ದಾಯಾದಿ ಕಲಹ: ಇಬ್ಬರಿಗೆ ಗಾಯ
ಲಕ್ಷ್ಮೇಶ್ವರ: ಸಮೀಪದ ರಾಮಗೇರಿಯಲ್ಲಿ ಮಂಗಳವಾರ ಬೆಳಗ್ಗೆ ರಕ್ತ ಸಂಬಂಧಿಗಳು ಪರಸ್ಪರ ಹೊಡೆದಾಡಿದ ಘಟನೆ ಜರುಗಿದ್ದು, ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಶಿವಪ್ಪ ಶಿರಗುಪ್ಪಿ (58) ಹಾಗೂ ಆತನ ಮಗ ಬಸವರಾಜ ಯರಗುಪ್ಪಿ (28) ಇವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ.
ಶ್ರಾವಣ ಅಮಾವಾಸ್ಯೆ ನಿಮಿತ್ತ ಬೈಕ್ ತೊಳೆಯುವ ಸಂದರ್ಭದಲ್ಲಿ ಮನೆಯ ಮುಂದೆ ನೀರು ನಿಂತು ಗಲೀಜು ಉಂಟಾಗುವುದು ಎಂಬ ಕ್ಷುಲ್ಲಕ ಕಾರಣಕ್ಕೆ ಸಹೋದರ ಸಂಬಂಧಿಗಳಾಗಿರುವ ಶಿವಪ್ಪ ಮಲ್ಲಪ್ಪ ಯರಗುಪ್ಪಿ ಹಾಗೂ ನಿಲೇಶಪ್ಪ ನಿಂಗಪ್ಪ ಯರಗುಪ್ಪಿ ಇವರುಗಳ ಮಧ್ಯೆ ಪ್ರಾರಂಭವಾದ ಜಗಳ ಕೊನೆಗೆ ವಿಕೋಪಕ್ಕೆ ತಿರುಗಿ ಕೊನೆಗೆ ಪರಸ್ಪರ ಮಾರಕ ಆಯುಧಗಳಿಂದ ಹೊಡೆದಾಡಿದ್ದಾರೆ.
ಈ ಸಂದರ್ಭ ಶಿವಪ್ಪ ಮಲ್ಲಪ್ಪ ಯರಗುಪ್ಪಿ ಹಾಗೂ ಅವರ ಮಗ ಬಸವರಾಜ ಯರಗುಪ್ಪಿ ಮಾರಕ ಆಯುಧಗಳಿಂದ ಹೊಡೆಯಲಾಗಿದೆ.
ಈ ಘಟನೆಯಲ್ಲಿ ಶಿವಪ್ಪನ ಬಲ ತೋಳು ಮುರಿದಿದೆ. ಮಗ ಬಸವರಾಜನ ತಲೆಗೆ ಬಲವಾಗಿ ಹೊಡೆಯಲಾಗಿದ್ದು, ತಲೆಗೆ ತೀವ್ರ ಸ್ವರೂಪದ ಗಾಯವಾಗಿದೆ ಎಂದು ವೈದ್ಯರು ತಿಳಿಸಿದರು. ಘಟನೆಯಲ್ಲಿ ಶಿವಪ್ಪನ ಹೆಂಡತಿ ನಾಗವ್ವ ಯರಗುಪ್ಪಿ ಹಾಗೂ ಇನ್ನೊಬ್ಬ ಮಗ ನೀಲಪ್ಪ ಯರಗುಪ್ಪಿ ಇವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ತನಿಖೆ ಮಾಡಲಾಗುತ್ತಿದೆ ಎಂದು ಪಿಎಸ್ಐ ಶಿವಕುಮಾರ ಮುಚ್ಚಂಡಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

