ಗದಗ

ಶರಣ ಚಿಂತನಗೋಷ್ಠಿ ಪ್ರಾರಂಭ

Published On :

ಕನ್ನಡಪ್ರಭ ವಾರ್ತೆ, ಗದಗ, ಫೆ. 15
ತಾಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ಈಚೆಗೆ ಚನ್ನವೀರ ಶರಣರ 18ನೇ ಪುಣ್ಯಸ್ಮರಣೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಶರಣ ಚಿಂತನ ಗೋಷ್ಠಿ ಪ್ರಾರಂಭೋತ್ಸವ ಜರುಗಿತು.
ಉದ್ಘಾಟಿಸಿ ಸನ್ನಿಧಾನ ವಹಿಸಿ ಆಶೀರ್ವಚನ ನೀಡಿದ ಲಿಂಗನಾಯಕನಳ್ಳಿಯ ಚನ್ನವೀರ ಮಹಾಸ್ವಾಮಿಗಳು ಮಹಾತ್ಮರ ಪುರಾಣ-ಪ್ರವಚನಗಳು ಮನುಷ್ಯನ ಭವರೋಗ ಕಳೆವ ಸಂಜೀವಿನಿಗಳು ಎಂದು ತಿಳಿಸಿ, ಆ ದಿಶೆಯಲ್ಲಿ ಮನುಷ್ಯ ಮಹಾತ್ಮರ ಪ್ರವಚನಗಳನ್ನು ಆಲಿಸಿ ಜೀವನದಲ್ಲಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಕತೆ ಹೊಂದಬೇಕೆಂದರು.ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಹಾಗೂ ಶಿವಶಾಂತವೀರ ಶರಣರು ನೇತೃತ್ವ ವಹಿಸಿ ಶುಭಸಂದೇಶ ನೀಡಿದರು. ಗದಗ ಡಿಡಿಪಿಐ ರಾಜೀವ ನಾಯಕ, ನಿವೃತ್ತ ಪೊಲೀಸ್ ಅಧಿಕಾರಿ ವಿ.ಕೆ. ದಾಸರ, ವಿಷಯ ಪರಿವೀಕ್ಷಕ ಜಿ.ಡಿ. ದಾಸರ, ವಿಷಯ ಪರಿವೀಕ್ಷಕ ತಿರುಮಲೆ ಅವರನ್ನು ಸನ್ಮಾನಿಸಲಾಯಿತು. ಶಿವಾನಂದ ಮಂದಿವಾಲ ಮತ್ತು ಸಂಗಡಿಗರಿಂದ ಸಂಗೀತ ಸೇವೆ ಜರುಗಿತು. ಡಾ೤ ಶರಣಬಸವ ವೆಂಕಟಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್. ಹಳ್ಳೂರ ಸ್ವಾಗತಿಸಿದರು, ಕೆ.ಬಿ. ಕಂಬಳಿ ವಂದಿಸಿದರು, ಬಿ.ವೈ. ಡೊಳ್ಳಿನ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.