ಪರಿಸರ ಸಂರಕ್ಷಣೆ ಎಲ್ಲರ ಹೊಣೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 24
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ನಿರ್ಲಕ್ಷ್ಯವಹಿಸಿದಲ್ಲಿ ಮನುಕುಲ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ ಹೇಳಿದರು.
ಅವರು ಈಚೆಗೆ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಗರದ ಜಿಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪರಿಸರ ಕಾಳಜಿ ಅತ್ಯಾವಶ್ಯಕವಾಗಿದ್ದು, ಜಾಗತಿಕ ಮಟ್ಟದಲ್ಲಿ ಘನತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತಳಮಟ್ಟದಿಂದ ಇದರ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಪರಿಸರ ಸಂರಕ್ಷಣೆ, ಅರಣ್ಯ, ನೈರ್ಮಲ್ಯ ಕುರಿತು ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಬರಗಾಲ ಪರಿಸ್ಥಿತಿ ಎದುರಾದಾಗ ನೀರಿನ ಬಗ್ಗೆ ಚಿಂತಿಸುವ ಬದಲು ಮಳೆ ನೀರು ಸಂಗ್ರಹಣೆ, ಅಂತರ್ಜಲ ನೀರು ಬಳಕೆ ಹಾಗೂ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಹೇಳಿದರು. ತರಬೇತಿ ಅವಧಿಯಲ್ಲಿ ಪರಿಸರ ಕಾನೂನುಗಳು ಮತ್ತು ಪಾಲನೆ ಕುರಿತು ಪರಿಸರ ಅಧಿಕಾರಿ ರುದ್ರೇಶ, ಸಾವಯವ ಕೃಷಿ ಮಹತ್ವ ಕುರಿತು ವಿಷಯ ತಜ್ಞರಾದ ಸುರೇಶಗೌಡ, ಪರಿಸರ ಸಂರಕ್ಷಣೆಯಲ್ಲಿ ಅಧಿಕಾರಿಗಳ ಪಾತ್ರ ಕುರಿತು ನೀಡ್ಸ್ ಸಂಸ್ಥೆಯ ಮಾಧುರಿ ದೇವದರ್, ಇಲಾಖೆಯ ಸಹಭಾಗಿತ್ವದಲ್ಲಿ ಪರಿಸರ ಚಟುವಟಿಕೆ ಕುರಿತು ಗುಂಪು ಚಟುವಟಿಕೆಯನ್ನು ಎಂಪ್ರಿ ಸಂಸ್ಥೆಯ ಸಹ ತರಬೇತುದಾರ ಕೆ.ಪಿ. ಅರುಣಕುಮಾರಿ ಉಪನ್ಯಾಸ ನೀಡಿದರು. ಘನತ್ಯಾಜ್ಯ ನಿರ್ವಹಣೆ ಹಾಗೂ ಪ್ಲಾಸ್ಟಿಕ್ ನಿಷೇಧ, ಅಬ್ದುಲ್ ಕಲಾಂರವರ ಪರಿಸರ ಕಾಳಜಿ, ಪ್ರಸ್ತುತ ಪರಿಸರ ಹಾಗೂ ಮುಂದಿನ ಪರಿಣಾಮ ಕುರಿತು ಓಂ ಕಿರುಚಿತ್ರವನ್ನು ತರಬೇತಿ ಅವಧಿಯಲ್ಲಿ ಪ್ರದರ್ಶಿಸಲಾಯಿತು.
ಎಂಪ್ರಿ ಸಂಸ್ಥೆಯ ತರಬೇತಿ ಮುಖ್ಯಸ್ಥ ಬಸವರಾಜು ಮಾತನಾಡಿದರು. ಕೆ.ಪಿ.ಅರುಣಕುಮಾರಿ ನಿರೂಪಿಸಿ, ಸ್ವಾಗತಿಸಿದರು. ರಮೇಶ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

