ಆರ್ಪಿಎಫ್ ಪೇದೆ ಮೇಲೆ ಹಲ್ಲೆ: ಪ್ರತಿಭಟನೆ
ಹುಬ್ಬಳ್ಳಿ: ನೈಋತ್ಯ ರೇಲ್ವೆ ಮಜ್ದೂರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎ. ಎಂ. ಡಿಕ್ರೂಜ್ ಮತ್ತವರ ಬೆಂಬಲಿಗರು ಕರ್ತವ್ಯ ನಿರತ ಆರ್ಪಿಎಫ್ ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಲ್ ಇಂಡಿಯಾ ಆರ್ಪಿಎಫ್ ಅಸೋಸಿಯೇಶನ್ ವತಿಯಿಂದ ಇಲ್ಲಿನ ಡಿಆರ್ಎಂ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಎ.ಎಂ. ಡಿಕ್ರೂಜ್ ಮತ್ತವರ ಬೆಂಬಲಿಗರು ಮಾ. 19ರಂದು ಇಲ್ಲಿನ ರೇಲ್ವೆ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸುವ ನೆಪದಲ್ಲಿ ವೈದ್ಯರ ಚೇಂಬರ್ಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕರ್ತವ್ಯ ನಿರತರಾಗಿದ್ದ ಪೇದೆ ಚನ್ನಪ್ಪ ಕೊಪ್ಪದ ಘಟನಾವಳಿಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದರು. ಇದನ್ನು ಗಮನಿಸಿದ ಡಿಕ್ರೂಜ್ ಪೇದೆಯ ಮೇಲೆ ಹಲ್ಲೆ ನಡೆಸಿದ್ದಾರೆ, ಅದಾದ ಬಳಿಕ ಡಿಕ್ರೂಜ್ ಬೆಂಬಲಿಗರೂ ಕೊಪ್ಪದ ಮೇಲೆ ಹಲ್ಲೆ ಮಾಡಿದ್ದಾರೆ.
ಮಜ್ದೂರ್ ಯೂನಿಯನ್ ಹೆಸರು ಹೇಳಿಕೊಂಡು ಹತ್ತು ಹಲವು ಬಾರಿ ಡಿಕ್ರೂಜ್ ಮತ್ತವರ ಬೆಂಬಲಿಗರು ಆರ್ಪಿಎಫ್ ಪೇದೆಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಅಲ್ಲದೇ ರೇಲ್ವೆ ಅಧಿಕಾರಿಗಳಿಗೂ ಕಿರುಕುಳ ಕೊಡುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೇ ಕಪ್ಪು ಬಟ್ಟೆ ಧರಿಸಿ ಕೆಲ ಕಾಲ ಡಿಆರ್ಎಂ ಕಚೇರಿ ಎದುರು ಧರಣಿ ನಡೆಸಿದರು. ಇದೇ ವೇಳೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಡಿಕ್ರೂಜ್ ವಿರುದ್ಧ ಹಲ್ಲೆಗೊಳಗಾದ ಪೇದೆ ಕೊಪ್ಪದ ದೂರು ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಡಿ. ಎನ್. ರಮನ್, ಆರ್. ಎನ್. ದೊಡ್ಡಮನಿ, ಚನ್ನಪ್ಪ ಕೊಪ್ಪದ ಸೇರಿದಂತೆ ನೂರಾರು ಪೇದೆಗಳು ಇದ್ದರು.
ಮಜ್ದೂರ್ ಯೂನಿಯನ್ ಹೆಸರು ಹೇಳಿ ಅನೇಕ ಬಾರಿ ಡಿಕ್ರೂಜ್ ಮತ್ತವರ ಬೆಂಬಲಿಗರು ಆರ್ಪಿಎಫ್ ಪೇದೆಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ರೇಲ್ವೆ ಅಧಿಕಾರಿಗಳಿಗೂ ಕಿರುಕುಳ ಕೊಡುತ್ತಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಸೇವೆಯಿಂದ ವಜಾಗೊಳಿಸಿ.
- ಪ್ರತಿಭಟನಾಕಾರರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

