ಇಂದು ಜಾತ್ರೆ
ನರಗುಂದ: ತಾಲೂಕಿನ ಸಮೀಪದ ಅಮರಗೋಳ ಗ್ರಾಮದಲ್ಲಿ ಆ. 12ರಂದು ನಾಗಸ್ವಾಮೀಜಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾಧು ಸಂಸ್ಥಾನ ಮಠದ ಇಂಚಲಿಯ ಜಗದ್ಗುರು ಡಾ. ಶಿವಾನಂದ ಭಾರತಿ ಶ್ರೀಗಳು, ನರಗುಂದ ಪುಣ್ಯಾರಣ್ಯ ಪತ್ರಿವನ ಮಠದ ಗುರು ಸಿದ್ದವೀರ ಶ್ರೀಗಳು, ಭೈರಹನಟ್ಟಿ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಅಮರಗೋಳದ ಸೋಮಲಿಂಗ ಶ್ರೀಗಳು, ಸಿದ್ಧಾರೂಢ ಮಠದ ಶಿವಾನಂದ ಶ್ರೀಗಳು, ಗ್ರಾಮದ ಯುವಕ ಮಂಡಳದ ಸದಸ್ಯರು ಭಾಗವಹಿಸುವರು ಎಂದು ಪ್ರಕಟಣೆಗೆ ತಿಳಿಸಿದೆ.
ಇಂದು ಉರೂಸ್
ಗಜೇಂದ್ರಗಡ: ಸ್ಥಳೀಯ ಈದ್ಗಾ ಮೈದಾನ ಬಳಿಯ ಹಜರತ್ ಸೈಯ್ಯದ್ ಷಹಾ ಜಮಾಲ ಶಾವಲಿ ಖಾದ್ರಿ (ರಹೆಮತ್ಹುಲ್ಲಾ ಅಲೆಹೆ) ಅವರ ಉರೂಸ್ ಅಂಜುಮನ್ ಎ. ಇಸ್ಲಾಂ ಕಮಿಟಿ ವತಿಯಿಂದ ನಡೆಯಲಿದೆ. ಆ. 12ರಂದು ಗಂಧ, ಆ. 13ರಂದು ಉರೂಸ್ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಸಾಮೂಹಿಕ ಅನ್ನ ಸಂತರ್ಪಣೆ ಜರುಗಲಿದೆ. ಆ. 14ರಂದು ಜಿಯಾರತ್ ಕಾರ್ಯಕ್ರಮ ನಡೆಯಲಿದೆ ಎಂದು ಜಮಾಲಶಾವಲಿ ನೌಜವಾನ ಕಮಿಟಿ ತಿಳಿಸಿದೆ.
ಇಂದಿನಿಂದ ಗ್ರಾಪಂನೌಕರರ ಜಿಲ್ಲಾ ಸಮ್ಮೇಳನ
ಗದಗ: ಆ. 12 ಮತ್ತು 13ರಂದು ಗ್ರಾಮಪಂಚಾಯತ್ ನೌಕರರ ಗದಗ ಜಿಲ್ಲಾ ಸಮ್ಮೇಳನವನ್ನು ನಗರದ ಎಪಿಎಂಸಿ ಯಾರ್ಡ್ನಲ್ಲಿರುವ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಗ್ರಾಪಂ ನೌಕರರ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಅಧ್ಯಕ್ಷತೆಯನ್ನು ಗ್ರಾಪಂ ನೌಕರರ ಜಿಲ್ಲಾಧ್ಯಕ್ಷ ಬಸವರಾಜ ಮಂತೂರ, ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಸಿಇಓ ವೀರಣ್ಣ ತುರಮರಿ, ಗ್ರಾಪಂ ನೌಕರರ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ನಾಡಗೌಡ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿ ಸಿದೆ.
ಅಕ್ರಮ ಸಾರಾಯಿ: ಬಂಧನ
ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಆದ್ರಳ್ಳಿ ಗ್ರಾಮದ ಬಸವಣ್ಣದೇವರ ಗುಡಿಯ ಹತ್ತಿರ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನಿವಾಸಿ ಪರಮೇಶ ಲಮಾಣಿ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ರು. 6,109 ಮೌಲ್ಯದ ಹೈವಾಡ್ಸ್ ಚಿಯರ್ಸ್, ಡಿಲಕ್ಸ್, ವಿಂಡಸರ್ ಕ್ರೌನ್ ವಿಸ್ಕಿ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾರ್ಶ್ವವಾಯು: ಆತ್ಮಹತ್ಯೆ
ಗದಗ: ವಾತ ಮತ್ತು ಪಾರ್ಶ್ವವಾಯುನಿಂದ ಬಳಲುತ್ತಿದ್ದ ವಯೋವೃದ್ಧನೋರ್ವನು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮಹಾಗುಂಡಪ್ಪ ಕರಿಯಪ್ಪ ಭಗವತಿ (72) ಮೃತವ್ಯಕ್ತಿ. ವಾತ ಮತ್ತು ಪಾರ್ಶ್ವವಾಯುನಿಂದ ಬಳಲುತ್ತಿದ್ದರಿಂದ ಮಾನಸಿಕವಾಗಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

