ಗದಗ

ಗಣಪತಿ ಮೂರ್ತಿ ಮೆರವಣಿಗೆ

Published On :

ಗಜೇಂದ್ರಗಡ:  ಸ್ಥಳೀಯ ಹಿರೇ ಅಗಸಿ ಬಳಿ ನಿರ್ಮಿಸಿರುವ ಸಾರ್ವಜನಿಕ ಗಣಪತಿ ದೇಗುಲದಲ್ಲಿ ಭಜರಂಗ ಸರ್ಕ್‌ಲ್ ಹಾಗೂ ಸಾರ್ವಜನಿಕ ಗಣಪತಿ ಸಮಿತಿ ವತಿಯಿಂದ ಶನಿವಾರ ಬಲಮುರಿ ಗಣಪತಿ ಮೂರ್ತಿ ಮೆರವಣಿಗೆ ಸಂಭ್ರಮದಿಂದ ನೆರವೇರಿತು. ಬೆಳಗ್ಗೆ 8 ಗಂಟೆಗೆ ಮಹಾಲಕ್ಷ್ಮಿ ಮಂದಿರದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಜಾಂಜಮೇಳ, ಸಂಗೀತ ವಾದ್ಯ ವೈಭವ, ಭಜನೆ ಜತೆಗೆ ಮಕ್ಕಳ ಕೋಲಾಟ, ನೃತ್ಯ ಗಮನ ಸೆಳೆದವು. ಹಿರೇ ಅಗಸಿ, ಪತ್ತಾರ ಗಲ್ಲಿ, ಹಿರೇ ಬಜಾರ, ಕೊಳ್ಳಿಯವರ ಕತ್ರಿ, ಕಂಬಾರ ಗಲ್ಲಿ, ಜೋಡು ರಸ್ತೆ, ದುರ್ಗಾ ವೃತ್ತದ ಮೂಲಕ ಸಂಚರಿಸಿ ಮರಳಿ ದೇಗುಲ ಸ್ಥಳ ತಲುಪಿತು. ಸಮಿತಿಯ ಅಧ್ಯಕ್ಷ ಚನ್ನಪ್ಪ ರೇವಡಿ, ಸುಭಾಸ ರಾಯಬಾಗಿ, ಭೀಮರಾವ್ ಸೂರ್ಯವಂಶಿ, ವಿಷ್ಣು ಅಂಬೋರೆ, ಕಳಕಪ್ಪ ಹಡಪದ, ರವಿ ಚಿತ್ರಗಾರ, ಕೃಷ್ಣಾಜಿ ಅಂಬೋರೆ, ಪರಸಪ್ಪ ಕಮ್ಮಾರ, ಬಸವರಾಜ ಚಂಗಳಿ, ಶ್ರೀನಿವಾಸ ಕಮ್ಮಾರ, ರಾಜು ಹೆಬ್ಬಾಳಕರ, ನಾಗೇಶ ಪವಾರ, ರಮೇಶ ರಾಯಬಾಗಿ, ಪ್ರಕಾಶ ಚಿತ್ರಗಾರ, ಮೆರವಣಿಗೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.