ಗದಗ

ಸಮೂಹದಲ್ಲಿ ಬಾಂಧವ್ಯ ಮುಖ್ಯ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಆ. 6
ಬಹು ಇತಿಹಾಸ ಹೊಂದಿರುವ ಭಾರತದಲ್ಲಿ ಹಲವಾರು ಜಾತಿಗಳಿದ್ದು, ಯಾವ ಜಾತಿ ಮೇಲು, ಕೀಳು ಎಂಬ ಭೇದ-ಭಾವ ತೋರದೆ ಇಲ್ಲಿ ಎಲ್ಲರೂ ಒಂದೇ ಎಂಬ ಮನೋಭಾವ ತೋರಿ ಬಾಳುವ ಮೂಲಕ ಸಮೂಹದಲ್ಲಿ ಉತ್ತಮ ಬಾಂಧವ್ಯ ಹೊಂದುವಂತೆ ಮಾಜಿ ಸಚಿವ ಸಿ.ಸಿ. ಪಾಟೀಲ ಕರೆ ನೀಡಿದರು.
ಸೋಮವಾರ ರಾತ್ರಿ ಪಟ್ಟಣದಲ್ಲಿ ರಮಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರಿಗೆ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.
ಮನುಷ್ಯನಿಗೆ ಪ್ರತಿದಿನ ಬದುಕಿನಲ್ಲಿ ಜಾತಿ ಮುಖ್ಯವಲ್ಲ. ಸಮೂಹದಲ್ಲಿ ಎಲ್ಲರೂ ಬಾಂಧವ್ಯದಿಂದ ಬಾಳುವುದು ಮುಖ್ಯ. ಇಂದಿನ ದಿನಗಳಲ್ಲಿ ನಮ್ಮ ಪೂರ್ವಜರು ಸಮಾಜದಲ್ಲಿ ಎಲ್ಲಾ ಜಾತಿಯವರು ಒಂದೇ ಎಂದು ನಡೆದುಕೊಂಡು ಬಂದಿದ್ದು, ಅವರಂತೆ ನಾವೆಲ್ಲರೂ ಜಾತಿ, ಭೇದ-ಭಾವ ತೋರದೆ ಒಂದೇ ಎನ್ನುವಂತೆ ಸಹೋದರತ್ವ ಭಾವನೆಯಿಂದ ಬದುಕಬೇಕಾಗಿದೆ ಎಂದರು.
ಪ್ರತಿಯೊಬ್ಬ ರಾಜಕಾರಣಿಗೆ ಅಧಿಕಾರ ಶಾಶ್ವತವಲ್ಲ. ಸಮಾಜ ಕಾರ್ಯ ಮಾಡಬೇಕೆಂದರೆ ಅಧಿಕಾರಿವು ಇರಬೇಕೆಂದಿಲ್ಲ. ಒಳ್ಳೆಯ ಕಾರ್ಯಕ್ಕೆ ಪಕ್ಷಭೇದ ಮರೆತು ಎಲ್ಲರೂ ಸಮಾಜದ ಏಳ್ಗೆಗೆ ಶ್ರಮಿಸಬೇಕಾಗಿದೆ ಎಂದರು. ಈ ಸಂದರ್ಭ ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಚಂದ್ರು ದಂಡಿನ, ರಾಜುಗೌಡ ಪಾಟೀಲ, ಹಸನಸಾಬ ಮಟಗೇರ, ಮಹೇಶ ಹಟ್ಟಿ, ಪುರಸಭೆ ಸದಸ್ಯ ವಾಸು ಜೋಗಣ್ಣವರ, ಚಂದ್ರಶೇಖರ ಕೋಟಿ, ಅನಿಲ ದರಿಯಣ್ಣವರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.