ಮೊಬೈಲ್ ಟವರ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 28
ಇಂದ್ರಪ್ರಸ್ಥನಗರದಲ್ಲಿ ಅಳವಡಿಸಲಾಗಿರುವ ಮೊಬೈಲ್ ಟವರ್‌ನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿ ಆ ಭಾಗದ ನೂರಾರು ಜನರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಂದ್ರಪ್ರಸ್ಥನಗರದ ಜನವಸತಿ ಪ್ರದೇಶದಲ್ಲಿ ಶಿವಪ್ಪ ರಾಮಣ್ಣ ಗಾರವಾಡ ಎಂಬುವರ ಮೊಬೈಲ್ ಟಾವರ್ ಅಳವಡಿಸಿದ್ದರಿಂದ ಈ ಭಾಗದಲ್ಲಿ ವಾಸವಾಗಿರುವ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮೊಬೈಲ್ ಟವರ್ ಅಳವಡಿಕೆಗೆ ಸ್ಥಳೀಯರು ಸಾಕಷ್ಟು ವಿರೋಧಿಸಿದ್ದರೂ ಅದಕ್ಕೆ ಯಾವುದೇ ರೀತಿಯಿಂದ ಸ್ಪಂದಿಸದ ಗಾರವಾಡ, ವಾರ್ಡ್‌ನಂ 40ರಲ್ಲಿರುವ ಅಂಗನವಾಡಿ ಶಾಲೆ ಹಾಗೂ ಕಾಲೇಜ್ ಪಕ್ಕದಲ್ಲಿ ಟವರ್ ಅಳವಡಿಸಿದ್ದಾರೆ ಎಂದು ದೂರಿದರು. ಈ ಭಾಗದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮೊಬೈಲ್ ಟವರ್‌ನ್ನು ಪಾಲಿಕೆ ಆಯುಕ್ತರು ತಕ್ಷಣ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮನವಿಯನ್ನು ಅರ್ಪಿಸಲಾಯಿತು.
ಎಸ್.ವಿ. ರಾಜೂರ, ಎಸ್.ಎಸ್. ಪೂಜಾರ, ಚನ್ನಬಸಯ್ಯ ಹಿರೇಮಠ, ಎಸ್.ಬಿ. ಕಬ್ಬೂರ, ಐ.ಎಸ್. ಹೆಬ್ಬಳ್ಳಿ, ನಂದಾ ಸೋನೇನ, ರೂಪಾ ಬದ್ದಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

