ಗದಗ

ಹಡಪದ ಅಪ್ಪಣ ಜಯಂತಿ ಆಚರಣೆ

Published On :

ಮುಳಗುಂದ: 12ನೇ ಶತಮಾನದ ಬಸವಾದಿ ಶಿವಶರಣರ ಆಪ್ತರಲ್ಲಿ ಒಬ್ಬರಾದ ಮಹಾ ಶಿವಶರಣ ಹಡಪದ ಅಪ್ಪಣನವರ ಜೀವನ, ಸಂದೇಶಗಳನ್ನು ಅಳವಡಿಸಿಕೊಳುವುದು ಅಗತ್ಯವಿದೆ ಎಂದು ಚಂದ್ರಶೇಖರಪ್ಪ ಬಡ್ನಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಕಲಾಭವನದಲ್ಲಿ ಹಡಪದ ಅಪ್ಪಣ ಸೇವಾ ಸಮಿತಿ ವತಿಯಿಂದ ಶಿವಶರಣ ಹಡಪದ ಅಪ್ಪಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ಆರ್. ಅಣ್ವೇಕರ ಮಾತನಾಡಿ, ನಿತ್ಯ ಅಧ್ಯಾತ್ಮಿಕ ಕಾರ್ಯದಲ್ಲಿ ಪಾಲ್ಗೊಳುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದು. ಆ ದಿಶೆಯಲ್ಲಿ ಅಪ್ಪಣ್ಣನವರದ ನಿಜಭಕ್ತಿ ಸಮಾಜಕ್ಕೆ ಮಾದರಿ ಎಂದರು. ದೇವು ಹಡಪದ ಮಾತನಾಡಿ, ಕ್ಷೌರಿಕ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದುವರಿಯಬೇಕಾದರೆ ಮಕ್ಕಳು ಶಿಕ್ಷಣವಂತರಾಗುವುದರ ಜತೆಗೆ ಸಮಾಜ ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಬ್ರಹ್ಮಾನಂದ ಮಠದ ನಿಂಗಾನಂದ ಶರಣರು ಸಾನ್ನಿಧ್ಯವಹಿಸಿದ್ದರು. ಬಸಪ್ಪ ಕುತ್ನಿ, ಅಯ್ಯಪ್ಪಯ್ಯ ಹಿರೇಮಠ, ಪುಟ್ಟಯ್ಯ ಓದ್ಸುಮಠ, ಮುದಕಪ್ಪ ಕುತ್ನಿ, ಸಂಗಪ್ಪ ಕ್ಷೌರದ, ರಾಮಣ್ಣ ಹಡಪದ, ಶಿವಪ್ಪ ಆನಂದರಬಾವಿ, ಅಶೋಕ ತೆಂಬದಮನಿ, ಮಾಂತಪ್ಪ ಕುತ್ನಿ, ನಾಗರಾಜ ಹಡಪದ, ರಾಮಪ್ಪ ಆನಂದರಬಾವಿ, ಲಕ್ಷ್ಮಣ ಕುತ್ನಿ, ಚಂದ್ರಶೇಖರ ಕುತ್ನಿ ಮುಂತಾದವರು ಹಾಜರಿದ್ದರು. ಡಾ. ವೈ.ಎನ್. ಗುಳಗುಂದಿ ನಿರೂಪಿಸಿದರು, ಇ.ಇ. ಹಡಪದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.