ಮುಂಡರಗಿ: ಆರಾಧನಾ ಮಹೋತ್ಸವ ಆರಂಭ
ಮುಂಡರಗಿ: ಪಟ್ಟಣದ ರಾಮೇನಹಳ್ಳಿ ರಸ್ತೆಯಲ್ಲಿರುವ ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರತೀರ್ಥ ಗುರುಸಾರ್ವಭೌಮರ 342ನೇ ಆರಾಧನಾ ಮಹೋತ್ಸವ ಆ. 21ರಿಂದ ಪ್ರಾರಂಭವಾಗಿದ್ದು ಆ. 24ರ ವರೆಗೆ ನಡೆಯಲಿದೆ. ಆ. 22ರಂದು ಸಂಜೆ 6 ಗಂಟೆಗೆ ಗುರುರಾಜ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, 6.30 ಗಂಟೆಗೆ ಶ್ರೇಯಾ ಜೋಶಿ ಅವರಿಂದ ಭರತನಾಟ್ಯ, ಸಂಜೆ 7 ಗಂಟೆಗೆ ಮಂಜರಿ ಹೊಂಬಾಳೆ ಅವರಿಂದ ಸಂಗೀತ ಕಾರ್ಯಕ್ರಮ, 7.30ಕ್ಕೆ ಮುದಿಯಪ್ಪ ಭಜಂತ್ರಿ ಅವರಿಂದ ಕ್ಲಾರಿಯೋನೆಟ್ ವಾದನ, ರಾತ್ರಿ 8.30ಕ್ಕೆ ಪಲ್ಲಕ್ಕಿ, ರಥೋತ್ಸವ, ಸ್ವಸ್ತಿವಾಚನ ಮತ್ತು ಮಂಗಳಾರತಿ ಜರುಗಲಿದೆ. ಆ. 23ರಂದು ಸಂಜೆ 6 ಗಂಟೆಗೆ ವಾಸವಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, 6.30ಕ್ಕೆ ಸೌಮ್ಯಾ ಕುಲಕರ್ಣಿ ಅವರಿಂದ ಭರತನಾಟ್ಯ, ಸಂಜೆ 7ಕ್ಕೆ ಕನಕಗಿರಿಯ ಹುಸೇನಸಾಬ್ ದಾಸ ಅವರಿಂದ ದಾಸವಾಣಿ ಕಾರ್ಯಕ್ರಮವಿದೆ. ಪ್ರತಿದಿನ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಾದಪೂಜೆ ಕನಕಾಭಿಷೇಕ, ನೈವೇದ್ಯ, ಹಸ್ತೋದಕ ಮತ್ತು ಮಂಗಲಾರತಿ, ಸಂಜೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಪ್ರವಚನ, ತೀರ್ಥಪ್ರಸಾದ ಕಾರ್ಯಕ್ರಮಗಳು ನಡೆಯುವವು. ಆ. 24ರಂದು ಬೆಳಗ್ಗೆ 5.30ಕ್ಕೆ ನಿರ್ಮಲ್ಯ ವಿಸರ್ಜನೆ, 6ಕ್ಕೆ ಸುಪ್ರಭಾತ, ಬೆಳಗ್ಗೆ 7ಕ್ಕೆ ಪಂಚಾಮೃತ ಅಭಿಷೇಕ, 10ಕ್ಕೆ ಪಾದಪೂಜೆ, ಕನಕಾಭಿಷೇಕ, 12ಕ್ಕೆ ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ಸಂಜೆ 5 ಗಂಟೆಗೆ ಸ್ವಸ್ತಿವಾಚನ ಮತ್ತು ಮಹಾಮಂಗಳಾರತಿ ನಡೆಯುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆರಾಧನಾ ಸಮಿತಿ ಅಧ್ಯಕ್ಷ ನಾರಾಯಣಪ್ಪ ಇಲ್ಲೂರ ತಿಳಿಸಿದ್ದಾರೆ.
ಬೆಲೆ ಹೆಚ್ಚಳ: ಖಂಡನೆ
ಗದಗ: ಇತ್ತೀಚಿಗೆ ಮಾರುಕಟ್ಟೆಯಲ್ಲಿ ನಿತ್ಯದ ದಿನಬಳಕೆಯ ವಸ್ತುಗಳ ಬೆಲೆಯು ಗಗನ್ಕಕೇರುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರವು ಕಣ್ಮುಚ್ಚಿ ಕುಳಿತಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ ಎಂದು ನಗರಸಭೆಯ ಸದಸ್ಯ ಸದಾನಂದ ಪಿಳ್ಳೆ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಮುಖವಾಗಿ ಈರುಳ್ಳಿ ಒಂದು ಕೆಜಿಗೆ ರು. 70 ಇದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಹಸಿ ಶುಂಠಿ (ಅಲ್ಲಾ) ರು. 200 ಕೆಜಿಗೆ ಆಗಿದೆ. ಇನ್ನೂ ಹಲವು ನಿತ್ಯದ ವಸ್ತುಗಳ ಬೆಲೆ ಹೆಚ್ಚುತ್ತಿದ್ದು, ಮಾರುಕಟ್ಟೆಯಲ್ಲಿ ಕೃತಕ ಅಭಾವವನ್ನು ಸೃಷ್ಟಿಸಿ ಜನಸಾಮಾನ್ಯರನ್ನು ಕಂಗಾಲಾಗುವಂತೆ ಮಾಡಿ ಅನಿವಾರ್ಯವಾಗಿ ಜನ ಸಾಮಾನ್ಯರು ಹೆಚ್ಚಿನ ಬೆಲೆ ಕೊಟ್ಟು ಕೊಂಡುಕೊಳ್ಳುವಂತೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕಸ್ತೂರೆವ್ವ ಗರಡ್ಡಿ ನಿಧನ
ರೋಣ: ತಾಲೂಕಿನ ಅರಹುಣಸಿ ಗ್ರಾಮದ ಕಸ್ತೂರೆವ್ವ ಗರಡ್ಡಿ (44) ಮಂಗಳವಾರ ರಾತ್ರಿ ನಿಧನರಾದರು. ಮೃತರಿಗೆ ಪತಿ, ಮೂವರು ಪುತ್ರರು ಹಾಗೂ ಅಪಾರ ಬಂಧು-ಬಳಗ ಇದ್ದಾರೆ. ಶಾಸಕ ಜಿ.ಎಸ್. ಪಾಟೀಲ, ಬಿ.ಆರ್. ಯಾವಗಲ್, ಮಾಜಿ ಸಂಸದ ಆರ್.ಎಸ್. ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಮಾಜಿ ಉಪಾಧ್ಯಕ್ಷ ದಶರಥ ಗಾಣಿಗೇರ, ಕೆ.ಪಿ. ಪಾಟೀಲ, ಶಂಕರಗೌಡ ಗಿರಡ್ಡಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

