ಸುದ್ದಿ ಸಂಕ್ಷೇಪ
ಅರ್ಜಿ ಆಹ್ವಾನ
ಗದಗ: ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿ ಸಕಾಲ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಹಾಯ ಕೇಂದ್ರ ನಿರ್ವಹಿಸಲು ಅರ್ಹತೆಯುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಕನಿಷ್ಠ ಪದವೀಧರರಾಗಿರಬೇಕು ಹಾಗೂ ಗಣಕಯಂತ್ರದಲ್ಲಿ ವ್ಯವಹರಿಸುವ ಪರಿಣಿತಿ ಹೊಂದಿರಬೇಕು. ಅಭ್ಯರ್ಥಿಗಳು ತಮ್ಮದೇ ಲ್ಯಾಪ್ಟಾಪ್, ಡಾಟಾ ಕಾರ್ಡ್, ಪ್ರಿಂಟರ್, ಯುಪಿಎಸ್ ಹಾಗೂ ಸ್ಕ್ಯಾನರ್ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರು. 10 ಸಾವಿರ ಗೌರವಧನವನ್ನು 6 ತಿಂಗಳವರೆಗೆ ಮಾತ್ರ ನೀಡಲಾಗುವುದು. ಆ ನಂತರ ಆನ್ಲೈನ್ ಸೇವೆಗಳನ್ನು ನೀಡಿ ಸೇವಾ ಶುಲ್ಕ ಪಡೆದು ಸಹಾಯ ಕೇಂದ್ರಗಳನ್ನು ನಿರ್ವಹಿಸುವುದು. ಅರ್ಜಿಗಳನ್ನು ಸಲ್ಲಿಸಲು ಸೆ. 10 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕಚೇರಿಯ ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕ ಪ್ರಶಾಂತ ಚಿಕ್ಕನಾಳ (ದೂ. 8147853440) ಹಾಗೂ ಇಮೇಲ್ ಡಛ್ಞಛಟಛ್ಜಜ್ಜಅ್ಜಟಛ್ಝಟ.್ಛ್ಟಟ ಸಂಪರ್ಕಿಸಬೇಕೆಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಣಕಾಸು, ವಾಣಿಜ್ಯ ಕ್ಷೇತ್ರಕ್ಕೆ ಕಂಪ್ಯೂಟರ್ ಅವಶ್ಯ
ಗಜೇಂದ್ರಗಡ: ಹಣಕಾಸು, ವಾಣಿಜ್ಯ ಕ್ಷೇತ್ರದಲ್ಲಿ ಕಂಪ್ಯೂಟರ್ ಅವಶ್ಯ ಈ ನಿಟ್ಟಿನಲ್ಲಿ ಹಣಕಾಸು ಸಂಸ್ಥೆ ಸೇರಿದಂತೆ ಪ್ರತಿ ಉದ್ಯಮಕ್ಕೆ ಗಣಕಯಂತ್ರ ಅಳವಡಿಸುವುದು ಸೂಕ್ತ ಎಂದು ಸ್ವಾತಂತ್ರ್ಯ ಹೋರಾಟಗಾರ ವೆಂಕೂಸಾ ಭಾಂಡಗೆ ಹೇಳಿದರು. ಅವರು ಈಚೆಗೆ ಸ್ಥಳೀಯ ಜಗದಂಬಾ ಕೋ ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಗಣಕಯಂತ್ರ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದರು. ಕಂಪ್ಯೂಟರ್ ಸಾಧನ ಅಳವಡಿಕೆಯಿಂದ ಶೀಘ್ರ ವ್ಯವಹಾರ ನಡೆಸುವ ಜತೆಗೆ ಗ್ರಾಹಕರಿಗೆ ತೀವ್ರಗತಿಯಲ್ಲಿ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ ಎಂದರು. ಕಂಪ್ಯೂಟರ್ ದೇಣಿಗೆ ನೀಡಿದ ಜಗದಂಬಾ ಕೋ ಆಪ್ ಕ್ರೆಡಿಟ್ ಸೊಸೈಟಿ ಚೇರ್ಮನ್ ವಿಶ್ವನಾಥಸಾ ಮೇಘರಾಜ ಮಾತನಾಡಿ, ಹಣಕಾಸು ಸಂಸ್ಥೆಯ ಪ್ರಗತಿಯಲ್ಲಿ ಗ್ರಾಹಕ ಪಾತ್ರ ಪ್ರಾಮುಖ್ಯವಾದದ್ದು, ಅವಶ್ಯಕತೆಗೆ ಅನುಗುಣವಾಗಿ ಸಾಲ ಪಡೆದು ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡಿದಲ್ಲಿ ಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಮಂಜುನಾಥ ಮ್ಯಾಕಲ, ಕಳಕೂಸಾ ರಾಜೊಳ್ಳಿ ಅವರು ಸೊಸೈಟಿಗೆ ನಿತ್ಯ ಉಪಯೋಗಿ ವಸ್ತುಗಳನ್ನು ದೇಣಿಗೆ ನೀಡಿದರು. ಸೊಸೈಟಿ ಉಪಾಧ್ಯಕ್ಷ ಕುಬೇಂದ್ರಸಾ ಬಾಂಡಗೆ, ನಿರ್ದೇಶಕ ಸುರೇಂದ್ರಸಾ ರಾಯಬಾಗಿ, ಗಣಪತಸಾ ಪವಾರ, ಎನ್.ಎಸ್. ಇಂಡಿ, ಸಿ.ಡಿ. ಬಾಕಳೆ, ಕಾರ್ಯದರ್ಶಿ ಬಿ.ಎ. ಶಿಂಗ್ರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

