ಉಚಿತ ತರಬೇತಿ
ಗದಗ: ಡಾ. ಎಸ್.ವಿ.ಟಿ. ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ ಗದಗ ಇಲ್ಲಿ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ, ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಡಿಜಿಇಟಿಯಿಂದ ಮಾನ್ಯತೆ ಪಡೆದಂತಹ ಕೋರ್ಸ್ಗಳಾದ ಕಂಪ್ಯೂಟರ್ ಬೇಸಿಕ್, ಡಿಟಿಪಿ, ಟ್ಯಾಲಿ, ಹಾರ್ಡವೇರ್ ಮತ್ತು ನೆಟವರ್ಕಿಂಗ್, ಬ್ಯಾಂಕಿಂಗ್ ಮತ್ತು ಅಕೌಂಟಿಂಗ್, ಮೊಬೈಲ್ ರಿಪೇರಿ, ಟೈಲರಿಂಗ್ ಮತ್ತು ಕಸೂತಿ ಮುಂತಾದ ಉಚಿತ ತರಬೇತಿಗಳನ್ನು ಆಗಸ್ಟ್ 26ನೇ ತಾರೀಖಿನಿಂದ ಪ್ರಾರಂಭಿಸಲಾಗುವುದು. ತರಬೇತಿ ನಂತರ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಮಂಡಳಿ (ಎನ್ಸಿವ್ಹಿಟಿ) ಯಿಂದ ರಾಷ್ಟ್ರೀಯ ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಸಂಸ್ಥೆಯ ಕೇಂದ್ರ ಕಚೇರಿ ಎಸ್.ವ್ಹಿ.ಟಿ ಫೌಂಡೇಶನ್, ಕುಮಾರವ್ಯಾಸ ಸಂಕೀರ್ಣದ ಹತ್ತಿರ ಬಸವೇಶ್ವರ ನಗರ, ಇಲ್ಲಿ ಖುದ್ದಾಗಿ ಬಂದು ಪ್ರವೇಶ ಪಡೆಯಬೇಕು. ಮಾಹಿತಿಗಾಗಿ 9916267077, 9448729748 ಸಂಪರ್ಕಿಸಬಹುದು.
ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಲು ಅವಕಾಶ
ಗದಗ: ಜಿಲ್ಲೆಯಲ್ಲಿ ಸನ್ 2013-14ನೇ ಸಾಲಿಗೆ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಯಲ್ಲಿ ವಿವಿಧ ನಮೂನೆಯ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅರ್ಹ ಸದಸ್ಯರಿಂದ ರು. 10 ವಂತಿಗೆಯನ್ನು ಮಾತ್ರ ಸಂಘಕ್ಕೆ ಪಾವತಿಸಿ ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಲು ಅವಕಾಶವಿರುತ್ತದೆ. ಕಾರಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದವರು ಸದರ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಸಹಕಾರ ಸಂಘಗಳ ಉಪನಿಬಂಧಕರು ಗದಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕಾನೂನು ಸಾಕ್ಷರತಾ ಕಾರ್ಯಕ್ರಮ
ಲಕ್ಷ್ಮೇಶ್ವರ: ಪಟ್ಟಣದ ಜನ್ನತ ನಗರದ ಅಂಗನವಾಡಿ ಕೇಂದ್ರದಲ್ಲಿ ಆ. 19ರ ಬೆಳಗ್ಗೆ 9.30 ಗಂಟೆಗೆ ತಾಲೂಕು ಕಾನೂನು ಸೇವಾ ಸಮಿತಿ, ಸಹಾಯಕ ಸರ್ಕಾರಿ ಅಭಿಯೋಜಕರು, ವಕೀಲರ ಸಂಘ ಲಕ್ಷ್ಮೇಶ್ವರ ಹಾಗೂ ಇನ್ನಿತರ ಸಂಘಟನೆಗಳ ಸಹಯೋಗದೊಂದಿಗೆ ಕಾನೂನು ಸಾಕ್ಷರತಾ ರಥ ಹಾಗೂ ಜನತಾ ನ್ಯಾಯಾಲಯದ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಗದಗ ಜಿಲ್ಲಾ ಸತ್ರ ನ್ಯಾಯಾಧೀಶ ಟಿ.ಎಚ್. ಆವಿನ ನೆರವೇರಿಸುವರು. ಉಪನ್ಯಾಸಕರಾಗಿ ಎನ್.ಸಿ. ಅಮಾಸಿ ಅವರು ಮಹಿಳಾ ಮತ್ತು ಮಕ್ಕಳ ಆರೋಗ್ಯ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶಗಳ ಕುರಿತು ಉಪನ್ಯಾಸ ನೀಡುವರು. ಅತಿಥಿಗಳಾಗಿ ಲಕ್ಷ್ಮೇಶ್ವರ ದಿವಾಣಿ ನ್ಯಾಯಾಧೀಶ, ವಿಜಯಕುಮಾರ ಕನ್ನೂರ, ವಿ.ಆರ್. ಪಾಟೀಲ, ತಹಸೀಲ್ದಾರ್ ಆರ್.ಡಿ. ಉಪ್ಪಿನ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರುಡಿ, ಪಿ.ಪಿ.ನಾಯ್ಡು, ವೈ.ಎಲ್. ಹಂಪಣ್ಣ, ಎಸ್.ಕೆ. ಹೊನ್ನಾಗೌಡರ, ಶಿವಕುಮಾರ ಮುಚ್ಚಂಡಿ, ಪಿ.ಎಂ. ನಾವಿ, ವಿ.ಎಸ್. ಪಶುಪತಿಹಾಳ, ಎಂ.ಎಂ. ಬೊಮ್ಮನಕಟ್ಟಿ ಮುಂತಾದವರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

