ಮನುಷ್ಯರೆಲ್ಲರೂ ಸಮಾನರು
ಅಣ್ಣಿಗೇರಿ: ವಿಶ್ವಸಂಸ್ಥೆಯ ಘೋಷವಾಕ್ಯ ಮನುಷ್ಯರೆಲ್ಲರೂ ಸಮಾನರು ಎಂದಿದೆ. ಆದರೆ ಇದನ್ನೇ ಅಣ್ಣಿಗೇರಿಯ ಆದಿಕವಿ ಪಂಪ ಸಾವಿರ ವರ್ಷಗಳ ಹಿಂದೆಯೇ 'ಮನುಜಕುಲಂ ತಾನೊಂದೆ ವಲಂ' ಎಂದು ಹೇಳಿದ್ದಾನೆ. ಸಂವಿಧಾನ ರಚಿಸಿದ ಭೀಮರಾವ್ ಅಂಬೇಡ್ಕರ್‌ಗೆ ಸಾಮರ್ಥ್ಯ ಬಂದುದು ಬದುಕಿನುದ್ದಕ್ಕೂ ಬರೀ ನೋವುಂಡು ಆತ್ಮಗೌರವ ಬೆಳೆಸಿಕೊಂಡಿದ್ದರಿಂದ ಎಂದು ಗದಗ ತೋಂಟದ ಶ್ರೀಗಳು ಹೇಳಿದರು.
ಸ್ಥಳೀಯ ಗಾಂಧಿ ನಗರದಲ್ಲಿ ಬಸವ ಕೇಂದ್ರ ಆಯೋಜಿಸಿದ್ದ ಶರಣ ಶ್ರಾವಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ವಿದ್ಯೆ. ದಲಿತ ವರ್ಗದ, ತುಳಿತಕ್ಕೊಳಗಾದ ಮಚಗಾರ, ಚಮ್ಮಾರ, ಹರಿಜನ, ಮ್ಯಾದಾರರು ಮೊದಲು ನಿಮ್ಮ ಮಕ್ಕಳಿಗೆ ವಿದ್ಯೆ ಕೊಡಿಸಬೇಕು ಎಂದರು.
ಸುಶೀಲಾ ಬೆಟಗೇರಿ ಶರಣೆ ದುಗ್ಗಳೆ ಕುರಿತು ಉಪನ್ಯಾಸ ನೀಡಿದರು. ಶಾಸಕ ಎನ್.ಎಚ್. ಕೋನರಡ್ಡಿ, ಹನುಮಂತಪ್ಪ ಉಣಕಲ್, ಗಂಗವ್ವ ಉಣಕಲ್, ತಿಪ್ಪಣ್ಣ ಮುತ್ತಣ್ಣ, ಬಸವಣ್ಣೆಪ್ಪ, ಪರಸಪ್ಪ, ರಾಮಣ್ಣ, ಯಲ್ಲಪ್ಪ ಉಣಕಲ್, ಮುಖ್ಯಾಧ್ಯಾಪಕ ಬಸವರಾಜ ಉಣಕಲ್ ಅವರನ್ನು ಶ್ರೀಗಳು ಆಶೀರ್ವದಿಸಿದರು.
ದುರ್ಗಾದೇವಿ ಭಜನಾ ಸಂಘದ ಯುವಕರು ವಚನ ಭಜನೆ ಮಾಡಿದರು. ಪ್ರೊ. ಎಸ್.ಎಸ್. ಹರ್ಲಾಪುರ ಪ್ರಾಸ್ತಾವಿಕ ಮಾತನಾಡಿದರು. ಸುನೀಲ ಗೋಡಬೋಲೆ, ಹಾಲಪ್ಪ ತುರಕಾಣಿ, ಷಣ್ಮುಖ ಗುರಿಕಾರ, ಷಣ್ಮುಖ ತೋಟಕಾವು, ಚಂಬಣ್ಣ ಹುಬ್ಬಳ್ಳಿ, ಬಸಪ್ಪ ಕರ್ಲವಾಡ ಹಾಗೂ ಪಟ್ಟಣದ ಹಿರಿಯರು ಮಹಿಳೆಯರು ಭಾಗವಹಿಸಿದ್ದರು. ಬಸವರಾಜ ಉಣಕಲ್ ಸ್ವಾಗತಿಸಿದರು, ಶಿಕ್ಷಕಿ ಯಶೋದಾ ಉಣಕಲ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

