ಇಂದು ಜಂಗಿ ನಿಕಾಲಿ ಕುಸ್ತಿ
ಧಾರವಾಡ: ತಾಲೂಕಿನ ಲೋಕೂರ ಗ್ರಾಮದಲ್ಲಿ ರೇವಣಸಿದ್ದೇಶ್ವರ ಮತ್ತು ಶರಣ ಬಸವೇಶ್ವರ ಜಾತ್ರೆಯ ಅಂಗವಾಗಿ ಮೇ 3ರಂದು ಭಾರಿ ಜಂಗಿ ನಿಕಾಲಿ ಬಯಲು ಕುಸ್ತಿ ಆಯೋಜಿಸಲಾಗಿದೆ. ಗ್ರಾಮದ ನಾಗಪ್ಪ ಚಿಕಣಿ ಅವರ ಹೊಲದಲ್ಲಿ ಅಂದು ಮಧ್ಯಾಹ್ನ್ನ 2.30ಕ್ಕೆ ನಡೆಯುವ ಕುಸ್ತಿಯಲ್ಲಿ ಖ್ಯಾತ ಪೈಲವಾನರು ಭಾಗವಹಿಸುವರು. ಈ ಸಂದರ್ಭದಲ್ಲಿ ಶಾಸಕ ವಿನಯ ಕುಲಕರ್ಣಿ, ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಜಿಪಂ ಸದಸ್ಯ ಅಮೃತ ದೇಸಾಯಿ, ಎಪಿಎಂಸಿ ಅಧ್ಯಕ್ಷ ವಿಜಯ ಕುರಕುರಿ, ಮುಖಂಡರಾದ ಕೃಷ್ಣಾ ಕೊಳ್ಳಾನಟ್ಟಿ, ನಿಜಾಮದ್ದೀನ್ ಶೇಖ್, ಕಿರಣ ಬೀರಗೌಡರ, ವಿನಾಯಕ ಕಟಗಿ, ರವಿ ರಾಯ್ಕರ, ಪಿಎಸ್ಐ ಮುರುಘೇಶ ಚನ್ನಣ್ಣವರ ಮತ್ತಿತರ ಗಣ್ಯರು ಉಪಸ್ಥಿತರಿರುವರು. ಕುಸ್ತಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ವೀಕ್ಷಿಸಲು ಆಗಮಿಸಬೇಕು ಎಂದು ಗ್ರಾಮದ ಹಿರಿಯ ಪಾರೀಶ ನರಸಿಂಗನವರ ಮತ್ತು ಗಂಗಪ್ಪ ಬಾಗಲಕೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಅವಘಡ: ಯುವಕ ಬಲಿ
ಹುಬ್ಬಳ್ಳಿ: ಧಾರವಾಡ ನಗರದ ಬಸಪ್ಪ ಚೌಕ್ ಬಳಿಯ ಮನೆಯೊಂದರಲ್ಲಿ ಟ್ಯೂಬ್ಲೈಟ್ ಹೋಲ್ಡರ್ ಜೋಡಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ನಿಂದ ವ್ಯಕ್ತಿಯೊಬ್ಬ ಮೃತಪಟ್ಟ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಲ್ತಾನ ಸೈಪುದ್ದೀನ್ ಕಾರ್ಕಳ (19) ಮೃತಪಟ್ಟ ಯುವಕ. ಮನೆಯೊಂದರ ಒಂದನೇ ಮಹಡಿಯಲ್ಲಿ ಟ್ಯೂಬ್ಲೈಟ್ಗೆ ಹೋಲ್ಡರ್ ಜೋಡಿಸುತ್ತಿದ್ದ ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕಕ್ಕೆ ಬಂದ ಸೈಪುದ್ದೀನ್ ವಿದ್ಯುದಾಘಾತದಿಂದ ಮೃತಪಟ್ಟಿದ್ದು, ಈ ಕುರಿತು ಯುವಕನ ತಂದೆ ಸೈಪುದ್ದೀನ್ ಕಾರ್ಕಳ ಅವರು ವಿದ್ಯಾಗಿರಿ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ದೂರು ದಾಖಲಿಸಿದ್ದಾರೆ.
ಸರಗಳ್ಳತನ: ಪ್ರಕರಣ ದಾಖಲು
ಹುಬ್ಬಳ್ಳಿ: ವಿವಾಹ ಕಾರ್ಯಕ್ರಮಕ್ಕೆ ಹೊರಟಿದ್ದ ಮಹಿಳೆಯೊಬ್ಬರ ಕೊರಳಲ್ಲಿದ್ದ ಅಂದಾಜು 50 ಗ್ರಾಂ ತೂಕದ ಮಂಗಳಸೂತ್ರವನ್ನು ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ಕಿತ್ತುಕೊಂಡು ಪರಾರಿಯಾಗಿರುವ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾನಗರದ ಸುಧರ್ಮ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಸಂಬಂಧಿಕರ ಮದುವೆಗೆ ಹೊರಟಿದ್ದ ಸಾವಿತ್ರಿ ಮಾರುತಿ ಜಾಧವ ಅವರ ಕೊರಳಲ್ಲಿದ್ದ ರು. 1.20 ಲಕ್ಷ ಮೌಲ್ಯದ ಮಂಗಳಸೂತ್ರವನ್ನು ವಿದ್ಯಾನಗರದ ಉಮ್ರಾಣಿ ಅವರ ಮನೆಯ ಹತ್ತಿರ ಎದುರಿನಿಂದ ಬೈಕ್ ಮೇಲೆ ಬಂದ ಯುವಕರಿಬ್ಬರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಕಾಣೆ: ದೂರು ದಾಖಲು
ಹುಬ್ಬಳ್ಳಿ: ಇಲ್ಲಿನ ಜಯನಗರದ ಮನೆಯೊಂದರಲ್ಲಿ ಪೆಯಿಂಗ್ ಗೆಸ್ಟ್ ಆಗಿದ್ದ ಚಿತ್ರದುರ್ಗ ಜಿಲ್ಲೆಯ ಕೊಳಿಹಾಳ ಗ್ರಾಮದ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೇಯಿಂಗ್ ಗೆಸ್ಟ್ ಮಾಲೀಕರಾದ ಉದಯ ಶೆಟ್ಟಿ ಅವರಿಗೆ ತನ್ನ ಊರಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದ ಬಿ. ಲಲಿತಾ ಬಸವರಾಜ (19) ಎಂಬ ಯುವತಿ ಮನೆಗೆ ಬಂದಿಲ್ಲ ಎಂದು ಯುವತಿಯ ತಂದೆ ಬಸವರಾಜ ರುದ್ರಯ್ಯ ಅವರು ದೂರು ನೀಡಿದ್ದಾರೆ.
ಗದಿಗೆಮ್ಮಾ ತಳಗೇರಿ ನಿಧನ
ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದ ನಿವಾಸಿ ಗದಿಗೆಮ್ಮಾ ನಾಗಪ್ಪ ತಳಗೇರಿ (85) ಶುಕ್ರವಾರ ನಿಧನ ಹೊಂದಿದರು. ಮೃತರಿಗೆ ಅಪಾರ ಬಂಧು ಬಳಗ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

