ನಾಳೆ ಉಪನ್ಯಾಸ
ಧಾರವಾಡ: ಇಲ್ಲಿಯ ಹಳಿಯಾಳ ರಸ್ತೆಯ ಪರಿಸರ ಭವನದಲ್ಲಿ ಮಾ.16 ರ ಸಂಜೆ 4 ಕ್ಕೆ ವಿಶ್ವ ಲಿಂಗಾಯತ ಬಸವ ಮಹಾಸಭಾ ಘಟಕ, ಬಸವತತ್ವ ಪ್ರಸಾರ ಸಂಸ್ಥೆ, ಬಸವ ದಳ, ಬಸವ ಕೇಂದ್ರ ಹಾಗೂ ಈಶ್ವರ ಸಾಣಿಕೊಪ್ಪ ವಚನೋತ್ಸವ ಸಂಸ್ಥೆಗಳ ವತಿಯಿಂದ ಲಿಂಗಾಯತ ಧರ್ಮದ ಕುರಿತು ಉಪನ್ಯಾಸ ಜರುಗಲಿದೆ. ಉಪನ್ಯಾಸವನ್ನು ಗುಲ್ಬರ್ಗದ ಪ್ರೊ. ಸಂಜಯ ಮಾಕಳ ಹಾಗೂ ಪ್ರಭುಲಿಂಗ ಮಹಾಗಾಂವಕರ ನಡೆಸಿಕೊಡಲಿದ್ದಾರೆ. ಈ ಉಪನ್ಯಾಸದಲ್ಲಿ ಲಿಂಗಾಯತ ಧರ್ಮ ಹಾಗೂ ವೀರಶೈವ ಧರ್ಮಗಳೆರಡು ಬೇರೆ ಬೇರೆ ಎಂಬ ವಿಷಯ ಚರ್ಚೆಯಾಗಲಿದೆ. ಅತಿಥಿಗಳಾಗಿ ಡಾ.ಎಸ್.ಆರ್. ಗುಂಜಾಳ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.
ಉಚಿತ ಆರೋಗ್ಯ ತಿಳಿವಳಿಕೆ
ಹುಬ್ಬಳ್ಳಿ: ನಗರದ ಡಾ. ಕೆ.ಎಸ್. ಶರ್ಮಾ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ಮಾ. 16ರಂದು ಉಚಿತ ಆರೋಗ್ಯ ತಿಳಿವಳಿಕೆ ಶಿಬಿರ ಆಯೋಜಿಸಲಾಗಿದೆ. ಗೋಕುಲ ರಸ್ತೆಯ ಭಾಷ್ಯಾಚಾರ್ಯ ಸಭಾಭವನದಲ್ಲಿ (ವಿಶ್ವಶ್ರಮ ಚೇತನ ಸಂಕೀರ್ಣ) ಅಂದು ಬೆಳಗ್ಗೆ 11ಕ್ಕೆ ಮಧುಮೇಹ ಕುರಿತು ತಿಳಿವಳಿಕೆ ನೀಡಲಾಗುವುದು. ಪ್ರಕೃತಿ ಚಿಕಿತ್ಸಾ ತಜ್ಞ ಡಾ. ವೆಳಿಯಪ್ಪನ್ ವಿಶೇಷ ಉಪನ್ಯಾಸ ನೀಡುವರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಅಧ್ಯಕ್ಷತೆ ವಹಿಸುವರು. ಮಾಹಿತಿಗೆ ಮೊಸಂ-97312 53498 ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

