ಗದಗ

ಇಂದು ಮಧ್ಯರಾತ್ರಿ ಧ್ವಜಾರೋಹಣ

Published On :

ನರೇಗಲ್ಲ: ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ಆ. 14ರ ಮಧ್ಯರಾತ್ರಿ ಧ್ವಜಾರೋಹಣವನ್ನು ಸಂತೆ ಬಜಾರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ನೆರವೇರಿಸಲಾಗುವುದೆಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪ್ರಕಟಣೆ ತಿಳಿಸಿದೆ. ನಿಡಗುಂದಿಕೊಪ್ಪದ ಶಿವಬಸವ ಮಹಾಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸುವರು. ನಿವೃತ್ತ ಶಿಕ್ಷಕ ಲಕ್ಷ್ಮಣರಾವ್ ಗ್ರಾಮಪುರೋಹಿತ ಅಧ್ಯಕ್ಷತೆ ವಹಿಸುವರು. ಮಧ್ಯರಾತ್ರಿ ಧ್ವಜಾರೋಹಣದ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಪಪಂ ಸದಸ್ಯ ಕಲ್ಮೇಶ ತೊಂಡಿಹಾಳ ಮತ್ತು ಪಿಎಲ್‌ಡಿ ಬ್ಯಾಂಕಿನ ಮಾಜಿ ನಿರ್ದೇಶಕ ಬಸನಗೌಡ ಬಿಷ್ಟನಗೌಡ್ರ ಸೇರಿದಂತೆ ಹಲವಾರು ಪ್ರಮುಖರು ಪಾಲ್ಗೊಳ್ಳುವರು. ನರಗುಂದದ ನೈಸರ್ಗಿಕ ಚಿಕಿತ್ಸೆ ತಜ್ಞ ಹನಮಂತ ಮಳಲಿ ಮುಖ್ಯ ವಕ್ತಾರರಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮಧ್ಯರಾತ್ರಿ ಧ್ವಜಾರೋಹಣ
ಗದಗ: ತಾಲೂಕಿನ ಕೋಟುಮಚಗಿ ಗ್ರಾಮದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಗ್ರಾಮ ಘಟಕಗಳ ಸಹಯೋಗದಲ್ಲಿ ಆ. 14ರ ಮಧ್ಯರಾತ್ರಿ ಗ್ರಾಮದಲ್ಲಿರುವ ಮಾರುತಿ ದೇವಸ್ಥಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ರೋಣ ಗುಲಗಂಜಿ ಮಠದ ಗುರುಪಾದ ದೇವರು ಸಾನ್ನಿಧ್ಯ ವಹಿಸುವರು. ಎಂ.ಬಿ. ರಮಣಿ ಅಧ್ಯಕ್ಷತೆ ವಹಿಸುವರು. ಕೆ.ಎ.ಹಮ್ಮಗಿ ಆಗಮಿಸುವರು. ವಿಶೇಷ ಉಪನ್ಯಾಸಕರಾಗಿ ಮಾರುತಿ ಕಟ್ಟಿಮನಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಸಿಎಂ ಸಿದ್ದು ಜನ್ಮದಿನ: ಹಣ್ಣು, ಹಾಲು ವಿತರಣೆ
ಲಕ್ಷ್ಮೇಶ್ವರ: ಸಿಎಂ ಸಿದ್ದರಾಮಯ್ಯ ಅವರ ಜನ್ಮ ದಿನದಂದು ಬಡ ರೋಗಿಗಳಿಗೆ ಹಣ್ಣು, ಹಾಲು ಹಂಚುವ ಮೂಲಕ ಅವರ ತತ್ವ ಆದರ್ಶಗಳಿಗೆ ಗೌರವ ನೀಡುವ ಕಾರ್ಯವನ್ನು ರಾಜ್ಯ ಎಸ್.ಟಿ. ಘಟಕವು ರಾಜ್ಯಾದ್ಯಂತ ಆಚರಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಎಸ್.ಟಿ. ಘಟಕದ ಅಧ್ಯಕ್ಷ ಟಿ. ಈಶ್ವರ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ ಅವರ ಜನ್ಮದಿನದ ಅಂಗವಾಗಿ ಬಡ ರೋಗಿಗಳಿಗೆ ಹಣು, ಹಾಲು, ಬ್ರೆಡ್‌ನ್ನು ವಿತರಿಸಿ ನಂತರ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿರುವ ಅವರ ಆರೋಗ್ಯ, ಆಯುಷ್ಯ ಹೆಚ್ಚಾಗಲಿ ಎಂದು ಅಲ್ಲ ಅಭಿಮಾನಿಗಳ ಆಶಯವಾಗಿದೆ ಎಂದರು. ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಶಿವಣ್ಣ ನೆಲುವಿಗಿ, ಪುರಸಭೆಯ ಮಾಜಿ ಅಧ್ಯಕ್ಷ ವಿ.ಜಿ. ಪಡಿಗೇರಿ, ಜಯಕ್ಕ ಕಳ್ಳಿ, ಎಚ್.ಎಂ. ಗೂಡೂರ, ಬಸಣ್ಣ ಕಳಸದ, ಯಲ್ಲಪ್ಪ ತಳವಾರ, ರಾಮು ತಳವಾರ, ಆನಂದ ಪೂಜಾರ ನೀಲಪ್ಪ ಶೆರಸೂರಿ, ಅಮರೇಶ ತೆಂಬದಮನಿ, ವಿಜಯ ಕುಂಬಿ, ಕಿರಣ ನವಲೆ, ವೆಂಕಟೇಶ ಮಾತಾಡೆ ಮುಂತಾದವರು ಹಾಜರಿದ್ದರು.

