ಗದಗ

ಇಂದಿನಿಂದ ಶ್ರಾವಣ ಪ್ರವಚನ

Published On :

ಮುಂಡರಗಿ:  ಇಲ್ಲಿನ ಜ. ಅನ್ನದಾನೀಶ್ವರ ಮಠದಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಆ 9ರಿಂದ ಸೆ. 5ರ ವರೆಗೆ ತಿಂಗಳ ಪರ್ಯಂತ ಜರುಗಲಿದೆ ಎಂದು ಪ್ರವಚನ ಸಮಿತಿ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ ಹಾಗೂ ಕಾರ್ಯದರ್ಶಿ ವಿ.ಸಿ. ಹಂಚಿನಾಳ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ  ಅವರು ಮಾತನಾಡಿ, ಪ್ರತಿದಿನ ಸಾಯಂಕಾಲ 7ರಿಂದ 9ರ ವರೆಗೆ ಶ್ರೀ ಮಠದ 9ನೇ ಪೀಠಾಧಿಶ್ವರ ಲೀಲಾ ಪುರುಷರಾದ ಶ್ರಿ ಜಗದ್ಗುರು ಅನ್ನದಾನೀಶ್ವರರ ಭವ್ಯ ಜೀವನ ದರ್ಶನ ಕುರಿತು ಪ್ರವಚನವನ್ನು ಪಂ. ಪುಟ್ಟರಾಜ ಗವಾಯಿಗಳ ಶಿಷ್ಯಂದಿರಾದ ವೀರಣ್ಣ ಶಾಸ್ತ್ರಿಗಳು ನಡೆಸಲಿದ್ದಾರೆ. ಪ್ರತಿ ವಾರಕೊಮ್ಮೆ ನಾಡು ನುಡಿ ಭಾಷಾ ವಿಷಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅಕ್ಕನ ಬಳಗದಿಂದ ರಂಗೋಲಿ ಸ್ಪರ್ಧೆ, ವಚನ ಕಂಠ ಪಾಠಸ್ಪರ್ಧೆ, ಬೆಳಗ್ಗೆ ಯೋಗ ಶಿಬಿರ ಕಾರ್ಯಕ್ರಮಗಳು ನಡೆಯಲಿದೆ. ಪ್ರವಚನ ಕಮಿಟಿಯ ಗೌರವಾಧ್ಯಕ್ಷರಾಗಿ ಶಿರಹಟ್ಟಿ ಶಾಸಕರ ರಾಮಕೃಷ್ಣ ದೊಡ್ಡಮನಿಯವರನ್ನು ನೇಮಿಸಿದ್ದು, ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಪ್ರವಚನ ಕಾರ್ಯಕ್ರಮ ಆಗಸ್ಟ್ 9ರ ಸಂಜೆ 7ಕ್ಕೆ ಆರಂಭಗೊಳ್ಳಲಿದೆ. ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜು ಮಹಾಸ್ವಾಮಿಗಳು ನೇತೃತ್ವ ವಹಿಸುವರು. ನಿವೃತ್ತ ಪ್ರಾಚಾರ್ಯ ಎಸ್.ಬಿ. ಕರಿಭರಮಗೌಡರ ಆಶಯ ನುಡಿ ಹೇಳುವರು.ಎ.ಕೆ. ಬೆಲ್ಲದ, ಈಶ್ವರಪ್ಪ ಹಂಚಿನಾಳ, ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ರಮೇಶಪ್ಪ ಭೂಮರೆಡ್ಡಿ, ಎಸ್.ಸಿ. ಡಂಬಳ, ವಿ.ಎಲ್. ನಾಡಗೌಡರ ಪಾಲ್ಗೊಳ್ಳುವರು ಎಂದು ತಿಳಿಸಿದರು. ಹಿರಿಯರಾದ ಶಂಕ್ರಪ್ಪ ಬಾರಿಕಾಯಿ, ಪ್ರವಚನ ಕಮೀಟಿ ಉಪಾಧ್ಯಕ್ಷ ಅಜ್ಜಯ್ಯ ಇಟಗಿಮಠ, ಕುಮಾರ ಬನ್ನಿಕೊಪ್ಪ, ಖಜಾಂಚಿ ಆರ್.ಆರ್. ಹೆಗ್ಗಡಾಳ, ಬಿ.ಸಿ. ನಾಡಗೌಡ್ರ, ಕೊಟ್ರೇಶ ನವಲಿಹಿರೇಮಠ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.