಳಿದರು.
ನಗರದ ಬ್ಯಾಂಕಿನ ಗಾಂಧಿ ಚೌಕ್ ಶಾಖೆಯ ಗ್ರಾಹಕರ ಕೂಟವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ದೈನಂದಿನ ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ಪ್ರಭಾವಶಾಲಿಯಾಗಿ ತೊಡಗಿಸಿಕೊಂಡಿರುವುದರಿಂದ ಉತ್ತಮ ಪ್ರಗತ್ನಿ ಕಾಣುವಂತಾಗಿದೆ ಎಂದರು. ನಿರಂತರ ಠೇವಣಿ (ಪಿಗ್ಮಿ) ಆಧರಿಸಿ ಸ್ವ ಉದ್ಯೋಗ ಕೈಗೊಳ್ಳಲು ತಕ್ಷಣಕ್ಕೆ ರು. 50 ಸಾವಿರ ಒದಗಿಸುವ ಬ್ಯಾಂಕಿನ ಜನಶಕ್ತಿ ಯೋಜನೆ ಸ್ವ ಉದ್ಯೋಗಿಗಳಲ್ಲಿ ಸಂಚಲನ ಉಂಟುಮಾಡಿದ್ದು, ಬ್ಯಾಂಕು ಯೋಜನೆ ಪ್ರಾರಂಭಗೊಂಡ ಒಂದೇ ತಿಂಗಳಿನಲ್ಲಿ 2,850 ಫಲಾನುಭವಿಗಳಿಗೆ ರು. 14 ಕೋಟಿಗೂ ಮಿಕ್ಕಿ ಸಾಲ ವಿತರಿಸಿದೆ. ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಬ್ಯಾಂಕು ಎಂಎಸ್‌ಎಂ ಇ ರಂಗಕ್ಕೆ ಆದ್ಯತೆ ನೀಡುತ್ತಲಿದೆ. ಅವಳಿ ನಗರದಲ್ಲಿ ವಿಶೇಷವಾಗಿ ನೌಕರ ವರ್ಗ ತಮ್ಮ ಕನಸಿನ ಮನೆ ಹೊಂದುವ ನಿಟ್ಟಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ರು. 25 ಲಕ್ಷ ಗಳವರೆಗಿನ ಮನೆ ಸಾಲದ ಮೇಲಿನ ಬಡ್ಡಿದರ ತಗ್ಗಿಸಿದ್ದು, ಅದೀಗ ಕೇವಲ 10.25 ಪ್ರತಿಶತವಾಗಿದೆ. ದೊಡ್ಡ ಪ್ರಮಾಣದ ಸಾಲದ ಪ್ರಸ್ತಾವನೆಗಳನ್ನ್ನು ಸ್ಪರ್ಧಾತ್ಮಕ ಬಡ್ದಿದರದಲ್ಲಿ ಸ್ವೀಕರಿಸಲು ಬ್ಯಾಂಕು ಸಿದ್ಧವಿದೆ ಎಂದು  ಹೇಳಿದರು.
ಬ್ಯಾಂಕಿನ ಧಾರವಾಡ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 60 ಶಾಖೆಗಳಿದ್ದು, ಅವುಗಳ ವಹಿವಾಟು ರು. 2,500 ಕೋಟಿ ದಾಟಿದೆ. ಧಾರವಾಡ ಅಂಜುಮನ್ ಸಂಕೀರ್ಣದಲ್ಲಿರುವ ಮುಖ್ಯ ಶಾಖೆಯ ವಹಿವಾಟು ರು. 400 ಕೋಟಿ ತಲುಪಿದ್ದು, ಪ್ರಧಾನ ಕಚೇರಿ ಶಾಖೆ ಮತ್ತು ಮುಮ್ಮಿಗಟ್ಟಿ ಶಾಖೆ ರು. 100 ಕೋಟಿ ವಹಿವಾಟು ತಲುಪುವ ಮೂಲಕ ಉತ್ತಮ ಸಾಧನೆ ತೋರಿವೆ ಎಂದು ತಿಳಿಸಿದರು.  ಅತಿಥಿಯಾಗಿದ್ದ ಉಳವಿ ಚನ್ನಬಸಪ್ಪ ದೇವಸ್ಥಾನ ಟ್ರಸ್ಟ್ ಸಮಿತಿ ಕಾರ್ಯದರ್ಶಿ ಬಿ.ಸಿ. ಪೂಜಾರ ಹಾಗೂ ಬ್ಯಾಂಕಿನ ಮುಖ್ಯ ಪ್ರಬಂಧಕ ಎಂ.ಸಿ. ಪಾಟೀಲ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯೆ ಸರೋಜಿನಿ ಪಾಟೀಲ, ಉದ್ಯಮಿ ಎಸ್.ವೈ. ಶಿಂಧೆ, ವಿ.ಎಸ್. ಅರಳೆಲಿಮಠ, ವಿ.ಎಂ. ಹುಲಗುಜ್ಜಿ ಮತ್ತಿತರರಿದ್ದರು. ಗಾಂಧಿ ಚೌಕ್ ಶಾಖಾ ಪ್ರಬಂಧಕ ಕೆ.ಎಸ್. ಜಡಿ ಪ್ರಾಸ್ತಾವಿಕ ಮಾತನಾಡಿದರು. ಬ್ಯಾಂಕಿನ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ನಿರೂಪಿಸಿದರು. ಆರ್.ಎಸ್. ಹುಲ್ಲೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.