ಪರೀಕ್ಷೆ ಶುಲ್ಕ ವಿನಾಯಿತಿಗಾಗಿ ಪ್ರತಿಭಟನೆ
ಧಾರವಾಡ: ಶುಲ್ಕ ವಿನಾಯತಿ ಇಲ್ಲದೇ ಸಂಪೂರ್ಣ ಪರೀಕ್ಷೆ ಶುಲ್ಕವನ್ನು ಭರಿಸಬೇಕು ಎನ್ನುವ ಕಾಲೇಜಿನ ನಿರ್ಧಾರದ ವಿರುದ್ಧ ಎಐಡಿಎಸ್ಓ ಹಾಗೂ ಎಐಡಿವೈಓ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ನಗರದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಸಂಘಟನೆ ಮುಖಂಡರೊಂದಿಗೆ ಪ್ರಾಚಾರ್ಯರು ಮಾತುಕತೆ ನಡೆಸಿದರು. ನಗರದ ಬಹುತೇಕ ಪದವಿ ಕಾಲೇಜುಗಳಲ್ಲಿ ಶುಲ್ಕ ವಿನಾಯತಿ ನೀಡಿದ್ದು ಆದರೆ, ಈ ಕಾಲೇಜಿನಲ್ಲಿ ಮಾತ್ರ ಸಂಪೂರ್ಣ ಶುಲ್ಕ ಪಡೆಯಲಾಗುತ್ತಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ನಂತರ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಬಳಿಗೆ ತೆರಳಿದರು. ಜಂಟಿ ನಿರ್ದೇಶಕ ಡಾ. ದೇವಾನಂದ ಗಾಂವಕರ, ಪ್ರಾಚಾರ್ಯರು ಮತ್ತು ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸುಮಾರು ಹೊತ್ತು ಚರ್ಚಿಸಿದ ನಂತರ ವಿದ್ಯಾರ್ಥಿಗಳ ಬೇಡಿಕೆ ಮನ್ನಿಸಿ ಶುಲ್ಕ ವಿನಾಯತಿ ಘೋಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

