ತೆರೆದ ಮನೆ ಕಾರ್ಯಕ್ರಮ
ಮುಳಗುಂದ: ಸಮಾಜದಲ್ಲಿ ಪೋಲಿಸರು ಹಾಗೂ ಪೊಲೀಸ್ ಇಲಾಖೆ ಬಗೆಗಿನ ಭಯದ ವಾತಾವರಣವನ್ನು ದೂರಗೊಳಿಸುವುದು, ಸಾರ್ವಜನಿಕರು ಪೊಲೀಸರ ಮಧ್ಯೆ ಬಾಂಧವ್ಯ ವೃದ್ಧಿ, ಅಪರಾಧ ತಡೆಗಟ್ಟುವುದು ಹಾಗೂ ಸಾರ್ವಜನಿಕರಿಗೆ ಕಾನೂನು ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಪಟ್ಟಣದ ಎಂಕೆಬಿಎಸ್ ಶಾಲಾ ಮಕ್ಕಳಿಗಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಎಂಬ ವಿಶೇಷ ಕಾರ್ಯಕ್ರಮ ಈಚೆಗೆ ಜರುಗಿತು.
ಮಕ್ಕಳಿಗೆ ಮಾಹಿತಿ ನೀಡಿದ ಠಾಣೆಯ ಪಿಎಸ್‌ಐ ಪರಮೇಶ್ವರ ಕವಟಗಿ, ಪೊಲೀಸರು ಹಾಗೂ ಸಾರ್ವಜನಿಕರು ಉತ್ತಮ ಬಾಂಧವ್ಯ ಹೊಂದುವುದರಿಂದ ಸಮಾಜದಲ್ಲಿ ಶಾಂತಿ ವೃದ್ಧಿಸುವುದು. ಪೋಲಿಸರ ಬಗೆಗೆ ಭಯಗೊಳ್ಳುವ ಅಗತ್ಯವಿಲ್ಲ. ಪೊಲೀಸ್ ಇಲಾಖೆಯ ಮೂಲಕ ತೆರೆದ ಮನೆ ಎಂಬ ವಿನೂತನ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಮಹಿಳೆಯರ, ಮಕ್ಕಳ ಕಾನೂನುಗಳ ಬಗೆಗೆ ತಿಳಿಸುವುದು, ಸಮಾಜದಲ್ಲಿ ಮುಕ್ತ ವಾತಾವರಣ ನಿರ್ಮಿಸುವ ಉದ್ದೇಶ ಹೊಂದುವುದಾಗಿದೆ ಎಂದರು.
ಯು.ಎನ್. ಸಂಗನಾಳ ಠಾಣೆಯ ಮಾಹಿತಿ ನೀಡಿ, ಇಲಾಖೆಯಲ್ಲಿ ತನಿಖಾ ವಿಭಾಗ, ಅಪರಾಧ, ಗಣಕಯಂತ್ರ, ವಿಶೇಷ ಕರ್ತವ್ಯ, ಬರಹಗಾರರು, ಮಹಿಳಾ ಮತ್ತು ಮಕ್ಕಳ ಸಹಯವಾಣಿ ಸೇರಿದಂತೆ ಹಲವಾರು ವಿಭಾಗಗಳ ಮೂಲಕ ಸಮಾಜದಲ್ಲಿ ಶಾಂತಿಗಾಗಿ, ನೊಂದ ನಾಗರಿಕರಿಗಾಗಿ ಸೇವೆ ಸಲ್ಲಿಸುವ ವ್ಯವಸ್ಥೆಯನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಎಂ.ಎಂ. ಕೊಪ್ಪಳ, ವಿ.ಎಸ್. ಅರಳಿ, ಆರ್.ಎಫ್. ಹೊಸಮನಿ, ಎಂ.ವೈ. ಕೊಳ್ಳಿ, ಎಸ್.ವಿ. ಹಿರೇಮಠ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

