ಗದಗ

ನೌಕರರ ಸಂಘಕ್ಕೆ ಆಯ್ಕೆ

Published On :

ಗದಗ:  ಗದಗ ವಾರ್ತಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಟಿ.ನೇಮರಾಜ 2013-14 ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಗದಗ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಗೆ ಸಹಕರಿಸಿದ ನೌಕರ ಸಂಘದ ಅಧ್ಯಕ್ಷ ಪಿ.ಜಿ. ಗರಗ ಹಾಗೂ ಕಾರ್ಯದರ್ಶಿ ರವಿ ಗುಂಜೀಕರ, ಇಲಾಖೆಯ ಅಧಿಕಾರಿಗಳಿಗೆ ಸಿಬ್ಬಂದಿಗೆ ಅಭಿನಂದನೆ     ಸಲ್ಲಿಸಿದ್ದಾರೆ.
ಜೂಜಾಟ: ಬಂಧನ
ಗದಗ: ತಾಲೂಕಿನ ಅಂತೂರ-ಬೆಂತೂರ-ಮಲ್ಲಿಗವಾಡ ರಸ್ತೆಯಲ್ಲಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಏಳು ಜನರನ್ನು ಪೊಲೀಸರು ಬಂಧಿಸಿ, ಬಂಧಿತರಿಂದ 23060 ಹಾಗೂ 7 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಸವರಾಜ ಚನ್ನಪ್ಪ ಮಜ್ಜಿಗುಡ್ಡ, ಬೂದಪ್ಪ ಮಾದೇವಪ್ಪ ಜಿನಗಿ, ಬೂದಪ್ಪ ಬಸಪ್ಪ ಮುಳ್ಳಾಳ, ಬಸವರಾಜ ಅಂದಾನೆಪ್ಪ ಮಣಕವಾಡ, ಗೋವಿಂದರಡ್ಡಿ ತಿರುಕಪ್ಪ ಇನಾಮತಿ, ಸೋಮಪ್ಪ ಶಿವಪ್ಪ ಕನ್ನೂರ, ಮಹಾಂತಪ್ಪ ಬಸಪ್ಪ ಈಜಾಪುರ ಬಂಧಿತ ಆರೋಪಿಗಳು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: ಓರ್ವನ ಬಂಧನ
ಗದಗ: ನಗರದ ಸರ್ಕಾರಿ ನೌಕರರ ಭವನದ ಹತ್ತಿರ ಮಟ್ಕಾ ನಂಬರ್ ಬರೆದುಕೊಳ್ಳುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ದಾಸರ ಓಣಿಯ ನಿವಾಸಿ ವಸಂತ ತಿಪ್ಪಣಸಾ ಕಲಬುರ್ಗಿ ಬಂಧಿತ ವ್ಯಕ್ತಿ. ಬಂಧಿತನಿಂದ 1075 ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.