ಗದಗ

8ಕ್ಕೆ ದೇವಸ್ಥಾನ ಉದ್ಘಾಟನೆ

Published On :

ಗಜೇಂದ್ರಗಡ: ಸ್ಥಳೀಯ ಪದ್ಮಶಾಲಿ ಅಭಿವೃದ್ಧಿ ಸಮಿತಿ ವತಿಯಿಂದ ಮಾರ್ಕಾಂಡೇಶ್ವರ ದೇವಸ್ಥಾನ ಉದ್ಘಾ ಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಆ. 8ರಂದು ನಡೆಯಲಿದೆ. ಆ. 7ರಂದು ಬೆಳಗ್ಗೆ 7.30ಕ್ಕೆ ಮಾರ್ಕಾಂಡೇಶ್ವರ ಮೂರ್ತಿಯ ಮೆರವಣಿಗೆಯ ಪಟ್ಟಣದಲ್ಲಿ ನಡೆಯಲಿದೆ. ಆ. 8ರಂದು ಬೆಳಗ್ಗೆ 8.51ಕ್ಕೆ ಮಾರ್ಕಾಂಡೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ನಂತರ ನಡೆಯುವ ಸಮಾರಂಭದಲ್ಲಿ ಮೈಸೂರು ಮಠದ ವಿಜಯ ಮಹಾಂತ ಶ್ರೀಗಳು, ಗುತ್ತೂರು ಸಿದ್ಧಾಶ್ರಮದ ಪ್ರಭುಲಿಂಗ ಶ್ರೀಗಳು, ಸಿದ್ಧನಕೊಳ್ಳದ ಮೃತ್ಯುಂಜಯ, ಉಮೇಶ ಶಿವಕುಮಾರ ಶ್ರೀಗಳು, ತಕ್ಕೇದ ಮಸೀದಿಯ ಹಜರತ್ ಮೆಹಬೂಬ ಅಲಿಶಾ ಪೀರಾಂ ಸಾನ್ನಿಧ್ಯ, ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ಮಾಜಿ ಸಂಸದ ಆರ್.ಎಸ್. ಪಾಟೀಲ ಉಪಸ್ಥಿತರಿರುವರು.
ವಿಕಲಚೇತನರಿಗೆ ಸಂದರ್ಶನ
ಗದಗ: ಬೆಂಗಳೂರಿನಲ್ಲಿ ವಿದ್ಯಾ ಫೌಂಡೇಶನ್ ರಾಜಾಜಿನಗರ ಪ್ರೈ ಲಿ ಈ ಕಂಪನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಸುಮಾರು 400 ವಿಕಲಚೇತನರು ಉದ್ಯೋಗದಲ್ಲಿದ್ದಾರೆ. ಇದರಂತೆ ಗದಗ ಜಿಲ್ಲೆಗೂ ನಿರುದ್ಯೋಗ ವಿದ್ಯಾವಂತ ವಿಕಲಚೇತನರಿಗೆ ಉದ್ಯೋಗ ಅವಕಾಶಕ್ಕಾಗಿ ಅರ್ಜಿ ಕರೆಯಲಾಗಿದೆ. ಜಿಲ್ಲೆಯ 100 ವಿಕಲಚೇತನರಿಗೆ ಉದ್ಯೋಗ ಅವಕಾಶ ಕಲ್ಪಿಸಲು ವಿದ್ಯಾ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕಿ ಪವಿತ್ರಾ ಗಿರಿ ಆಶ್ವಾಸನೆ ನೀಡಿದ್ದು, ಜಿಲ್ಲೆಯ ವಿಕಲಚೇತನರು ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಯಾವುದೇ ಪದವಿ ಪಡೆದವರಿಗೆ ಮಾಸಿಕ ರು. 6 ಸಾವಿರಗಳಿಂದ ಪ್ರಾರಂಭವಿದ್ದು, ಆ. 8 ರಂದು ಬೆಳಗ್ಗೆ 10 ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂದರ್ಶನ ಜರುಗಲಿದೆ. ಮೊದಲು ಅರ್ಜಿ ಸಲ್ಲಿಸುವುದು ಕಡ್ಡಾಯವಿದ್ದು, ಮಾಹಿತಿಗಾಗಿ ಮೊ. 9972468412, 9916042057, 9886081452 ಇಲ್ಲಿಗೆ ಸಂಪರ್ಕಿಸುವಂತೆ ಎಸ್.ಪಿ. ಅಣಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.