ಸುದ್ದಿ ಸಂಕ್ಷೇಪ
ನಾಳೆಯಿಂದ ಜಾತ್ರಾ ಮಹೋತ್ಸವ
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕಪೋತಗಿರಿಯ ಕಪ್ಪತ್ತ ಮಲ್ಲೇಶ್ವರಸ್ವಾಮಿ ಹಾಗೂ ಭ್ರಮರಾಂಬಾದೇವಿಯ ವಿವಾಹ ಹಾಗೂ ಜಾತ್ರಾಮಹೋತ್ಸವದ ಕಾರ್ಯಕ್ರಮಗಳು ಆ. 29ರಿಂದ ಆರಂಭಗೊಳ್ಳಲಿವೆ. ಆ. 29ರ ಬೆಳಗ್ಗೆ 11 ರಿಂದ 12.30 ರವರೆಗೆ ಕಪ್ಪತ್ತಮಲ್ಲೇಶ್ವರ ಹಾಗೂ ಭ್ರಮರಾಂಭದೇವಿಯ ವಿವಾಹದೊಂದಿಗೆ ಜಾತ್ರಾ ಮಹೋತ್ಸವವು ಮಠದ ಸಂಪ್ರದಾಯದಂತೆ ಜರುಗುವುದು. ಆ. 31ರಂದು ಡಂಬಳ ಗ್ರಾಮದ ಕಪ್ಪತ್ತ ಮಲ್ಲೇಶ್ವರ ಹಾಗೂ ಭ್ರಮರಾಂಭದೇವಿ ಮೂರ್ತಿ ಆಗಮನ, ಸಂಜೆ 5 ಗಂಟೆಗೆ ಮಠದ ಧರ್ಮಾಧಿಕಾರಿಗಳಿಂದ ಬರಮಾಡಿಕೊಳ್ಳುವ ಕಾರ್ಯಕ್ರಮ. ಸೆ. 1 ರಂದು ಬೆಳಗ್ಗೆ 11 ಗಂಟೆಗೆ ಡಂಬಳ ಗ್ರಾಮದ ದೈವದವರು ಹಾಗೂ ಸುತ್ತ-ಮುತ್ತಲಿನ ಗ್ರಾಮದ ಸದ್ಭಕ್ತರಿಂದ ವಿಶೇಷ ಜಾತ್ರಾ ವಿವಾಹ ಕಾರ್ಯಕ್ರಮ ಜರುಗುವುದು ಎಂದು ಕ್ಷೇತ್ರದ ಧರ್ಮಾಧಿಕಾರಿ ಮಲ್ಲಿಕಾರ್ಜುನಸ್ವಾಮಿ ಕಪ್ಪತ್ತಮಠ, ಶ್ರೀಕಾಂತಸ್ವಾಮಿ ಕಪ್ಪತ್ತಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಠ್ಯ ಪುಸ್ತಕಗಳಲ್ಲಿ ವಚನ ಪ್ರಕಟಿಸಲಿ
ನರಗುಂದ: ಕಲ್ಯಾಣ ಕರ್ನಾಟಕ ಎಂದು ನಾಮಕರಣಗೊಂಡು ರಾಜ್ಯದಲ್ಲಿ ಬಸವಣ್ಣವರ ವಚನಗಳಿಂದ 12ನೇ ಶತಮಾನದಲ್ಲಿ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದ ವಚನಗಳನ್ನು ಇಂದಿನ ಆಳುವ ಸರ್ಕಾರಗಳು ಪಠ್ಯ ಪುಸ್ತಕಗಳಲ್ಲಿ ಅಳವಡಿಸದಿರುವುದು ವಿಷಾದನೀಯ ಎಂದು ಪಂಚಗೃಹಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಶ್ರಾವಣ ಮಾಸದ ನಿಮಿತ್ತ ಬಸವ ಕೇಂದ್ರ ಮತ್ತು ಮುರಘರಾಜೇಂದ್ರ ಟ್ರಸ್ಟ್ ಆಶ್ರಯದಲ್ಲಿ ನಡೆದ ಶಿಕ್ಷಣದ ವಚನಾಮೃತದ ಶ್ರಾವಣ ಮಾಸದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಈ ಸಮಾಜದಲ್ಲಿ ಎಲ್ಲ ಜಾತಿ ಮತ್ತು ಧರ್ಮಗಳು ಸಮಾನವೆಂದು ವಿಶ್ವಗುರು ಬಸವಣ್ಣವರು ಸಾರಿದ್ದಾರೆ. ಇಂತಹ ನಾಡು ಮೊದಲು ಕಲ್ಯಾಣ ನಾಡೆಂದು ನಾಮಕರಣಗೊಂಡಿತ್ತು. ನಂತರ ದಿನಗಳಲ್ಲಿ ಈ ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡಿದ್ದು ಇತಿಹಾಸದಲ್ಲಿ ತಿಳಿದು ಬರುತ್ತದೆ. 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾಜದಲ್ಲಿ ಪರಿವರ್ತನೆ ತಂದ ಬಸವಣ್ಣವರ ವಚನಗಳನ್ನು ಇಂದಿಗೂ ಈ ನಾಡನ್ನಾಳುವ ಸರ್ಕಾರಗಳು ಇಂದಿನ ಯುವಪೀಳಿಗೆ ಸುಧಾರಣೆಗೆ ಪಠ್ಯ ಪುಸಕ್ತಗಳಲ್ಲಿ ರಚನೆ ಮಾಡಲಾರದ್ದು ಬಹಳ ನೋವಿನ ಸಂಗತಿ. ಸಮಾಜದ ಮಠಾಧೀಶರು ಮತ್ತು ಗುರು ಹಿರಿಯರು ಆದಷ್ಟು ಬೇಗನೆ ವಚನಗಳನ್ನು ಪಠ್ಯ ಪುಸಕ್ತಗಳಲ್ಲಿ ರಚಿಸಲು ಸರ್ಕಾರಕ್ಕೆ ಆಗ್ರಹಿಸಲು ಮುಂದಾಗಬೇಕು ಎಂದರು. ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಮಾತನಾಡಿದರು.
ಟಿ.ಆರ್. ಉಳ್ಳಾಗಡ್ಡಿ, ಬಿ.ವೈ. ಕಲ್ಲನಗೌಡ್ರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಬಸವ ಕೇಂದ್ರದ ಅಧ್ಯಕ್ಷ ಸಿ.ಎಚ್. ಕೋರಿ, ಸಮನ್ವಯ ಅಧಿಕಾರಿ ಪಿ.ಎಫ್. ಸೋಲಾಪುರಿ, ಚನ್ನಬಸಪ್ಪ ಕಂಠಿ, ತಾಪಂ ಸದಸ್ಯ ವಿ.ಎನ್. ಕೊಳ್ಳಿಯವರ ಮುಂತಾದವರು ಉಪಸ್ಥಿತರಿದ್ದರು. ಶಾಂತಕುಮಾರು ಭಜಂತ್ರಿ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

