ಗದಗ

ಇಂದು ಇಫ್ತಿಯಾರ್ ಕೂಟ

Published On :

ಗದಗ: ಬಿ.ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಸಮಸ್ತ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಔತಣ ಕೂಟವನ್ನು ಆ. 3ರ ಸಂಜೆ 6.30ಕ್ಕೆ ನಗರದ ಜಾಮೀಯಾ (ಜುಮ್ಮಾ) ಮಸೀದಿ ಹತ್ತಿರದಲ್ಲಿ ಏರ್ಪಡಿಸಲಾಗಿದೆ. ಶಾಸಕ ಬಿ.ಶ್ರೀರಾಮುಲು, ಅನೀಲ ಮೆಣಸಿನಕಾಯಿ ಮತ್ತು ಹಲವಾರು ಮುಖಂಡರು ಪಾಲ್ಗೊಳ್ಳಲ್ಲಿದ್ದಾರೆ ಎಂದು ಶ್ರೀರಾಮುಲು ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.
7ರಿಂದ ಅಭಿಷೇಕ
ಗದಗ: ನಗರದ ವೀರನಾರಾಯಣ ದೇವಸ್ಥಾನದ ಹತ್ತಿರವಿರುವ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಆ. 7 ರಿಂದ ಸೆ. 4ರ ವರೆಗೆ ನಿರಂತರ ಅಭಿಷೇಕ, ಬುತ್ತಿಪೂಜೆ, ಎಲಿಪೂಜೆ, ಭಂಡಾರ ಪೂಜೆ, ಬಾಳೆಹಣ್ಣಿನ ಪೂಜಾ ಕಾರ್ಯಕ್ರಮ ನೆರವೇರುವುದು. ಪ್ರತಿ ಭಾನುವಾರ ಪಾಲಕಿ ಸೇವೆ ಮತ್ತು ಆ. 25ರಂದು ಬೆಳಗ್ಗೆ 10ಕ್ಕೆ ಅನ್ನಸಂತರ್ಪಣೆ ಜರುಗುವುದು. ಅಂದು ರಾತ್ರಿ 6.40ಕ್ಕೆ ಪಾಲಕಿ ಉತ್ಸವ ಹಾಗೂ ಮಹಾ ಮಂಗಳಾರತಿ ಜರುಗುವುದು ಎಂದು ಮೈಲಾರ ದೇವಸ್ಥಾನದ ಟ್ರಸ್ಟ್ ಕಮಿಟಿಯ ಧರ್ಮದರ್ಶಿ ಜಯದೇವ ಮೆಣಸಗಿ, ಮೈಲಾರಪ್ಪ ಅರಣಿ, ಶೇಖರಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂಗಮಂದಿರಕ್ಕೆ ಪುಟ್ಟರಾಜರ ಹೆಸರಿಡಿ
ಗದಗ: ಜಿಲ್ಲಾಸ್ಪತ್ರೆಗೆ ಲಿಂ. ಪಂ.ಪಂಚಾಕ್ಷರ ಗವಾಯಿಗಳವರ ಹೆಸರನ್ನು ಹಾಗೂ ನಿರ್ಮಿಸುತ್ತಿರುವ ರಂಗಮಂದಿರಕ್ಕೆ ಲಿಂ. ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರ ಹೆಸರನ್ನು ನಾಮಕರಣ ಮಾಡಬೇಕೆಂದು ಗದುಗಿನ ಗಾನಯೋಗಿ ಡಾ. ಪುಟ್ಟರಾಜ ಕಲಾ ಸಂಘವು ಆಗ್ರಹಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಗಾನಯೋಗಿ ಡಾ. ಪುಟ್ಟರಾಜ ಕಲಾ ಸಂಘದ ಅಧ್ಯಕ್ಷ ಹೇಮರಾಜಶಾಸ್ತ್ರಿ ಹೆಡಿಗ್ಗೊಂಡ, ಕಾರ್ಯದರ್ಶಿ ಶಿವಲಿಂಗಯ್ಯ ಶಾಸ್ತ್ರಿ ಸಿದ್ದಾಪುರ ಅವರು ಪಂಚಾಕ್ಷರ ಹಾಗೂ ಪುಟ್ಟರಾಜ ಗವಾಯಿಗಳ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಈ ಮಹನೀಯರ ಹೆಸರು ಸ್ಮರಣೆಯಲ್ಲಿರಲು ನಾಮಕರಣ ಮಾಡುವದು ಸೂಕ್ತ.  ಅಂಧ, ಅನಾಥ, ಅಂಗವಿಕಲರಿಗೆ ಸಂಗೀತ, ಸಾಹಿತ್ಯದ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಿದ ಮಹಾತ್ಮರು, ಭಕ್ತ ಸಮೂಹದಲ್ಲಿ ನಡೆದಾಡುವ ದೇವರೆಂದೇ ಭಕ್ತರ ಹೃದಯದಲ್ಲಿ ಗವಾಯಿಗಳು ನೆಲೆಸಿದ್ದಾರೆ. ರೋಣದ ನೂತನ ಸರ್ಕಾರಿ ಆಸ್ಪತ್ರೆಗೆ ಪಂ. ಭೀಮಸೇನ ಜೋಷಿ ಅವರ ಹೆಸರನ್ನು ನಾಮಕರಣ ಮಾಡಿರುವಂತೆ ಗದಗ ಜಿಲ್ಲಾ ಆಸ್ಪತ್ರೆಗೆ ಪಂ.ಪಂಚಾಕ್ಷರ ಗವಾಯಿಗಳವರ ಹೆಸರನ್ನು ನಾಮಕರಣ ಮಾಡಬೇಕು. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಹೆಸರನ್ನು ನೂತನ ರಂಗಮಂದಿರಕ್ಕೆ ನಾಮಕರಣ ಮಾಡುವುದು ಸೂಕ್ತ ಈ ಕುರಿತು ಸಚಿವ ಎಚ್.ಕೆ.ಪಾಟೀಲರು ಮತ್ತು ಜನಪ್ರತಿನಿಧಿಗಳು ಗಮನಿಸಬೇಕೆಂದು ಹೇಮರಾಜ ಶಾಸ್ತ್ರೀಗಳು, ಶಿವಲಿಂಗ ಶಾಸ್ತ್ರೀಗಳು, ಎಂ.ಜಿ. ಗುರುಸಿದ್ದೇಶ್ವರ ಶಾಸ್ತ್ರೀಗಳು, ಮಡಿವಾಳಯ್ಯ ಶಾಸ್ತ್ರಿ ಜೇರಟಗಿ ಮುಂತಾದವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.