ಗದಗ

ಶಿಷ್ಟಾಚಾರ ಉಲ್ಲಂಘನೆ: ಆರೋಪ

Published On :

ಲಕ್ಷ್ಮೇಶ್ವರ: ಗ್ರಾಮಸಭೆಗೆ ಗ್ರಾಪಂ ವ್ಯಾಪ್ತಿಯ ಎಲ್ಲ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸುವುದು ಶಿಷ್ಟಾಚಾರವಾಗಿದೆ. ಆದರೆ, ಬಟ್ಟೂರ ಗ್ರಾಪಂನ ಪಿಡಿಓ ಇಂತಹ ಶಿಷ್ಟಾಚಾರ ಉಲ್ಲಂಘನೆ ಮಾಡಿ ಜನಪ್ರತಿನಿಧಿಗೆ ಅವಮಾನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಬಟ್ಟೂರ ಗ್ರಾಪಂ ವ್ಯಾಪ್ತಿಯ ಗ್ರಾಮಸಭೆಯು ಜು. 16ರಂದು ಅಕ್ಕಿಗುಂದ ಗ್ರಾಮದಲ್ಲಿ ಜರುಗಬೇಕಾಗಿತ್ತು. ಅಂದು ಅಕ್ಕಿಗುಂದ ತಾಂಡಾದ ನಿವಾಸಿ, ಮಾಗಡಿ ಕ್ಷೇತ್ರದ ತಾಪಂ ಸದಸ್ಯೆ ಸುಶೀಲಾಬಾಯಿ ಲಮಾಣಿ ಸಭೆಗೆ ಆಗಮಿಸಿ, ತಾಲೂಕಿನ ಎಲ್ಲ ಅಧಿಕಾರಿಗಳಿಗೆ ಹಾಗೂ ಅಕ್ಕಿಗುಂದದ ಗ್ರಾಪಂ ಸದಸ್ಯರಿಗೆ ನೋಟಿಸ್‌ನ್ನು ಮುಟ್ಟಿಸಲು ಸಾಧ್ಯವಾಗಿದ್ದು, ನಮಗೇಕೆ ಈ ಬಗ್ಗೆ ಮಾಹಿತಿ ನೀಡಿಲ್ಲವೆಂದು ಪ್ರಶ್ನಿಸಿದಾಗ ಗ್ರಾಪಂ ಪಿಡಿಓ ಸಮರ್ಪಕ ಉತ್ತರ ನೀಡಲು ನಿರಾಕರಿಸಿದ್ದಾರೆ. ಆಗ ಗ್ರಾಮಸಭೆ ಅಷ್ಟಕ್ಕೆ ಮೊಟಕುಗೊಳಿಸಲಾಯಿತು ಎನ್ನಲಾಗಿದೆ. ಗ್ರಾಮಸಭೆಯ ನೋಟಿಸ್‌ನ್ನು ನಮಗೇಕೆ ನೀಡಲಿಲ್ಲ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ತಾಪಂ ಸದಸ್ಯೆ ಪಿಡಿಓ ಅವರನ್ನು ಕೇಳಿದಾಗ ನನಗೆ ನೋಟಿಸ್‌ನ್ನು ಮುಟ್ಟಿಸಲು ಆಗಿಲ್ಲ. ಬೇಕಾದರೆ ನಿಮಗೆ ಲಿಖಿತ ರೂಪದಲ್ಲಿ ಉತ್ತರ ಬರೆದುಕೊಡುತ್ತೇನೆ ಎಂದು ಉತ್ತರಿಸಿ ಲಿಖಿತ ಹೇಳಿಕೆ ಬರೆದಕೊಟ್ಟಿದ್ದಾರೆ. ಈ ಕುರಿತಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯು ಕ್ರಮ ಕೈಗೊಳ್ಳಬೇಕು. ಗ್ರಾಪಂ ಪಿಡಿಓ ವಿನಾಕಾರಣ ರಾಜಕಾರಣ ಮಾಡುತ್ತಿದ್ದು, ನೋಟಿಸ್ ನೀಡದೆ ಇರಲು ಬೇರೆಯವರ ಕುಮ್ಮಕ್ಕು ಇರಬಹುದು ಎನ್ನುವ ಅನುಮಾನ ಉಂಟಾಗುತ್ತಿದೆ. ಅದಕ್ಕಾಗಿ ಇಂತಹ ಪಿಡಿಓ ಮೇಲೆ ಯೋಗ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.