ಧಾರವಾಡ

ಕಂಬಾರ, ಸಂಕೇಶ್ವರ ಸೇರಿ 9 ಗಣ್ಯರಿಗೆ ಗೌಡಾ

Published On :

ಕ.ಪ್ರ.ವಾರ್ತೆ | ಧಾರವಾಡ | ಮಾ. 24
ಇಲ್ಲಿಯ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ 64ನೇ ಘಟಿಕೋತ್ಸವ ಮಾ.25ರ ಬೆಳಗ್ಗೆ 11.30ಕ್ಕೆ ಗಾಂಧಿ ಭವನದಲ್ಲಿ ನಡೆಯಲಿದ್ದು, ನೂರಾರು ವಿದ್ಯಾರ್ಥಿಗಳಿಗೆ ಪದವಿ ನೀಡುವ ಜತೆಗೆ, 9 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿವಿ ಕುಲಪತಿ ಡಾ೤ ಎಚ್.ಬಿ. ವಾಲೀಕಾರ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಪದ್ಮಭೂಷಣ ಪ್ರೊ೤ ಪಿ. ಬಲರಾಮ್, ವಿವಿಯ ಸಹಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಭಾಗವಹಿಸಲಿದ್ದಾರೆ ಎಂದರು.
ಯಾರ್ಯಾರಿಗೆ ಗೌ.ಡಾ...?
ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ೤ ಚಂದ್ರಶೇಖರ ಕಂಬಾರ (ಸಾಹಿತ್ಯ), ವಿಜಯ ಸಂಕೇಶ್ವರ (ಉದ್ಯಮಿ) ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ಶಶಿಕಲಾ ಕಾಕೋಡ್ಕರ್ (ಸಮಾಜ ಸೇವೆ), ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಶರತ್ ಜವಳಿ (ನ್ಯಾಯಾಂಗ), ಪದ್ಮರಾಜ ದಂಡಾವತಿ (ಪತ್ರಿಕೋದ್ಯಮ), ಡಾ೤ ಮರಿಗೌಡ ನಾಗರಾಜು (ಸಮಾಜ ಸೇವೆ, ಬೆಂಗಳೂರು), ಡಾ೤ ವಿ.ಎಸ್. ಸೋಂದೆ (ಶಿಕ್ಷಣ, ಶಿರಸಿ), ಎಂ.ಶ್ರೀನಿವಾಸನ್ (ಸಮಾಜ ಸೇವೆ, ಬೆಂಗಳೂರು), ಪಂ. ಎಂ. ವೆಂಕಟೇಶಕುಮಾರ್ (ಸಂಗೀತ, ಧಾರವಾಡ) ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಇದೇ ಮೊದಲ ಬಾರಿಗೆ 9 ಮಹನೀಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ ಎಂದು  ಡಾ೤ ವಾಲೀಕಾರ ತಿಳಿಸಿದರು.
ಚಿನ್ನದ ಹುಡುಗಿ ಕೀರ್ತಿ...
ಪ್ರಸಕ್ತ ಬಾರಿ 168 ಪಿಎಚ್‌ಡಿ, 11 ಎಂಫಿಲ್, 3886 ಸ್ನಾತಕೋತ್ತರ, 15,790 ಪದವಿ, 102 ಕಾನೂನು, 281 ಡಿಪ್ಲೊಮಾ, 120 ಸರ್ಟಿಫಿಕೇಟ್ ಕೋರ್ಸ್ ಸೇರಿದಂತೆ ಒಟ್ಟು 20,358 ವಿದ್ಯಾರ್ಥಿಗಳಿಗೆ ನಾನಾ ಪದವಿಗಳನ್ನು ನೀಡಲಾಗುವುದು.
ಕರ್ನಾಟಕ ವಿವಿ ಜೀವರಸಾಯನಶಾಸ್ತ್ರ ವಿಭಾಗದ ಕೀರ್ತಿ ವಂಕ್ರಾಮ್ 8 ಚಿನ್ನದ ಪದಕ ಪಡೆದು 'ಚಿನ್ನದ ಹುಡುಗಿ'ಯಾಗಿ ಹೊರಹೊಮ್ಮಿದ್ದಾರೆ. ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ಅಧ್ಯಯನ ವಿಭಾಗದ ಶ್ರೇಯಾ ಶಿವಾಜಿ ಮಾಲುನವರಗೆ 7, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಗಣೇಶ ಶಿವರಾಮ ವೈದ್ಯ, ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಶ್ರೀಶೈಲ ಸದಾಶಿವ ಝರಿ, ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಚೈತ್ರ ರಘುಪತಿ ಶರ್ಮಾ ಹಾಗೂ ಗಣಿತ ಅಧ್ಯಯನ ವಿಭಾಗದ ಶೃತಿ ಶ್ರೀಪತಿ ಹೆಗಡೆ ತಲಾ 6 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಡಾ೤ ಚಂದ್ರಮಾ ಕಣಗಲಿ, ಮೌಲ್ಯಮಾಪನ ಕುಲಸಚಿವ ಡಾ೤ ಎಚ್.ಟಿ. ಪೋತೆ, ಪ್ರಾಧ್ಯಾಪಕ ಡಾ೤ ಎಂ. ಗಂಗಾಧರಪ್ಪ ಇದ್ದರು.


ನಾನಾ ಕ್ಷೇತ್ರಗಳ ಸಾಧಕರ ಸನ್ಮಾನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು:
ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ 'ಕರ್ನಾಟಕ ಸಾಂಸ್ಕೃತಿಕ ವೈಭವ' ಕಾರ್ಯಕ್ರಮ್ನ ಹಮ್ಮಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ 'ಕರ್ನಾಟಕ ಭೂಷಣ', 'ಸಹಕಾರ ರತ್ನ', 'ಸಮಾಜ ಸೇವಾ ರತ್ನ' ನೀಡಿ ಗೌರವಿಸಲಾಗುತ್ತದೆ. ಶಿಕ್ಷಣ, ನೃತ್ಯ, ಕಾನೂನು, ಸಮಾಜಸೇವೆ, ಕುಸ್ತಿಪಟು, ಜನಪರ ಹೋರಾಟ, ಕೋಮು ಸಾಮರಸ್ಯ, ಪೊಲೀಸ್ ಸೇವೆ, ವೈದ್ಯಕೀಯ ಸೇವೆ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಸಾಧಕರು ಮತ್ತು ವಿದ್ಯಾರ್ಥಿಗಳು ಮಾಚ್ 31ರ ಒಳಗೆ ಅರ್ಜಿ ಸಲ್ಲಿಸಬಹುದು. ವಿಳಾಸ: ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ, 05 'ಸಿಂಧೂರ', 2ನೇ ಅಡ್ಡ ರಸ್ತೆ, 2ನೇ ಬ್ಲಾಕ್, ಕುಮಾರಪಾರ್ಕ್ ವೆಸ್ಟ್, ಶೇಷಾದ್ರಿಪುರಂ. ಮೊ. 98448 90333 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.