ಧಾರವಾಡ

ಹುಬ್ಬಳ್ಳಿ: ನಗರೇಶ್ವರ ಜಯಂತ್ಯುತ್ಸವ ಇಂದು

Published On :

ಹುಬ್ಬಳ್ಳಿ: ಹುಬ್ಬಳ್ಳಿಯ ವಾಸವಿ ಬೀದಿಯಲ್ಲಿರುವ ನಗರೇಶ್ವರ ಮತ್ತು ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವವನ್ನು ಮೇ 4ರಂದು ನಗರೇಶ್ವರ ದೇವಸ್ಥಾನ ಟ್ರಸ್ಟ್ನಿಂದ ನಗರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಮೇ 4ರಂದು ನಗರೇಶ್ವರ ಜಯಂತಿ ಮತ್ತು ಮೇ 9ರಂದು ಕನ್ನಿಕಾಪರಮೇಶ್ವರಿ ಜಯಂತಿ ಆಚರಿಸಲಾಗುತ್ತಿದೆ. 4ರಂದು ಬೆಳಗ್ಗೆ 6ಕ್ಕೆ ಕಾಕಡಾರತಿ ಮತ್ತು ಓಂಕಾರ ಧ್ಯಾನ, 6.30ಕ್ಕೆ ಪಂಚಾಮೃತ ಅಭಿಷೇಕ, ಸಂಜೆ 5ರಿಂದ ಅಮ್ಮನವರ ಪುರಾಣ ಕಥನ ಪ್ರವಚನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಪರಿಚಿತ ಶವಪತ್ತೆ
ಹುಬ್ಬಳ್ಳಿ: ಗೂಡ್ಸ್ಶೆಡ್ ರಸ್ತೆಯ ರೇಲ್ವೆ ಗೆಸ್ಟ್ ಹೌಸ್ ಹತ್ತಿರ 55-60 ವರ್ಷ ವಯಸ್ಸಿನ ಅನಾಮಧೇಯ ಶವವೊಂದು ಪತ್ತೆಯಾಗಿದೆ. ಯಾವುದೋ ಕಾಯಿಲೆಯಿಂದ ಈ ಅಪರಿಚಿತ ವ್ಯಕ್ತಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತನ ಮೈಮೇಲೆ ಹೊಲಸಾದ ಶರ್ಟ್, ಪ್ಯಾಂಟ್ ತೊಟ್ಟಿದ್ದು ತಲೆಯಲ್ಲಿ ಒಂದು ಇಂಚು ಕಪ್ಪು ಬಿಳಿ ಮಿಶ್ರಿತ ಕೂದಲುಗಳಿವೆ. ಸಾದಾಗಪ್ಪು ಮೈಬಣ್ಣ, ತೆಳ್ಳನ ಮೈಕಟ್ಟು ಹೊಂದಿರುವ ಈ ಅಪರಿಚಿತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಶಹರ ಪೊಲೀಸ್ ಠಾಣೆ ದೂ. ಸಂ. (0836) 2233540, ಕಂಟ್ರೋಲ್ ರೂಮ್ ಸಂ. 2233555ಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಬ್ಯಾಗ್ ಕಳ್ಳತನ
ಹುಬ್ಬಳ್ಳಿ: ಹುಬ್ಬಳ್ಳಿ ಸ್ವಾತಿ ಹೋಟೆಲ್ ಬಳಿ ಕಾರು ನಿಲ್ಲಿಸಿ ಚಹಾ ಸೇವನೆ ಎಂದು ಹೋಗಿದ್ದ ಜಲಮಂಡಳಿ ಎಂಜಿನಿಯರ್ ಎನ್. ಪ್ರಸನ್ಮೂರ್ತಿ ಅವರಿಗೆ ಸೇರಿದ್ದ ಬ್ಯಾಗ್ವೊಂದನ್ನು ಕಾರಿನಿಂದ ದೋಚಿರುವ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹುಬ್ಬಳ್ಳಿಯ ಜಲಮಂಡಳಿ ಕಚೇರಿಯಲ್ಲಿ ಕಾರ್ಯಪಾಲಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸನ್ನಮೂರ್ತಿ ಅವರು ಕಾರಿನಲ್ಲಿ ಬ್ಯಾಗ್ ಇಟ್ಟು ಸ್ವಾತಿ ಚಹಾ ಕುಡಿಯುವುದಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ರು. 15 ಸಾವಿರ ಮೌಲ್ಯದ ಕ್ಯಾಮೆರಾ ಸೇರಿದಂತೆ ರು. 21 ಸಾವಿರ ಮೌಲ್ಯದ ವಸ್ತುಗಳಿದ್ದ ಬ್ಯಾಗನ್ನು ಕಳ್ಳರು ಅಪಹರಿಸಿದ್ದಾರೆ ಎಂದು ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಆತ್ಮಹತ್ಯೆ: ದೂರು
ಧಾರವಾಡ: ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಮಾನಸಿಕವಾಗಿ ನೊಂದಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 8-10 ವರ್ಷಗಳ ಹಿಂದೆ ಮಾಡುತ್ತಿದ್ದ ಕಿರಾಣಿ ಅಂಗಡಿ ವ್ಯಾಪಾರದಲ್ಲಿ ಅನುಭವಿಸಿದ್ದ ಆರ್ಥಿಕ ನಷ್ಟದಿಂದ ಮಾನಸಿಕವಾಗಿ ಜರ್ಝರಿತಗೊಂಡಿದ್ದ ಮಹಾಂತೇಶ ಬಸಪ್ಪ ಅಂಗಡಿ 62 ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ವಿಜಯ ಅಂಗಡಿ ಅವರು ಶಹರ ಠಾಣೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.