ಚಿಕ್ಕ, ಮಧ್ಯಮ ಉದ್ಯಮಕ್ಕೆ ಪ್ರೋತ್ಸಾಹ ಅವಶ್ಯ
ಧಾರವಾಡ: ಉದ್ಯಮ ರಂಗ ಉದ್ಯೋಗ ಸೃಷ್ಟಿಯಲ್ಲಿ ಗಣನೀಯ ಪಾತ್ರವಹಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಚಿಕ್ಕ, ಮಧ್ಯಮ ಉದ್ಯಮವನ್ನು ಪ್ರೋತ್ಸಾಹಿಸಲು ಕಟಿಬದ್ಧವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಶೋಕ ರೆಡ್ಡಿ ಹೇಳಿದರು.
ಇಲ್ಲಿಯ ಕೆವಿಜಿ ಬ್ಯಾಂಕ್‌ನ ಪ್ರಮುಖ ಶಾಖೆಯಲ್ಲಿ ಜರುಗಿದ ಅತಿ ಚಿಕ್ಕ, ಚಿಕ್ಕ ಮತ್ತು ಮಧ್ಯಮ ತರಗತಿಯ ಉದ್ಯಮಶೀಲರಿಗೆ ಬ್ಯಾಂಕಿಂಗ್ ಸಾಲ ಸೌಲಭ್ಯಗಳ ಕುರಿತು ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ಮುಖ್ಯ ಭೂಮಿಕೆ ವಹಿಸಲು ಆಸಕ್ತವಾಗಿರುವ ಬ್ಯಾಂಕ್ ಕಿರು ಮತ್ತು ಮಧ್ಯಮ ತರಗತಿಯ ಉದ್ಯಮಗಳಿಗೆ ಅವಕಾಶ ಕಲ್ಪಿಸಿ ಉದ್ಯಮಾಸಕ್ತರ ಕನಸುಗಳಿಗೆ ಜೀವ ತುಂಬಲಿದೆ. ಕಳೆದ ಸಾಲಿನಲ್ಲಿ ಬ್ಯಾಂಕ್ ಉದ್ಯಮ ರಂಗಕ್ಕೆ ರು.607.60 ಕೋಟಿ ಸಾಲ ವಿತರಿಸಿ ರು.52.60 ಪ್ರತಿಶತ ಪ್ರಗತಿ ತೋರಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಮೊತ್ತವನ್ನು ದ್ವಿಗುಣಗೊಳಿಸಲು ಯೋಜಿಸಿದೆ ಎಂದರು.
ಧಾರವಾಡ ಆಕಾಶವಾಣಿ ನಿರ್ದೇಶಕ ಸಿ.ಯು. ಬೆಳ್ಳಕ್ಕಿ, ಭಾರತದಲ್ಲಿ ಉದ್ಯಮಶೀಲತೆಗೆ ಚೈತನ್ಯ ತುಂಬುತ್ತಿರುವ ಅತಿ ಚಿಕ್ಕ, ಚಿಕ್ಕ ಮತ್ತು ಮಧ್ಯಮ ತರಗತಿಯ ಕೈಗಾರಿಕಾ ರಂಗವು ಪ್ರತಿ ವರ್ಷ ಸುಮಾರು ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಮೂಲಕ ತಲಾ ಆದಾಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದರು.
ಬ್ಯಾಂಕಿನ ಮಹಾ ಪ್ರಬಂಧಕ ಸೂರ್ಯಕಾಂತ ಗಂಗಾ, ಸರ್ಕಾರ-ಬ್ಯಾಂಕ್‌ಗಳು ಉದ್ಯಮರಂಗದ ಬಗ್ಗೆ ಆಸಕ್ತಿ ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ ಅದರ ಲಾಭ ಜನತೆ ತೆಗದುಕೊಳ್ಳುತ್ತಿಲ್ಲ ಎಂದರು.
ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಎ. ನೀರಲಗಿ, ಧಾರವಾಡ ಏರ್‌ಟೆಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಲಜಪತ್ ರಾಯ್, ಯುವ ಉದ್ಯಮಿ ಹಲಗತ್ತಿ, ಶಂಕರ ಜಾಧವ ಮಾತನಾಡಿದರು. ಸಾಲಗಳ ವಿಭಾಗದ ವ್ಯವಸ್ಥಾಪಕ ಆರ್. ಲೋಕೇಶ ಮತ್ತು ಜಿ.ಸಿ. ಪಟ್ಟಣ ಶೆಟ್ಟಿ ಉದ್ಯಮಶೀಲರಿಗೆ ಲಭ್ಯವಿರುವ ಅವಕಾಶಗಳು ಮತ್ತು ಬ್ಯಾಂಕಿಂಗ್ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಉಲ್ಲಾಸ ಗುನಗಾ ನಿರೂಪಿಸಿದರು. ಹಿರಿಯ ಪ್ರಬಂಧಕ ಪಿ.ಎ. ಕಟ್ಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

