ಗದಗ

ಸಂಗೀತದಿಂದ ಸದ್ಭಾವನೆ: ಶೆಟ್ಟರ್

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 21
ಸರ್ವರಿಗೂ ಸಂತೋಷ ನೀಡುವ ಶಕ್ತಿ ಸಂಗೀತಕ್ಕೆಯಿದ್ದು, ಸದ್ಭಾವನೆ ಹಾಗೂ ಕೋಮು ಸೌಹಾರ್ದತೆಯನ್ನು ಬೆಳೆಸುವಲ್ಲಿ ಸಂಗೀತದ ಪಾತ್ರ ಗಮನಾರ್ಹವಾಗಿದೆ ಎಂದು ಸಂಗೀತಗಾರ ಡಾ. ಮೃತ್ಯುಂಜಯ ಶೆಟ್ಟರ್ ಹೇಳಿದರು.
ಅವರು ಮಂಗಳವಾರ ಪಂಡಿತ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ರಾಜೀವಗಾಂಧಿಯವರ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸದ್ಭಾವನಾ ಹಾಗೂ ಕೋಮು ಸೌಹಾರ್ದತೆ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧ್ವೇಷ, ಅಸೂಯೆ ವೈರತ್ವವನ್ನು ಬಿಟ್ಟು ಪ್ರೀತಿ, ಪ್ರೇಮ, ಕರುಣೆ, ಸಹಾಯ, ಸಹಕಾರ ಸೌಹಾರ್ದತೆಯನ್ನು ಎಲ್ಲರೂ ಮೈಗೂಡಿಸಿಕೊಂಡು ಬಾಳಿ ಬದುಕಿ, ಇತರರಿಗೆ ಆದರ್ಶಪ್ರಾಯರಾಗಬೇಕಾಗಿದೆ ಎಂದರು. ಪ್ರೊ. ಗಂಗಾಧರ ಹಿಡ್ಕಿಮಠ ಮಾತನಾಡಿ, ಆ ಜಾತಿ ಈ ಜಾತಿ ಎಂಬ ಭೇದ ತೊಲಗಲಿ ಭವ್ಯ ಭಾರತದ ಒಂದೇ ಜ್ಯೋತಿ ಬೆಳಗಲಿ ಎಂದು ಹೇಳಿ ಸದ್ಭಾವನೆ ಹಾಗೂ ಕೋಮು ಸೌಹಾರ್ದತೆ ಬೆಳೆಸುವಲ್ಲಿ ಶಾಲೆ ಕಾಲೇಜುಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಡಿತ ರವಿಂದ್ರ ಜಕಾತಿ ಮಾತನಾಡಿ, ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳವರ ಜೀವನ, ಬದುಕು, ಸದ್ಭಾವನೆ ಹಾಗೂ ಕೋಮು ಸೌಹಾರ್ದತೆ ಮೂಡಿಸುವುದಾಗಿತ್ತು.
ವೀರೇಶ್ವರ ಪುಣ್ಯಾಶ್ರಮದಲ್ಲಿ ಎಲ್ಲ ಜಾತಿ ಜನಾಂಗದವರು ಸಂಗೀತವನ್ನು ಕಲಿತು ತಮ್ಮ ಜೀವನ ರೂಪಿಸಿಕೊಳ್ಳುತ್ತಾರೆ ಎಂದರು. ದತ್ತಾತ್ರೇಯ ಜೀರಂಕಲಗಿಯವರು ಎಲ್ಲರಿಗೂ ಸದ್ಭಾವನಾ ಹಾಗೂ ಕೋಮು ಸೌಹಾರ್ದತೆಯ ಪ್ರತಿಜ್ಞಾವಿಧಿ ಭೋದಿಸಿದರು. ಎಸ್.ಸಿ. ಹಿರೇಮಠ ಉಪಸ್ಥಿತರಿದ್ದರು. ಗುರುನಾಥ ಸುತಾರ ನಿರೂಪಿಸಿದರು. ಪ್ರೊ. ಎಸ್.ಎಸ್. ಗಡ್ಡದಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.