ಧಾರವಾಡ

ಕುಡಿವ ನೀರಿಗೆ ರಾಷ್ಟ್ರಪತಿ ಮೊರೆ

Published On :

ಧಾರವಾಡ:  ಶುದ್ಧ ಕುಡಿಯುವ ನೀರನ್ನು ಸಮಾಜದ ಎಲ್ಲ ಜನತೆಗೂ ಸರ್ಕಾರ ಒದಗಿಸಬೇಕೆಂದು ಕಳಸಾ ಬಂಡೂರಿ ಹೋರಾಟ ಕೇಂದ್ರ ಸಮಿತಿಯಿಂದ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದರು.
ಇಂದು ಎಲ್ಲೆಡೆ ವಿಶ್ವ ಜಲ ದಿನಾಚರಣೆ ಆಚರಿಸುತ್ತಿದ್ದರೂ ಧಾರವಾಡ ಜಿಲ್ಲೆಯ ಹಲವು ಭಾಗಗಳು ಶುದ್ಧ ನೀರಿನಿಂದ ವಂಚಿತವಾಗಿವೆ. ಕುಡಿಯುವ ನೀರಿನ ಮಿತವ್ಯಯದ ಬಗ್ಗೆ ಪ್ರಚಾರ ಮಾಡುವ ಸರ್ಕಾರ ಜನತೆಗೆ ಶುದ್ಧ ಹಾಗೂ ಪ್ಲೋರೈಡ್ ಮುಕ್ತ ನೀರನ್ನು ಒದಗಿಸುವ ಕುರಿತು ಚಿಂತಿಸುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯನ್ನು ಖಾಸಗಿವರಿಗೆ ವಹಿಸುತ್ತಿರುವುದು ಖಂಡನೀಯ.  ಬರಪ್ರದೇಶದ ಬರ ನೀಗಿಸಲು ಕಳಸಾ ಬಂಡೂರಿ ನಾಲಾ ಜೋಡಣೆ ತುಂಬಾ ಅವಶ್ಯ. ಆದ್ದರಿಂದ ಸರ್ಕಾರ ಕೂಡಲೇ ಈ ಬಗ್ಗೆ ಚಿಂತಿಸಬೇಕೆಂದು  ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಠಲ ಕಮ್ಮಾರ, ವಿಜಯಕುಮಾರ ಕುಲಕರ್ಣಿ, ವಿಕಾಸ ಸೊಪ್ಪಿನ, ಎಂ.ಬಿ. ಕಟ್ಟಿ, ಶಿವಾನಂದ ಲದ್ದಿ, ಪ್ರವೀಣ ಹಲಗತ್ತಿ, ಸುರೇಶ ಹಡಪದ, ರಾಜಣ್ಣ ಕೊರವಿ, ಶೋಭಾ ಚಲವಾದಿ, ಕಲ್ಲಪ್ಪ ಉಳ್ಳಾಗಡ್ಡಿ ಇದ್ದರು.

ವಿಮಾ ಹಣ ಪಾವತಿಗೆ ಜಿಲ್ಲಾ ಗ್ರಾಹಕರ ವೇದಿಕೆ ಆದೇಶ
ಧಾರವಾಡ: ಧಾರವಾಡ ಮೆ. ನೆಕ್ಟರ್ ಬೆವರೇಜಸ್ ತಂಪು ಪಾನೀಯ ತಯಾರಿಕಾ ಕಂಪನಿಗೆ ರು. 4 ಲಕ್ಷ ವಿಮಾ ಹಣ, ಪರಿಹಾರ ಸೇರಿದಂತೆ ಮತ್ತಿತರ ವೆಚ್ಚಗಳನ್ನು ಸಂದಾಯ ಮಾಡುವಂತೆ ನ್ಯಾಶನಲ್ ಇನ್ಸೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.  ನಿರಂತರ ವಿದ್ಯುತ್ ಪೂರೈಕೆಗೆ ಅನುಕೂಲವಾಗಲೆಂಬ ಉದ್ದೇಶದಿಂದ ನೆಕ್ಟರ್ ಕಂಪನಿ ವಿಂಡ್ ಟರ್ಬೈನ್ ಜನರೇಟರ್ ಖರೀದಿಸಿತ್ತು. ಈ ಯಂತ್ರ ಉಪಗ್ರಹ ಮೂಲಕ ಕಾರ್ಯ ನಿರ್ವಹಿಸುತ್ತಿತ್ತು. ಇದಕ್ಕಾಗಿ ತಂಪು ಪಾನೀಯ ಕಂಪನಿ ಒಟ್ಟು ರು. 6 ಲಕ್ಷ ವ್ಯಯಿಸಿತ್ತು.  2012ರಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಯಂತ್ರ ದುರಸ್ತಿಗೊಳಗಾಯಿತು. ಇದಕ್ಕೆ ವಿಮಾ ಹಣ ಪಾವತಿಸಬೇಕೆಂದು ಕಂಪನಿ ನ್ಯಾಶನಲ್ ಇನ್ಸೂರೆನ್ಸ್ ಕಂಪನಿಗೆ ಸಂಪರ್ಕಿಸಿದಾಗ, ತಂಪು ಪಾನೀಯ ಕಂಪನಿ ಯಂತ್ರವನ್ನು ಮುರಿದಿದೆ. ಆದ್ದರಿಂದ ಕಂಪನಿಯ ಕರಾರಿನಂತೆ ವಿಮಾ ಹಣ ಪಾವತಿಸಲು ಸಾಧ್ಯವಿಲ್ಲ. ಕೇವಲ ರು. 2.37 ಲಕ್ಷ ಪಾವತಿಸುವುದಾಗಿ ತಿಳಿಸಿತ್ತು. ನೆಕ್ಟರ್ ಕಂಪನಿಗೆ ರು. 4 ಲಕ್ಷ ವಿಮಾ ಮೊತ್ತ ಅಲ್ಲದೆ, ರು. 10 ಸಾವಿರ ಪರಿಹಾರ, ಕಟ್ಟಳೆ ಖರ್ಚು ರು. 5 ಸಾವಿರವನ್ನು ಎರಡು ತಿಂಗಳಲ್ಲಿ ಭರಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಪೂರ್ತಿ ಹಣ ಪಾವತಿ ಮಾಡುವವರೆಗೂ ಶೇ. 9ರಷ್ಟು ಬಡ್ಡಿ ನೀಡಬೇಕು ವೇದಿಕೆ ತಿಳಿಸಿದೆ.  ಪ್ರಕರಣದ ವಿಚಾರಣೆಯನ್ನು ಜಿಲ್ಲಾ ವೇದಿಕೆ ಅಧ್ಯಕ್ಷ ಬಿ.ಎಚ್. ಶ್ರೀಹರ್ಷ, ಸದಸ್ಯ ಎಂ. ವಿಜಯಲಕ್ಷ್ಮಿ ನಡೆಸಿದ್ದರು ಎಂದು ವೇದಿಕೆಯ ರಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.