ರಾಜೀವ ಗಾಂಧಿ ಸದ್ಭಾವನಾ ಜ್ಯೋತಿಯಾತ್ರೆ
ಗದಗ: ದೇಶದಲ್ಲಿ ಭಯೋತ್ಪಾದನೆಯಂತಹ ಕೃತ್ಯವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದಲೇ ರಾಜೀವಗಾಂಧಿ ಸದ್ಭಾವನಾ ಜ್ಯೋತಿ ಯಾತ್ರೆ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಸ್.ಎಸ್. ಪ್ರಕಾಶಂ ಹೇಳಿದರು.
ಅವರು ಭಾನುವಾರ ನಗರದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಎದುರು ಕೊಪ್ಪಳ ಮಾರ್ಗವಾಗಿ ಬಂದ ರಾಜೀವಗಾಂಧಿ ಸದ್ಭಾವನಾ ಜ್ಯೋತಿ ಯಾತ್ರೆಯ ಸ್ವಾಗತ ಸಮಾರಂಭದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಗದಗ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬರಮಾಡಿಕೊಂಡ ನಂ ತರ ಬೈಕ್ ರ್ಯಾಲಿ ಮುಖಾಂತರ ಕಾಟನ್ ಸೇಲ್ ಸೊಸೈಟಿಗೆ ತರಲಾಯಿತು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಗಡ್ಡದೇವರಮಠ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಡಾ. ಪ್ರ್ಯಾಂಕ್ಲಿನ್ ದಲಂಭಜನ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಯಾತ್ರೆಯನ್ನು ಬೈಕ್ ರ್ಯಾಲಿಯ ಮೂಲಕ ತೆರಳಿ ಬೀಳ್ಕೊಡಲಾಯಿತು. ಮುಖಂಡರಾದ ಅಶೋಕ ಮಂದಾಲಿ, ಉಮರ್‌ಫಾರೂಕ್ ಹುಬ್ಬಳ್ಳಿ, ಸಿದ್ದಲಿಂಗೇಶ್ವರ ಪಾಟೀಲ, ಅನಿಲ ಸಿಂಗಟಾಲಕೇರಿ, ಬಸವರಾಜ ಕಡೇಮನಿ, ವಿಕಾಸ ಸಾಹುಕಾರ, ಸುಧೀರ ಶಿವಪುರ, ಪರಪ್ಪ ಕಮತರ, ಚನ್ನವೀರ ಮಲ್ಲಿಕ್, ಅಜಯ ಪಾಟೀಲ, ಅನಿಲ ಪಾಟೀಲ, ಯಾಸ್ಮಿನ ಬಳ್ಳಾರಿ, ಸುನೀಲ ಬದಿ, ಕಿಶೋರ ಮುದಗಲ್ಲ, ಶ್ರೀಧರ ರಂಗ್ರೇಜ್, ರಾಜು ಶಿಂಧೆ, ಕೊಂಡಾಬಿಂಗಿ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.