ಧಾರವಾಡ

ಹಾನಗಲ್ ಫೌಂಡೇಶನ್‌ನಿಂದ ಬೇಂದ್ರೆ ಭಾವಗೀತ ಗಾಯನ

Published On :

ಧಾರವಾಡ: ಇಲ್ಲಿಯ ಸಾಧನಕೇರಿಯ ಬೇಂದ್ರೆ ಭವನದಲ್ಲಿ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ  ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಷನ್ ಕಲಾವಿದರಿಂದ ಇತ್ತೀಚೆಗೆ  ಬೇಂದ್ರೆ ಭಾವಗೀತ ಗಾಯನ ಕಾರ್ಯಕ್ರಮ ಜರುಗಿತು.
ಗಾಯಕಿಯರಾದ ಪಲ್ಲವಿ ಖಾನಪೇಟ, ವಿಜಯಲಕ್ಷೀ ಕೋಟಿ, ನಂದಾ ಕುಲಕರ್ಣಿ, ರತ್ನಾ ಗೋನಾಳ ಇವರು ಪ್ರಸ್ತುತ ಪಡಿಸಿದ ವರಕವಿ ಅಂಬಿಕಾತನಯದತ್ತರ ರಚನೆಗಳಾದ ನಾನು ಸರಸಿ ನೀನು ಅರಸ,  ಮುಗಿಲ ಮಾರಿಗೆ ರಾಗರತಿಯಾ, ಕಬ್ಬಿನ ಗಣಿ ಡೊಂಕ, ಜಾತ್ರಿ ಎನಿಸಿತ್ತ,  ಹಿಂದ ನೋಡದ ಗೆಳತಿ, ಗಮಗಮ ಗಮಾಡಸ್ತಾವ ಮಲ್ಲಿಗಿ, ಯುಗಯುಗಾದಿ ಕಳೆದರೂ, ಹರಗೋಣ ಬಾ ಹೊಲವ, ಕುರುಡು ಕಾಂಚಾಣ, ಬಾರೋ ಸಾಧನಕೇರಿಗೆ ಮುಂತಾದ ಜನಪ್ರಿಯ ಗೀತೆಗಳು ಶ್ರೋತೃಗಳ ಮನತಣಿಸಿದವು.
ತಬಲಾದಲ್ಲಿ ಅನಿಲ ಮೇತ್ರಿ, ವಾಯಲಿನ್‌ದಲ್ಲಿ ವಾದಿರಾಜ ನಿಂಬರಗಿ ಮತ್ತು ಢೋಲಕ್‌ದಲ್ಲಿ ಸ್ಟೀಫನ್  ಗುಂಜಾಳ ಕಲಾವಿದರಿಗೆ ಸಾಥ್ ನೀಡಿದರು. ಎ.ಜಿ. ಸಬರದ, ಜಿ.ಬಿ. ಹೊಂಬಳ, ಎಂ.ಕೆ. ದೇಶಪಾಂಡೆ, ಜಯತೀರ್ಥ ಜಹಗೀರದಾರ, ಎಂ.ವಿ. ಹೊಸಮನಿ, ಅನಂತ ದೇಶಪಾಂಡೆ, ಜನಾರ್ಧನ ನಾಯಕ, ಪದ್ಮಾ ಬೇಂದ್ರೆ, ರಂಜನಿ ಕೆರೂರ, ವಂದನಾ ದೇಶಪಾಂಡೆ, ನಾಗರತ್ನಾ ದೇಸಾಯಿ, ಜಯಂತಿ ಕರಿ ಇದ್ದರು. ಟ್ರಸ್ಟ್ ಸದಸ್ಯ ನರಸಿಂಹ ಪರಾಂಜಪೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.