ಕಲ್ಮೇಶ್ವರ ದೇವಸ್ಥಾನ ಇಂದು ಉದ್ಘಾಟನೆ
ಧಾರವಾಡ: ಕೆಲಗೇರಿಯಲ್ಲಿ ನೂತನವಾಗಿ ನಿರ್ಮಿಸಿದ ಕಲ್ಮೇಶ್ವರ ದೇವಸ್ಥಾನ ಹಾಗೂ ಹಾದಿ ಬಸವಣ್ಣ ದೇವಸ್ಥಾನದ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಟಾಪನೆ ಸಮಾರಂಭ ಬಸವ ಜಯಂತಿ ದಿನ ಮೇ 2ರಂದು ನಡೆಯಲಿದೆ.
ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುವಾರ ರಥದ ಕಳಸಾರೋಹಣ ಮತ್ತು ಕಲ್ಮೇಶ್ವರ ಹಾಗೂ ಹಾದಿ ಬಸವಣ್ಣ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಜರುಗಿದೆ. ಮೇ 5ರವರೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ 2ರಂದು ಬೆಳಗ್ಗೆ 6ಕ್ಕೆ ಕಲ್ಮೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ನಂತರ ರುದ್ರಾಭಿಷೇಕ ಹಾಗೂ ಅಗ್ನಿ ಪೂಜೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಸಾಮೂಹಿಕ ವಿವಾಹಗಳು ನಡೆಯಲಿದ್ದು, ಸಂಜೆ 4ಕ್ಕೆ ರಥೋತ್ಸವ ಜರುಗಲಿದೆ. ರಾತ್ರಿ 10.30ಕ್ಕೆ ಸಂಗ್ಯಾ-ಬಾಳ್ಯಾ ಬಯಲಾಟ ಪ್ರದರ್ಶನವಾಗಲಿದೆ. ಮೇ 3ರಂದು ದೇವಸ್ಥಾನದಲ್ಲಿ ಭಜನಾ ಹಾಗೂ ಡೊಳ್ಳಿನ ಕಾರ್ಯಕ್ರಮ ನಡೆಯಲಿದ್ದು, ಮೇ 4ರಂದು ರಾತ್ರಿ 10.30ಕ್ಕೆ ಹುಬ್ಬಳ್ಳಿ ಹುಲಿ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುತ್ತದೆ. ಮೇ 5ರಂದು ಸಂಜೆ 6ಕ್ಕೆ ಕಡುಬಿನ ಕಾಳಗ ನಡೆಯಲಿದ್ದು, ಈ ಎಲ್ಲ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಕಲ್ಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರುದ್ರಗೌಡ ಪಾಟೀಲ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ ಭಾಗವಹಿಸುವರು. ಬೆಳಗಾವಿ ಮುಕ್ತಿಮಠ, ಅಮ್ಮಿನಬಾವಿ ಪಂಚಗೃಹ ಹಿರೇಮಠ, ನವನಗರ ಕಾಶಿಪೀಠ ಖಾಸಾ ಶಾಖಾಮಠ, ನಿಂದರಕಿ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ನವನಗರ ಡಾ.ಎಸ್.ಎಸ್. ಹಿರೇಮಠ ಸ್ವಾಮಿಗಳು ಸಾನ್ನಿಧ್ಯ ವಹಿಸುವರು ಎಂದು ಸಂಚಾಲಕ ಶಾಂತಯ್ಯ ಹಿರೇಮಠ ತಿಳಿಸಿದ್ದಾರೆ.
ಹುಬ್ಬಳ್ಳಿ: ಪಾಲಿಕೆಯಿಂದ ಬಸವೇಶ್ವರ ಜಯಂತಿ
ಹುಬ್ಬಳ್ಳಿ: ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಅವಳಿ ನಗರದಲ್ಲಿರುವ ಶ್ರೀ ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆಗೆ ಮೇ 2ರಂದು ಮಾಲಾರ್ಪಣೆ ಕಾರ್ಯಕ್ರಮ್ನ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9.30ಕ್ಕೆ ನಗರದ ಬಸವವನದಲ್ಲಿರುವ ಪ್ರತಿಮೆಗೆ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಸರ್ವೋದಯ ಸರ್ಕಲ್ನಲ್ಲಿರುವ (ಕೇಶ್ವಾಪೂರ ಸರ್ಕಲ್) ಪ್ರತಿಮೆಗೆ ಬೆಳಗ್ಗೆ 9.45 ಕ್ಕೆ ಪಾಲಿಕೆ ಅಧೀಕ್ಷಕ ಅಭಿಯಂತರ ಪ್ರಕಾಶ ಗರಗ ಹಾಗೂ ಧಾರವಾಡದ ಕಡಪಾ ಮೈದಾನದಲ್ಲಿರುವ ಪ್ರತಿಮೆಗೆ ಜಂಟಿ ಆಯುಕ್ತ ವಿರೇಂದ್ರ ಕುಂದಗೋಳ ಇವರು ಮಾಲಾರ್ಪಣೆ ಮಾಡುವರು. ಈ ಸಂದರ್ಭದಲ್ಲಿ ಪಾಲಿಕೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿರುವರು ಎಂದು ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

