ಸುದ್ದಿ ಸಂಕ್ಷೇಪ
ಇಂದು ಕಾರ್ಯಾಗಾರ
ಲಕ್ಷ್ಮೇಶ್ವರ: ಪಟ್ಟಣದ ಕಮಲಾ ಮತ್ತು ವೆಂಕಪ್ಪ ಅಗಡಿ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಆ. 31 ಮತ್ತು ಸೆ. 1 ರಂದು 2 ದಿನಗಳ ರಾಷ್ಟ್ರೀಯ ಮಟ್ಟದ ಲೇಟೆಕ್ಸ್ ಮತ್ತು ಉಪಯೋಗಗಳು ಕಾರ್ಯಾಗಾರ ನಡೆಯಲಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಚಾಪಗಾಂವ ಹೇಳಿದರು. ಅವರು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತರಬೇತಿಯನ್ನು ಹೈದ್ರಾಬಾದ್ನ ಡೆಕ್ಕನ್ ಎಂಜನಿಯರಿಂಗ್ ಕಾಲೇಜಿನ ಡಾ. ಲಾಯಕ್ಅಲಿ ನೀಡಲಿದ್ದು, ವಿವಿಧ ಕಾಲೇಜುಗಳಿಂದ 100ಕ್ಕೂ ಹೆಚ್ಚು ಉಪನ್ಯಾಸಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಾಗಾರವು ಪಿಎಚ್ಡಿ ಅಧ್ಯಯನ ಕೈಗೊಂಡವರಿಗೆ ತುಂಬಾ ಉಪಯುಕ್ತವಾಗಿದೆ ಎಂದರು. ಡಾ. ಎಸ್.ವಿ. ಗೋರಬಾಳ, ಡಾ. ಎನ್. ಹಯವದನ, ಡಾ. ಪಿ.ಜಿ. ಪಾಟೀಲ, ಪ್ರೊ. ಕೃಷ್ಣಾ ದೇಶಪಾಂಡೆ, ಸಂತೋಷ ಬುಜರಿ ಮುಂತಾದವರು ಇದ್ದರು.
ಇಂದು ಶ್ರಾವಣ ಸಂಜೆ ಸಂಗೀತ ಕಾರ್ಯಕ್ರಮ
ಲಕ್ಷ್ಮೇಶ್ವರ: ಪಟ್ಟಣದ ಶ್ರಾವಣ ಸಂಜೆ ಸಂಗೀತ ಸೇವಾ ಸಮಿತಿ ಹಾಗೂ ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಆಶ್ರಯದಲ್ಲಿ ಹಾರ್ಮೋನಿಯಂ ವಾದಕರಾಗಿದ್ದ ಕುಂದಗೋಳದ ದಿ. ಶಿವಣ್ಣ ಸಂಶೀಕರ(ಮಾಸ್ತರ) ಇವರ ಸ್ವರ ಶ್ರದ್ಧಾಂಜಲಿ ಅಂಗವಾಗಿ ಆ. 31 ರಂದು ಸಂಜೆ 6 ಗಂಟೆಗೆ ಶಂಕರಭಾರತಿಮಠದ ಆವರಣದಲ್ಲಿ ಸಂಗೀತೋತ್ಸವ ಕಾರ್ಯಕ್ರಮ ಜರುಗಲಿದೆ. ಅಧ್ಯಕ್ಷತೆಯನ್ನು ಡಾ. ಎಸ್.ಬಿ. ಜವಾಯಿ ವಹಿಸುವರು. ಉದ್ಘಾಟನೆಯನ್ನು ಶಾಸಕ ರಾಮಕೃಷ್ಣ ದೊಡ್ಡಮನಿ ನೆರವೇರಿಸುವರು. ಅತಿಥಿಗಳಾಗಿ ಕುಂದಗೋಳದ ಗುರುವರ್ಯ ಸವಾಯಿ ಗಂಧರ್ವ ವಿಶ್ವಸ್ಥ ಸಮಿತಿಯ ಉಪಾಧ್ಯಕ್ಷ ಈಶ್ವರಯ್ಯ ನಾವಳ್ಳಿಮಠ, ಸದಸ್ಯ ಅರವಿಂದ ಕಟಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ, ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ನಾಗರಾಜ ಕುಲಕರ್ಣಿ, ಟಾಕಪ್ಪ ಸಂಶಿಕರ, ಸಮಿತಿಯ ನಿರ್ದೇಶಕ ವಿ.ಎಲ್. ಪೂಜಾರ, ಡಾ. ವೈ.ಎಫ್. ಹಂಜಿ, ನರಸಿಂಹಾಚಾರ್ಯ ಹೊಂಬಳ, ವಿಜಯ ವಾರದ, ಚಂದ್ರಣ್ಣ ಮಹಾಂತಶೆಟ್ಟರ, ಬಸವರಾಜ ಬಾಳೇಶ್ವರಮಠ, ಪ್ರಕಾಶ ಮ್ಯಾಗೇರಿ, ಬಿ.ಟಿ. ಶಿವಳ್ಳಿ ಆಗಮಿಸಲಿದ್ದಾರೆ. ಹಿರಿಯ ಸಂಗೀತ ಕಲಾವಿದ ಪಂ.ಡಿ. ಕುಮಾರದಾಸ ಮತ್ತು ಹಿರಿಯ ರಂಗ ಕಲಾವಿದ ಡಿ. ಬಸವರಾಜ ತಿರ್ಲಾಪುರ ಇವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದ ಪಂ.ಡಿ. ಕುಮಾರದಾಸ, ಯುವ ಕಲಾವಿದ ಕೃಷ್ಣೇಂದ್ರ ವಾಡೇಕರ, ಶ್ರೀಕಾಂತ ಬಾಕಳೆ ಮತ್ತು ಕೊಳಲುವಾದಕ ಹುಬ್ಬಳ್ಳಿಯ ಹರೀಶ ಕುಲಕರ್ಣಿ ಅವರಿಂದ ಕೊಳಲುವಾದನ, ಅಲ್ಲದೆ ಯುವ ಗಾಯಕಿ ಶ್ರೇಯಾ ಕುಲಕರ್ಣಿ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬೆಳಗಾವಿಯ ಹಾರ್ಮೋನಿಯಂ ವಾದಕ ವಾಮನ್ ವಾಗೂಕರ್ ಮತ್ತು ಗದಗದ ಶರಣಕುಮಾರ ಅವರ ಹಾರ್ಮೋನಿಯಂ ವಾದನ, ಗದಗ ಪಂ. ಪುಟ್ಟರಾಜ ಗವಾಯಿಗಳ ಸಂಗೀತ ಶಾಲೆಯ ಉಪನ್ಯಾಸಕ ಪ್ರೊ. ಹನುಮಂತ ಕೊಡಗಾನೂರ ಹಾಗೂ ಲಕ್ಷ್ಮೇಶ್ವರದ ಮಾವಳೇಶ ಕಡ್ಡಿಪೂಜಾರ ತಬಲಾ ಸಾಥ್ ನೀಡಲಿದ್ದಾರೆ ಎಂದು ಸಮಿತಿಯ ಉಪಾಧ್ಯಕ್ಷ ಸತೀಶ ಮಾಂಡ್ರೆ ಹಾಗೂ ಕಾರ್ಯದರ್ಶಿ ಕಿರಣ ನಾಯಕ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

