ತಲೆಪೆಟ್ಟಿನಿಂದ ನಿತ್ಯ 200 ಜನ ಸಾವು: ಡಾ. ಕ್ರಾಂತಿಕಿರಣ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 19
ರಸ್ತೆ ಅಪಘಾತ ಸೇರಿದಂತೆ ವಿವಿಧ ಅವಘಡಗಳಲ್ಲಿ ತಲೆ ಬೀಳುವ ಪೆಟ್ಟಿನಿಂದ ಭಾರತದಲ್ಲಿ ಪ್ರತಿ 5 ನಿಮಿಷಕ್ಕೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ದೇಶದಲ್ಲಿ ಪ್ರತಿದಿನ ಅಂದಾಜು 200 ಜನರು ತಲೆಗೆ ಬೀಳುವ ಪೆಟ್ಟಿನಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಬಾಲಾಜಿ ಆಸ್ಪತ್ರೆ ಅಧ್ಯಕ್ಷ ಡಾ. ಕ್ರಾಂತಿಕಿರಣ್ ಹೇಳಿದರು.
ಬುಧವಾರ, ಬಾಲಾಜಿ ನರರೋಗ ವಿಜ್ಞಾನ ಸಂಸ್ಥೆ ಮತ್ತು ಅಪಘಾತ ಚಿಕಿತ್ಸಾ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ತಲೆಪೆಟ್ಟು ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂಭವಿಸುವ ಅಪಘಾತಗಳಲ್ಲಿ ತಲೆಗೆ ಪೆಟ್ಟು ಮಾಡಿಕೊಳ್ಳುವವರಲ್ಲಿ ಶೇ. 80ಕ್ಕಿಂತ ಹೆಚ್ಚು ಜನರಲ್ಲಿ ನಲವತ್ತು ವಯಸ್ಸಿನೊಳಗಿನವರೇ ಆಗಿದ್ದಾರೆ. ತಲೆಗೆ ಪೆಟ್ಟು ಬೀಳುವಂತಹ ಶೇ. 50ರಷ್ಟು ಪ್ರಕರಣಗಳಲ್ಲಿ ಮೆದುಳಿಗೆ ಹಾನಿಯಾಗುತ್ತಿದೆ. ಅಪಘಾತದಲ್ಲಿ ಮೆದುಳಿಗೆ ಬೀಳುವ ಪೆಟ್ಟಿನಿಂದ ಶೇ. 20ರಷ್ಟು ಸಾವು ಸಂಭವಿಸಿದರೆ, ಶೇ. 50ರಷ್ಟು ಜನರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಾರೆ ಎಂದು ಹೇಳಿದರು. ಸಹಾಯಕ ಪೊಲೀಸ್ ಕಮಿಷನರ್ ಎ. ಆರ್. ಬಡಿಗೇರ ಮಾತನಾಡಿ, ಅಪಘಾತ ಪ್ರಕರಣಗಳಲ್ಲಿ ಹೆಚ್ಚಾಗಿ ತಲೆಗೆ ಪೆಟ್ಟು ಬೀಳುವ ಸಾಧ್ಯತೆಗಳಿದ್ದು, ಟ್ರಾಫಿಕ್ ಪೊಲೀಸರು ರೂಪಿಸಿರುವ ಸಂಚಾರಿ ನಿಯಮಗಳನ್ನು ಸಾರ್ವಜನಿಕರು ತಪ್ಪದೇ ಪಾಲಿಸಬೇಕು. ಸಂಚಾರಿ ನಿಯಮಗಳಿರುವುದು ಜನರಿಗಾಗಿ ವಿನಃ ಸರ್ಕಾರಿ ಇಲಾಖೆಗಾಗಿ ಅಲ್ಲ ಎಂದು ಹೇಳಿದರು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರು ಚಾಲಕರು ವಾಹನ ಚಾಲನೆ ವೇಳೆ ಸೀಟ್ ಬೇಲ್ಟ್ ಧರಿಸುವುದರಿಂದ ಸಂಭವಿಸುವ ಅವಘಡದಲ್ಲಿ ಗಾಯಗೊಳ್ಳುವುದನ್ನು ತಪ್ಪಿಸಬಹುದು ಎಂದು ಹೇಳಿದರು. ನಗರದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಅಪಘಾತ ಸಂಭವಿಸುವಿಕೆ ಮತ್ತು ಅದರಿಂದ ತಲೆಗೆ ಬೀಳುವ ಪೆಟ್ಟುಗಳ ಕುರಿತು ಪ್ರಾತ್ಯಕ್ಷಿಕೆ ತೋರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

