ಗದಗ

ದೇವಿಯ ಆರಾಧನೆಯಿಂದ ಪಾಪ ನಾಶ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಆ. 16
ಆದಿಶಕ್ತಿ ದೇವಿಯ ಆರಾಧನೆಯನ್ನು 49 ದಿನಗಳವರೆಗೆ ಮಾಡುವುದರಿಂದ ನಾವು ಮಾಡಿದ ಪಾಪ ಕರ್ಮಗಳು ನಾಶವಾಗುತ್ತವೆ ಎಂದು ವೈದ್ಯ ಬಾಬುರಾವ ಕುಲಕರ್ಣಿ ಅಭಿಪ್ರಾಯ ಪಟ್ಟರು.
ಈಚೆಗೆ ಪಟ್ಟಣದ ಗ್ರಾಮದೇವಿಯ ನೂತನ ದೇವಸ್ಥಾನದ ಕಟ್ಟಡವನ್ನು ಬನ್ನಿ ಸಸಿಯನ್ನು ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಗ್ರಾಮದೇವಿಯ ದೇವಸ್ಥಾನವು ಪುರಾತನವಾದ ಇತಿಹಾಸವನ್ನು ಹೊಂದಿದೆ. ಅದು ಕಾಲಕ್ರಮೇಣ ಶಿಥಿಲಾವಸ್ಥೆಗೆ ತಲುಪಿದ್ದ ಕಾರಣ ಅದನ್ನು ಗುಡಿಯನ್ನು ಜೀರ್ಣೋದ್ಧಾರ ಮಾಡುವ ಮೂಲಕ ಹಿಂದಿನ ಪರಂಪರೆ ಉಳಿಸಿ ಬೆಳೆಸುವ ಕಾರ್ಯವನ್ನು ಇಂದಿನ ಪೀಳಿಗೆ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ನಮ್ಮೂರಿನ ದೇವಿಯ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಮಿರಜ ಸಂಸ್ಥಾನಿಕರು ಪುಲಿಗೆರೆಯನ್ನು ಆಳುತ್ತಿರುವ ಸಂದರ್ಭದಲ್ಲಿ ಇಲ್ಲಿ ಆಳುತ್ತಿದ್ದ ರಾಜರು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಮಾಡುವ ಮುನ್ನ ದೇವಿಯ ದರ್ಶನ ಪಡೆದುಕೊಂಡು ತಮ್ಮ ಕಾರ್ಯವನ್ನು ಆರಂಭಿಸುತ್ತಿದ್ದರು ಎಂದರು.
ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್, ರಾಮಣ್ಣ ಲಮಾಣಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾರಂಭದಲ್ಲಿ ದೇವಸ್ಥಾನ ನಿರ್ಮಾಣದಲ್ಲಿ ಸಹಕರಿಸಿದ ಹಿರಿಯರನ್ನು ಸನ್ಮಾನಿಸಲಾಯಿತು. ಶಂಕ್ರಣ್ಣ ಗೊರವರ, ಶಿವಣ್ಣ ಕೋಳಿವಾಡ, ವೀರಭದ್ರಗೌಡ ಪಾಟೀಲ, ಪೂರ್ಣಾಜಿ ಖರಾಟೆ, ಪುಸರಭೆ ಸದಸ್ಯ ಎಂ.ಆರ್.ಪಾಟೀಲ, ದೇವರಡ್ಡಿ ಮೂಲಿಮನಿ, ಜಯಕ್ಕ ಕಳ್ಳಿ, ಬಸವರಾಜ ಕೊಟಗಿ, ಸೋಮನಗೌಡ ಪಾಟೀಲ, ನಿಂಗಪ್ಪ ಬನ್ನಿ, ದೇವೇಂದ್ರಪ್ಪ ಬಳಿಗಾರ, ಪ್ರಲ್ಹಾದ ಕುಲಕರ್ಣಿ, ಮಹೇಶ ಹೊಗೆಸೊಪ್ಪಿನ, ಎನ್.ಜಿ. ಹೊಂಬಳ ಮುಂತಾದವರು ಹಾಜರಿದ್ದರು. ಎಲ್.ಸಿ. ಲಿಂಬಯ್ಯಸ್ವಾಮಿಮಠ ಸ್ವಾಗತಿಸಿದರು. ಬಿ.ಎಸ್. ಬಾಳೇಶ್ವರಮಠ ಹಾಗೂ ದಿಗಂಬರ ಪೂಜಾರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.