ಗದಗ

ವಿವಿಗೆ ಟಿಪ್ಪು ಹೆಸರಿಡಿ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 4
ಕೇಂದ್ರ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ಮೈಸೂರು ಹುಲಿ, ಟಿಪ್ಪುಸುಲ್ತಾನ್ ಹೆಸರಿಡಬೇಕೆಂದು ಆಗ್ರಹಿಸಿ ಸ್ಥಳೀಯ ಕಾಂಗ್ರೆಸ್, ಜೆಡಿಎಸ್, ಸಿಪಿಐ(ಎಂ), ಕೆಜೆಪಿ, ಡಿವೈಎಫ್‌ಐ, ಎಸ್‌ಎಫ್‌ಐ, ಬಸವಕೇಂದ್ರ, ಡಿಎಸ್‌ಎಸ್, ಕರವೇ, ಜಯ ಕರ್ನಾಟಕ ಹಾಗೂ ಟಿಪ್ಪುಸುಲ್ತಾನ ನೌಜವಾನ ಕಮಿಟಿ ಸಂಘಟನೆಯ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹೇಮಗಿರೀಶ ಹಾವಿನಾಳ ಮಾತನಾಡಿ, ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಗಾಗಿ ನಿಸ್ವಾರ್ಥದಿಂದ ಹೋರಾಡಿ, ರಾಷ್ಟ್ರಪ್ರೇಮ ಮೆರೆದ ಟಿಪ್ಪು ಸುಲ್ತಾನರ ನಾಡ ಪ್ರೇಮ ಅನನ್ಯವಾದದ್ದು, ಇಂತಹ ರಾಷ್ಟ್ರಪ್ರೇಮಿಯ ಹೆಸರನ್ನು ವಿದ್ಯಾದೇಗುಲಕ್ಕೆ ಇಡುವ ಮೂಲಕ ಯುವ ಪೀಳಿಗೆಗೆ ಟಿಪ್ಪುವಿನ ನೆನಪು ಉಳಿಯುವಂತೆ ಮಾಡುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಸಿಪಿಐಎಂ ಮುಖಂಡ ಎಂ.ಎಸ್. ಹಡಪದ ಮಾತನಾಡಿ, ಟಿಪ್ಪು ಸುಲ್ತಾನನ ಆಡಳಿತ ಹಾಗೂ ಆತನಲ್ಲಿರುವ ಜಾತ್ಯತೀತ ಮನೋಭಾವನೆಯ ಚಿಂತನೆಯನ್ನು ಬಿಜೆಪಿ ಮತ್ತು ಸಂಘ ಪರಿವಾರದವರು, ಸಾಹಿತಿ ಎಂ. ಚಿದಾನಂದ ಮೂರ್ತಿಯವರಿಂದ ಇತಿಹಾಸ ತಿರುಚಿ ಹೇಳಿಸುತ್ತಿರುವುದು ಖಂಡನೀಯ. ಟಿಪ್ಪು ತನ್ನ ಮಂತ್ರಿ ಮಂಡಲದಲ್ಲಿ ಸರ್ವ ಜನಾಂಗದವರಿಗೂ ಆದ್ಯತೆ ನೀಡಿ, ತಾನೊಬ್ಬ ಜಾತ್ಯತೀತವಾದಿ ಎಂಬುದಕ್ಕೆ ವಾಸ್ತು ಶಿಲ್ಪ ಹಾಗೂ ಶೃಂಗೇರಿಯ ಶ್ರೀಮಠವೇ ಸಾಕ್ಷಿ. ಕೂಡಲೇ ರಾಜ್ಯ ಸರ್ಕಾರ ವಿಶ್ವ ವಿದ್ಯಾಲಯ ಸ್ಥಾಪನೆಗೆ ಅಗತ್ಯ ಜಮೀನು ನೀಡಿ, ಮೈಸೂರ ಹುಲಿ ಟಿಪ್ಪು ಸುಲ್ತಾನ ಹೆಸರಿನಲ್ಲಿ ವಿವಿ ಸ್ಥಾಪಿಸಲು ಸಹಕರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದರು.
ಶರಣಬಸವ ಮೆಣಸಿನಕಾಯಿ, ಎಚ್.ಎಸ್. ಸೋಂಪುರ, ಮಲ್ಲಿಕಾರ್ಜುನ ಬೂದಿಹಾಳ, ಸುಬಾನಸಾಬ್ ಆರಗಿದ್ದಿ, ಉಮೇಶ ರಾಠೋಡ ಮಾತನಾಡಿದರು. ಬಳಿಕ ಪ್ರತಿಭಟನಾ ಸ್ಥಳಕ್ಕಾಗಮಿಸಿದ ವಿಶೇಷ ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಡಿ.ಬಿ. ವಣಗೇರಿ, ಮುರ್ಜುಜಾ ಡಾಲಾಯತ್, ಬಾಲು ರಾಠೋಡ, ಹಸನ ತಟಗಾರ, ಕೆ.ಎಸ್. ಕೊಡತಗೇರಿ, ಮಕ್ತುಂಸಾಬ ಸಾಗರ, ರಾಮಣ್ಣ ಸಕ್ರೋಜಿ, ಮಂಜುನಾಥ ವಿಶ್ವಬ್ರಾಹ್ಮಣ, ಬಸವರಾಜ ಕೊಟಗಿ, ಫಯಾಜ ತೋಟದ, ಬಿ.ಎಸ್. ಶೀಲವಂತರ, ಮಾರುತಿ ಚಿಟಗಿ, ಪೀರು ರಾಠೋಡ, ಉಮೇಶ ಮಲ್ಲಾಪುರ, ಬಸವರಾಜ ಹೂಗಾರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.