ಪ್ರೌಢಶಾಲೆಯ ಕ್ರೀಡಾಸಾಧನೆ
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ 2013-14ನೇ ಸಾಲಿನ ಡಂಬಳ ಗ್ರುಪ್ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಮೇವುಂಡಿಯ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅಮೋಘ ಕ್ರೀಡಾ ಸಾಧನೆ ಮಾಡಿದ್ದಾರೆ ಎಂದು ಮುಖ್ಯೋಪಾಧ್ಯಾಯ ಶರಣು ಗೋಗೇರಿ ತಿಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ 800 ಮೀ. ಓಟದಲ್ಲಿ ಹಾಗೂ 1500 ಮೀ. ಓಟದಲ್ಲಿ ಯಶೋದಾ ಕಮತರ ಪ್ರಥಮ ಸ್ಥಾನ, 400 ಮೀ. ಓಟದಲ್ಲಿ ಶ್ವೇತಾ ಕೊರ್ಲಹಳ್ಳಿ ಪ್ರಥಮ, 800 ಮೀ. ಓಟದಲ್ಲಿ ಯಶೋದಾ ಕಮತದ ದ್ವಿತೀಯ, 1500 ಮೀ. ಓಟದಲ್ಲಿ ಗೀತಾ ಆಲೂರ ದ್ವಿತೀಯ, ಉದ್ದ ಜಿಗಿತದಲ್ಲಿ ಶ್ವೇತಾ ಕೊರ್ಲಹಳ್ಳಿ ದ್ವಿತೀಯ, 200 ಮೀ. ಓಟದಲ್ಲಿ ಈರಮ್ಮ ಮಣ್ಣೂರ ತೃತಿಯ ಸ್ಥಾನ ಗಳಿಸಿದ್ದಾರೆ. ಬಾಲಕರ ವಿಭಾಗದಲ್ಲಿ 400 ಮೀ. ಓಟದಲ್ಲಿ ಸೋಮಪ್ಪ ತಾಮರಗುಂಡಿ ಪ್ರಥಮ, 3 ಸಾವಿರ ಮೀ. ಓಟದಲ್ಲಿ ಮೇಲಪ್ಪ ನೋಟಗಾರ ದ್ವಿತೀಯ ಸ್ಥಾನ, 1500 ಮೀ. ಓಟದಲ್ಲಿ ಮಾಹಾಂತೇಶ ನೋಟಗಾರ ದ್ವೀತಿಯ ಸ್ಥಾನ ಹಾಗೂ 200 ಮೀ. ಓಟದಲ್ಲಿ ಸೋಮಪ್ಪ ತಾಮರಗುಂಡಿ ತೃತಿಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಶಾಸಕ ಜಿ.ಎಸ್. ಪಾಟೀಲ, ತಾಪಂ ಉಪಾಧ್ಯಕ್ಷೆ ಅಕ್ಕಮಾದೇವಿ ಹಾರೋಗೇರಿ, ಗ್ರಾಪಂ ಅಧ್ಯಕ್ಷ ಹಾಲನಗೌಡ ಅಮರಗೋಳ, ಮುಖ್ಯೋಪಾಧ್ಯಾಯ ಶರಣು ಗೋಗೇರಿ. ದೈಹಿಕ ಶಿಕ್ಷಕ ಎಲ್.ಎಚ್. ಎಣ್ಣಿ, ಗ್ರಾಪಂ ಸದಸ್ಯರು, ಎಸ್ಡಿಎಂಸಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

