ಗದಗ

ಅಸಮರ್ಪಕ ನೀರು ಪೂರೈಕೆ: ಧರಣಿ

Published On :

ಕೊಪ್ಪಳ: ಕಳೆದ ಮೂರ್ನಾಲ್ಕು ತಿಂಗಳಿನಿಂದ ನೇಲಗಿಪುರದಿಂದ ನೂತನವಾಗಿ ಪ್ರಾರಂಭವಾಗಿದ್ದ ರಾಜೀವ್ ಗಾಂಧಿ ಸಬ್‌ಮಿಷನ್ ಕುಡಿಯುವ ನೀರು ಯೋಜನೆಯಿಂದ ಅಸಮರ್ಪಕ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಒಳಪಡುವ ಸುಮಾರು ಹತ್ತಾರು ಗ್ರಾಪಂ ವ್ಯಾಪ್ತಿಯ ಜನರಿಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ನೀರಿಲ್ಲ ಎಂದು 9 ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮಂಗಳವಾರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಪಕಾರ್ಯದರ್ಶಿ ಮಕ್ಕಣ್ಣ ಕರಿಗಾರ್ ಅವರಿಗೆ  ಮನವಿ ಸಲ್ಲಿಸಿದರು.
ಎರಡು ವರ್ಷದಿಂದ ಜಿಲ್ಲೆಯ ಜನತೆ ತೀರ್ವ ಬರ ಎದುರಿಸುತ್ತಿದ್ದಾರೆ. ಇದರಿಂದ ಅಂತರ್ಜಲ ಬತ್ತಿಹೋಗಿ ಸಮರ್ಪಕವಾಗಿ ಕುಡಿಯುವ ನೀರು ದೊರೆಯುತ್ತಿಲ್ಲ. ಜನತೆ ಜೀವನ ಅಸ್ತವ್ಯವಸ್ಥವಾಗುತ್ತಿದ್ದು, ಈಗಾಗಲೇ ಯಲಬುರ್ಗಾ ತಾಲೂಕಿನ ರಾಜೀವ್ ಗಾಂಧಿ ಸಬ್‌ಮಿಷನ್ ಯೋಜನೆಯಡಿ ಕುಡಿಯುವ ನೀರು ಯೋಜನೆ ಜಾರಿಗೆ ತರಲಾಗಿದೆ. ಆದರೆ ಅದು ಸಮರ್ಪಕವಾಗಿ ಸದ್ಬಳಕೆಯಾಗುತ್ತಿಲ್ಲ ಎಂದು ಗ್ರಾಪಂ ಅಧ್ಯಕ್ಷರು ಆರೋಪ ಮಾಡಿದರು.
ಗಮನ ಹರಿಸುತ್ತಿಲ್ಲ: ಗ್ರಾಮಕ್ಕೆ ಸರಿಯಾಗಿ ನೀರು ಪೂರೈಕೆ ಮಾಡದಿದ್ದಕ್ಕೆ ಗ್ರಾಮಸ್ಥರು ಗ್ರಾಪಂಗೆ ಮುತ್ತಿಗೆ, ಪ್ರತಿಭಟನೆಯಂತಹ ಅನೇಕ ಪ್ರಸಂಗಗಳು ಹತ್ತು ಹಲವು ಗ್ರಾಪಂಗಳಲ್ಲಿ ನಡೆದಿವೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾರು ಇತ್ತ ಗಮನಹರಿಸುತ್ತಿಲ್ಲ. ಅಧಿಕಾರಿಗಳು ತಮ್ಮ ಮನವಿಗೆ, ಮಾತಿಗೆ ಬೆಲೆ ಕೊಡುತ್ತಿಲ್ಲ ಎಂದು ಉಪಕಾರ್ಯದರ್ಶಿಗಳ ಮುಂದೆ ಗ್ರಾಪಂ ಅಧ್ಯಕ್ಷರು, ಸದಸ್ಯರು ತಮ್ಮ ಅಳಲು ತೋಡಿಕೊಂಡರಲ್ಲದೇ ಅಧಿಕಾರಿಗಳ ವಿರುದ್ಧ ನೇರ ಆರೋಪ ಮಾಡಿದರು.
ಇದಲ್ಲದೇ, ನೀರಗಂಟಿ ಸೇರಿದಂತೆ ಮತ್ತಿತರರಿಗೆ ಸರಿಯಾದ ವೇತನ ಪಾವತಿ ಮಾಡದಿದ್ದಕ್ಕೆ ನೀರಿನ ತೊಂದರೆ. ಮೋಟಾರ್ ರಿಪೇರಿ ಹಾಗೆ ಇವೆ. ಇದರಿಂದಾಗಿ ಕುಡಿಯುವ ನೀರಿನ  ಅವ್ಯವಸ್ಥೆ ಎದ್ದು ಕಾಡುತ್ತಿದೆ. ಅದರಲ್ಲಿ ಪ್ರಮುಖವಾಗಿ ಬೋಚನಳ್ಳಿ, ಅಳವಂಡಿ, ಹಟ್ಟಿ, ಕವಲೂರ, ಬನ್ನಿಕೊಪ್ಪ, ತಳಕಲ್, ಇಟಗಿ, ಮುಂಡಲಗಿರಿ, ರಾಜೂರು ಗ್ರಾಪಂ ವ್ಯಾಪ್ತಿಗೆ ಒಳಪಡುವ ಇನ್ನು ಅನೇಕ ಗ್ರಾಮಗಳು ನೀರಿನ ಸಮಸ್ಯೆಯಿಂದ ನರಳಾಡುತ್ತಿವೆ. ಈ ಬಗ್ಗೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳು ಮುಂದಾಗಬೇಕೆಂದು ಆಗ್ರಹಿಸಿದರು.
ಯಲಬುರ್ಗಾ ತಾಲೂಕಿನ 9 ಗ್ರಾಪಂ ಅಧ್ಯಕ್ಷರಾದ ಯಲ್ಲಪ್ಪ, ಡಾ. ಸಿದ್ಧಲಿಂಗಯ್ಯ ಸ್ವಾಮಿ, ತೋಟಪ್ಪ, ಮಂಜಪ್ಪ, ಅಬ್ದುಲ್, ಮಹಮದ್, ಶರಣಯ್ಯ, ಪ್ರಕಾಶಪ್ಪ, ಶರಣಪ್ಪ, ಜಯಶ್ರೀ, ಗಿರಿಜಮ್ಮ, ನಿರ್ಮಲಾ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.