ಗದಗ

ಸುದ್ದಿ ಸಂಕ್ಷೇಪ

Published On :

ಇಂದಿನಿಂದ ಕಾಶೀ ವಿಶ್ವನಾಥ ಜಾತ್ರೆ
ಗದಗ:  ಸ್ಥಳೀಯ ಕಾಶೀ ವಿಶ್ವನಾಥ ನಗರದ ಕಾಶೀ ವಿಶ್ವನಾಥನ ಜಾತ್ರೆ, ದುರ್ಗಾದೇವಿಗೆ ಉಡಿ ತುಂಬುವ, ಉಚಿತ ಸಾಮೂಹಿಕ ವಿವಾಹ, ಧರ್ಮಸಭೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಆ. 30 ಹಾಗೂ 31ರಂದು ನಡೆಯಲಿದೆ. ಆ. 30ರ ಬೆಳಗ್ಗೆ 5.30 ಗಂಟೆಗೆ ಕಾಶೀ ವಿಶ್ವನಾಥನಿಗೆ ಅಭಿಷೇಕ, ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 12.30 ಗಂಟೆಗೆ 21ನೇ ವರ್ಷದ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ನಡೆಯಲಿದೆ. ಸಾನ್ನಿಧ್ಯವನ್ನು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ವಹಿಸುವರು. ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಅಧ್ಯಕ್ಷ ಬಸಪ್ಪ ಇಂಗಳೇಶ್ವರ ವಹಿಸುವರು. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಶಹರ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ಬಳಗಾನೂರ, ಪರಪ್ಪ ಉಮಚಗಿ, ಮಂಜುನಾಥ ಹಳ್ಳಿಕೇರಿ, ವಿದ್ಯಾಧರ ದೊಡ್ಡಮನಿ, ಪ್ರಕಾಶ ಅಂಗಡಿ, ವಿರೂಪಾಕ್ಷಪ್ಪ ರಾಮಗಿರಿ ಆಗಮಿಸುವರು. ಅತಿಥಿಗಳಾಗಿ ದೊಡ್ಡಬಸಪ್ಪ ಅಂಗಡಿ, ಪ್ರಭಣ್ಣ ಅಣ್ಣಿಗೇರಿ, ಮಮ್ಮುಸಾಬ ಕುಮನೂರ, ದುಂಡಪ್ಪ ಆಸಂಗಿ, ಶಾಂತಪ್ಪ ಮುಳವಾಡ, ನಗರಸಭೆ ಸದಸ್ಯ ಬಿ.ಬಿ. ಅಸೂಟಿ, ಜ್ಯೋತಿ ಇರಾಳ, ಅನಿಲ ಗರಗ, ದೇವಪ್ಪ ಮಳಗಿ, ಭರತ ಇರಾಳ, ರಮೇಶ ಅಣ್ಣಿಗೇರಿ, ಎಫ್.ಎಚ್. ಗೌಡರ, ಅಶೋಕ ಗಡಾದ, ಶೇಖಪ್ಪ ಮುಳವಾಡ, ಚನ್ನವೀರಪ್ಪ ಮಳಗಿ, ಶಾಂತಪ್ಪ ಅಕ್ಕಿ, ಬಸವಂತಗೌಡ ಕಡಬಲಕಟ್ಟಿ, ಪಾಲಾಕ್ಷಗೌಡ ಪಾಟೀಲ ಆಗಮಿಸುವರು. ನಂತರ ನಡೆಯುವ ಅನ್ನಸಂತರ್ಪಣೆಗೆ ಕಲ್ಲಯ್ಯಜ್ಜನವರು ಚಾಲನೆ ನೀಡುವರು. ಸಂಜೆ 6 ಗಂಟೆಗೆ ಕಾಶೀ ವಿಶ್ವನಾಥನ ಮಹಾರಥೋತ್ಸವ ಜರುಗಲಿದೆ. ಆ. 31 ರಂದು ಬೆಳಗ್ಗೆ 9 ಗಂಟೆಗೆ ಸ್ಲೋ ಸೈಕ್ಲಿಂಗ್ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳು ಜರುಗುವವು, ಸಂಜೆ 4 ಗಂಟೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ನಡೆಯಲಿದೆ. ಸಂಜೆ 6 ಗಂಟೆಗೆ ಸನ್ಮಾನ ಹಾಗೂ ಪಾರಿತೋಷಕ ವಿತರಣಾ ಸಮಾರಂಭ ನಡೆಯಲಿದ್ದು, ಸಾನ್ನಿಧ್ಯವನ್ನು ಹರ್ಲಾಪುರದ ಶ್ರೀಗುರು ಕೊಟ್ಟೂರೇಶ್ವರ ದೇವರು ವಹಿಸುವರು. ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಅಧ್ಯಕ್ಷ ಬಸಪ್ಪ ಇಂಗಳೇಶ್ವರ ವಹಿಸುವರು. ಅತಿಥಿಗಳಾಗಿ ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ವಿಜಯಕುಮಾರ ಗಡ್ಡಿ, ರಾಜಣ್ಣ ಶಿರೂರ, ಆರ್.ಎಫ್. ದೇಸಾಯಿ, ಮಧುಸೂಧನ ಪುಣೇಕರ, ಅನಂತ ಕಾರ್ಕಳ, ಸಂಗಣ್ಣ ಲಕ್ಕುಂಡಿ, ಎ. ವೀರಪ್ಪ, ವಿರೂಪಾಕ್ಷಪ್ಪ ರಾಮಗಿರಿ, ಕವಿತಾ ದಂಡಿನ, ಸುನಂದಾ ಮಾಳೆಕೊಪ್ಪಮಠ, ಜ್ಯೋತಿ ಇರಾಳ, ಬಿ.ಬಿ. ಅಸೂಟಿ, ಅನಿಲ ಗರಗ, ದೊಡ್ಡಬಸಪ್ಪ ಅಂಗಡಿ, ಪ್ರಭಣ್ಣ ಅಣ್ಣಿಗೇರಿ ಮುಂತಾದವರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ವಿಶ್ವನಾಥ ಬುಳ್ಳಾ, ಎಂ.ಐ. ಅಬ್ಬಿಗೇರಿ, ಸಂಗಪ್ಪ ಲೇಬಗೇರಿ, ಚನ್ನಬಸಪ್ಪ ಅಕ್ಕಿ, ಪರಶುರಾಮ ನಾಯ್ಕರ, ವೀರಣ್ಣ ಕುರಡಗಿ, ಪರಪ್ಪ ಗುಡಿಸಾಗರ, ಜಂದಿಸಾಬ ಬಳ್ಳಾರಿ ಅಲ್ಲದೇ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ ಎಂದು ಜಾತ್ರಾ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ಗಜಾನನೋತ್ಸವ ಮಹಾ ಮಂಡಳದ ಸಭೆ
ಗದಗ:  ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಗದಗ-ಬೆಟಗೇರಿ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಆ. 30ರ ಸಂಜೆ 4.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ವಾಸಣ್ಣ ಹೆಬಸೂರ ವಹಿಸುವರು. ಅತಿಥಿಗಳಾಗಿ ಬಸಣ್ಣ ಮಲ್ಲಾಡದ ಭಾಗವಹಿಸುವರು. ಗದಗ-ಬೆಟಗೇರಿ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಗುವ ಎಲ್ಲ ಗಜಾನನ ಮಂಡಳಿಗಳ ಪದಾಧಿಕಾರಿಗಳು ಹಾಗೂ ನಗರದ ಗಣ್ಯಮಾನ್ಯರು ಈ ಸಭೆಯಲ್ಲಿ ಭಾಗವಹಿಸಿ ನೂತನ ಪದಾಧಿಕಾರಿಗಳ ಆಯ್ಕೆಗೆ ಸಹಕರಿಸಬೇಕು ಎಂದು ಮಹಾಮಂಡಳದ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಕಾರ್ಯಾಧ್ಯಕ್ಷ ಶಿವಣ್ಣ ಮುಳಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉರ್ದು ಪ್ರಶ್ನೆ ಪತ್ರಿಕೆ ಲಭ್ಯ
ಗದಗ:  2013-14ನೇ ಸಾಲಿನಲ್ಲಿ ಸರ್ವ ಶಿಕ್ಷಣ ಕಾರ್ಯಕ್ರಮದಡಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 6 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳ ಒಲಂಪಿಯಾಡ್ ಪರೀಕ್ಷೆಗಳನ್ನು ನಡೆಸುವ ಕುರಿತು ಈಗಾಗಲೇ ಕನ್ನಡ ಮಾಧ್ಯಮದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿತ್ತು. ಈಗ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಉರ್ದು ಮಾಧ್ಯಮದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಇವರಿಗೆ ಕಳುಹಿಸಿ ಕೊಡಲಾಗಿದ್ದು, ಸಂಬಂಧಿಸಿದ ಉರ್ದು ಶಾಲಾ ಮುಖ್ಯಸ್ಥರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಇಒ, ಬಿ.ಆರ್.ಸಿ.ಗಳಿಂದ ಪಡೆದು ಶಾಲಾ ಹಂತದಲ್ಲಿ ಪ್ರಶ್ನೆ ಪತ್ರಿಗಳನ್ನು ಸಿದ್ಧಪಡಿಸಿ ಆ. 31 ರಂದು ವೇಳಾ ಪಟ್ಟಿಯ ಪ್ರಕಾರ ಪರೀಕ್ಷೆಗಳನ್ನು ನಡೆಸುವಂತೆ ಡಯಟ್ ಪ್ರಾಚಾರ್ಯ ಬಿ.ಎಸ್. ರಘುವೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.